ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮೊದಲೇ ಕೋಪಿಷ್ಟ. ಹೀಗಿರುವಾದ ಎದುರಾಳಿ ಆಟಗಾರ ಕೊಹ್ಲಿಗೆ ಕೋಪ ಬರುವಂತೆ ಮಾಡಿದರೆ ಸುಮ್ಮನಿರುತ್ತಾರಾ. ಆ ಸೇಡು ತೀರಿಸಿಕೊಳ್ಳಲು ಕೊಹ್ಲಿ ವರ್ಷವಾದರೂ ಸರಿ ಕಾಯುತ್ತಾರೆ. ಇದು ತಿಳಿದುಬಂದಿದ್ದು ಕಳೆದ ವರ್ಷ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಟಿ-20 ಸರಣಿಯಲ್ಲಿ.
ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ವಿಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ನಡುವಣ ಮಾತಿನ ಜಪಾಪಟಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಮಟ್ಟದ ಸುದ್ದುಯಾಗಿತ್ತು. ಅಂದು ಕಿಂಗ್ ಕೊಹ್ಲಿ ಆ ರೀತಿ ನೋಟ್ಬುಕ್ ಸಂಭ್ರಮಾಚರಣೆ ಯಾಕೆ ಮಾಡಿದರೆಂದು ಹಲವರಿಗೆ ಅರ್ಥವಾಗಿರಲಿಲ್ಲ. ಬಳಿಕ ಇದರ ಹಿಂದೆ ಸೇಡಿನ ಕಥೆ ಇದೆ ಎಂಬುದು ತಿಳಿದುಬಂದಿತ್ತು.
ಯುವರಾಜ್ ಸಿಂಗ್ ವಿಶ್ವ ದಾಖಲೆ ಮೇಲೆ ಕನ್ನಡಿಗನ ಕಣ್ಣು..!
2017ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದ ವೇಳೆ ಕೆಸ್ರಿಕ್ ಕೊಹ್ಲಿಯ ವಿಕೆಟ್ ಪಡೆದು ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ದರು. 2019ರಲ್ಲಿ ವಿರಾಟ್ ಕೊಹ್ಲಿ ಅದರ ಅನುಕರಣೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದರು.
ಸದ್ಯ ಇದೇ ವಿಚಾರವಾಗಿ ಕೆಸ್ರಿಕ್ ಮಾತನಾಡಿದ್ದು, 'ಅಂದು 2107ರಲ್ಲಿ ಮೊದಲಿಗೆ ನಾನು ಕೊಹ್ಲಿ ವಿಕೆಟ್ ಪಡೆದಾಗ ನೋಟ್ಬುಕ್ ಸಂಭ್ರಮಾಚರಣೆ ಮಾಡಿದ್ದೆ. ನನಗೆ ಮತ್ತು ಪ್ರೇಕ್ಷರಿಗೆ ಇಷ್ಟವಾಗಿದ್ದ ಕಾರಣಕ್ಕೆ ನಾನು ಆ ರೀತಿ ಮಾಡಿದ್ದೆ. ಆದರೆ, ಕೊಹ್ಲಿಗೆ ಇದು ಅರ್ಥವಾಗಲಿಲ್ಲ' ಎಂದಿದ್ದಾರೆ.
'ಅಂದು 2017ರಲ್ಲಿ ಆ ಪಂದ್ಯ ಮುಗಿದ ಬಳಿಕ ಕೊಹ್ಲಿ ಬಳಿ ನಾನು ಹ್ಯಾಂಡ್ ಶೇಕ್ ಮಾಡಲು ಹೋಗಿದ್ದೆ. ಆದರೆ, ಅವರು ಗುಡ್ ಬೌಲಿಂಗ್, ಸಂಭ್ರಮಾಚರಣೆ ಕೆಟ್ಟದಾಗಿತ್ತು ಎಂದು ಹೇಳಿ ಹೊರಟುಬಿಟ್ಟರು. ನಮ್ಮಿಬ್ಬರ ನಡುವೆ ಯಾವುದೂ ಹೊಂದಾಣಿಕೆ ಆಗಿರಲಿಲ್ಲ' ಎಂದು ಕೆಸ್ರಿಕ್ ಹೇಳಿದ್ದಾರೆ.
ನಮ್ಮಲ್ಲಿ IPL ಆಯೋಜಿಸಿ: ಬಿಸಿಸಿಐಗೆ ಆಫರ್ ನೀಡಿದ ಮತ್ತೊಂದು ರಾಷ್ಟ್ರ..!
'ಕಳೆದ ವರ್ಷ ಕೊಹ್ಲಿ ಮೊದಲ ಬಾರಿ ಬ್ಯಾಟ್ ಮಾಡಲು ಬಂದಾಗಲೇ ನೇರವಾಗಿ ನನ್ನ ಬಳಿಬಂದು ನೋಟ್ಬುಕ್ ಸಂಬ್ರಮಾಚರಣೆ ಇಂದು ರಾತ್ರಿ ನಡೆಯೋದಿಲ್ಲ ಎಂದು ಸವಾಲು ಹಾಕಿದ್ದರು. ನಾನು ನಿಜವಾಗಿಯೂ 2017ರ ಆ ಘಟನೆ ಬಗ್ಗೆ ಇನ್ನೂ ಮಾತನಾಡುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದೆ'
'ನಾನು ಪ್ರತಿ ಬಾರಿ ಬೌಲ್ ಮಾಡಿದಾಗಲೆಲ್ಲಾ ಕೊಹ್ಲಿ ಏನಾದರು ಮಾತನಾಡುತ್ತಲೇ ಇದ್ದರು. ಆಗ ಮಕ್ಕಳಂತೆ ಆಡಬೇಡ, ಬಾಯಿ ಮುಚ್ಚಿ ಬ್ಯಾಟಿಂಗ್ ಮಾಡು ಎಂದು ಕೊಹ್ಲಿಗೆ ಹೇಳಿದ್ದೆ. ಬಳಿಕ ಕೊಹ್ಲಿ ನನ್ನೆದುರು ಅದ್ಭುತವಾಗಿ ಬ್ಯಾಟ್ ಮಾಡಿದ್ದರು. ಅವರು ನನ್ನ ತಲೆಯೊಳಗೆ ಹೊಕ್ಕಿದ್ದರಿಂದ ನನಗೆ ಏನು ಮಾಡುತ್ತಿದ್ದೇನೆ ಎಂಬುದು ತಿಳಿಯದಂತಾಗಿತ್ತು'
'ಆದರೆ, ಕೊಹ್ಲಿ ಒಬ್ಬ ಶ್ರೇಷ್ಠ ಬ್ಯಾಟ್ಸ್ಮನ್. ಪಂದ್ಯಾನಂತರ ಇಬ್ಬರೂ ಹ್ಯಾಂಡ್ಶೇಕ್ ಮಾಡಿ ನಮ್ಮ ನಮ್ಮ ಡ್ರೆಸಿಂಗ್ ರೂಮ್ ಕಡೆಗೆ ಹೊರಟೆವು. ಯಾರೊಬ್ಬರು ಕೂಡ ಅಗೌರವ ತರುವ ಹಾಗೆ ನಡೆದುಕೊಳ್ಳಲಿಲ್ಲ. ಕೊಹ್ಲಿ ಬಹಳ ವೃತ್ತಿಪರ ಆಟಗಾರ. ಆನ್ ಫೀಲ್ಡ್ನಲ್ಲಿ ಆದ ಗಲಾಟೆಯನ್ನು ಆಫ್ ಫೀಲ್ಡ್ಗೆ ಕರೆತರುವವರು ನಾವಲ್ಲ' ಎಂಬುದು ಕೆಸ್ರಿಕ್ ಮಾತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ