ಭಾರತದ ವಿರುದ್ಧ ಪಾಕ್ ಹೀನಾಯ ಸೋಲು; ಇಡೀ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಇಮ್ರಾನ್​ಗೆ ಪತ್ರ ಬರೆದ ಅಕ್ಮಲ್!

ನಾಯಕನಾಗಿ ಸರ್ಫರಾಜ್ ತಂತ್ರಗಾರಿಕೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ , ಬೌಲಿಂಗ್ ವಿಭಾಗವೂ ಹೀನಾಯ ಪ್ರದರ್ಶನ ನೀಡಿದೆ. ಹೀಗಾಗಿ ಇಡೀ ತಂಡದ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಾಲ್ ಪಾಕ್ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

ಪಾಕ್ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಖಾನ್.

ಪಾಕ್ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಖಾನ್.

  • News18
  • Last Updated :
  • Share this:
ಕರಾಚಿ (ಜೂನ್​.21); ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದ ವಿರುದ್ಧ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್​ ಖಾನ್​ ತಂಡದ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಮ್ರಾನ್​ ಅಕ್ಮಾಲ್ ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹಮದ್ ನಾಯಕತ್ವವನ್ನು ಪ್ರಶ್ನೆ ಮಾಡಿರುವ ಅಕ್ಮಲ್​, “ಸರ್ಫರಾಜ್​ಗೆ ಗೆಲುವಿನ ತಂತ್ರಗಾರಿಕೆಯೇ ಗೊತ್ತಿಲ್ಲ. ವಿಶ್ವಕಪ್ ಇತಿಹಾಸದಲ್ಲಿ ಪಾಕ್ ತಂಡ ಮೊದಲು ಬೌಲಿಂಗ್ ಮಾಡಿ ಗೆಲುವು ಸಾಧಿಸಿದ ಇತಿಹಾಸವೇ ಇಲ್ಲ. ಹೀಗಾಗಿ ಟಾಸ್ ಗೆದ್ದ ನಂತರ ಫೀಲ್ಡಿಂಗ್ ಬದಲು ಬ್ಯಾಟಿಂಗ್ ಆಯ್ಕೆ ಮಾಡಬೇಕಿತ್ತು.

ಇದನ್ನೂ ಓದಿ: ಭಾರತ ವಿರುದ್ಧ ಹೀನಾಯ ಸೋಲು; ತನ್ನದೆ ಹೊಸ ತಂಡಕಟ್ಟಲು ಮುಂದಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್?

ಇಂಗ್ಲೆಂಡ್​ ವಿರುದ್ಧ ಪಾಕ್ ಮೊದಲು ಬ್ಯಾಟಿಂಗ್ ಮಾಡಿ 300ಕ್ಕೂ ಹೆಚ್ಚು ರನ್ ಕಲೆ ಹಾಕಿ ಗೆಲುವು ಸಾಧಿಸಿತ್ತು. ಇದೇ ತಂತ್ರಗಾರಿಕೆಯನ್ನು ಭಾರತದ ವಿರುದ್ಧವೂ ಪ್ರಯೋಗ ಮಾಡಬೇಕಿತ್ತು. ಆದರೆ, ನಾಯಕನಾಗಿ ಸರ್ಫರಾಜ್ ತಂತ್ರಗಾರಿಕೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ , ಬೌಲಿಂಗ್ ವಿಭಾಗವೂ ಹೀನಾಯ ಪ್ರದರ್ಶನ ನೀಡಿದೆ. ಹೀಗಾಗಿ ಇಡೀ ತಂಡದ ಮೇಲೆ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ಗೆ ಪತ್ರ ಬರೆದಿರುವ ಅಕ್ಮಾಲ್, “ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​​ನ ಪೋಷಕರೂ ಆಗಿರುವ ಪ್ರಧಾನಿ ಇಮ್ರಾನ್ ಖಾನ್ ಅವರಲ್ಲಿ ನನ್ನದೊಂದು ಮನವಿ, ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ನೀಡಿದೆ. ಇವರ ಬೇಜವಾಬ್ದಾರಿ ಪ್ರದರ್ಶನದಿಂದಾಗಿ ಪಾಕ್ ಕ್ರಿಕೆಟ್​ಗೆ ನಷ್ಟವಾಗಿದೆ. ಹೀಗಾಗಿ ಇಡೀ ತಂಡದ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಜರುಗಿಸಬೇಕು.

ಇದನ್ನೂ ಓದಿ: ಭಾರತವೇ ವಿಶ್ವಕಪ್ ಗೆಲ್ಲಲಿ ಎಂದು ಆಶಿಸಿದ ಪಾಕ್ ಬೌಲರ್; ಟ್ವಿಟ್ಟರ್​ನಲ್ಲಿ ಹಿಗ್ಗಾ-ಮುಗ್ಗಾ ಥಳಿತ!

ಅಲ್ಲದೆ ಪಾಕಿಸ್ತಾನದಲ್ಲಿ ಅತ್ಯುತ್ತಮ ಕ್ರಿಕೆಟ್ ಆಟಗಾರರ ದೊಡ್ಡ ಸಂಖ್ಯೆಯೇ ಇದೆ. ಅವರನ್ನು ಪ್ರತಿಭೆಯ ಆಧಾರದಲ್ಲಿ ಆಯ್ಕೆ ಮಾಡಬೇಕು. ಆ ಮೂಲಕ ಪಾಕಿಸ್ತಾನ ಕ್ರಿಕೆಟ್​ ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕು” ಎಂದು ಮನವಿ ಮಾಡಿದ್ದಾರೆ.

ವಿಶ್ವಕಪ್​ ನ ಪ್ರಮುಖ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದ ವಿರುದ್ಧ ಸೋಲನುಭವಿಸುತ್ತಿದ್ದಂತೆ ಇಡೀ ಪಾಕ್ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ತಂಡದ ಸೋಲಿಗೆ ಆಟಗಾರರ ಮೇಲೆ ನಿರಂತರವಾಗಿ ಟೀಕಾಪ್ರಹಾರವನ್ನೇ ನಡೆಸುತ್ತಿವೆ.

ಅಲ್ಲದೆ ಮಾಜಿ ಆಟಗಾರ ಶೋಯಬ್ ಅಖ್ತರ್​ ಸೇರಿದಂತೆ ಅನೇಕ ಹಿರಿಯ ಕ್ರೀಡಾಪಟುಗಳು ಸಹ ಪಾಕ್ ತಂಡದ ವಿರುದ್ಧ ಟೀಕೆಗಳ ಸುರಿಮಳೆಗೆರೆದಿದ್ದಾರೆ. ಈ ಪಂದ್ಯದಲ್ಲಿ ಪಾಕ್ ಭಾರತದ ವಿರುದ್ಧ 89 ರನ್​ಗಳಿಂದ ಹೀನಾಯವಾಗಿ ಸೋಲನುಭವಿಸಿತ್ತು.

First published: