ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಆಟಗಾರರ(Players) ಹರಾಜು ಪ್ರಕ್ರಿಯೆ ನಿನ್ನೆ ಬೆಂಗಳೂರಿನಲ್ಲಿ(Bangalore) ಆರಂಭವಾಗಿದ್ದು, ಘಟಾನುಘಟಿ ಆಟಗಾರರನ್ನು ಎಲ್ಲಾ ತಂಡಗಳು ಖರೀದಿ ಮಾಡಲು ಭಾರಿ ಪೈಪೋಟಿ ನಡೆಸಿವೆ. ಮೊದಲ ದಿನ ನಡೆದ ಹರಾಜು(Auction) ಪ್ರಕ್ರಿಯೆಯಲ್ಲಿ ಈ ಬಾರಿ ಹಲವು ವಿಶೇಷತೆಗಳ ಸಂಭವಿಸಿದೆ.. ಕಡಿಮೆ ಮೊತ್ತಕ್ಕೆ ಸೇಲ್ ಆಗಬಹುದು ಎಂದು ಭಾವಿಸಿದ್ದ ಆಟಗಾರರು ಅತಿ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿದ್ರೆ, ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಬಹುದು ಎನ್ನುತ್ತಿದ್ದ ಆಟಗಾರರು ಕಡಿಮೆ ಹಣಕ್ಕೆ ಖರೀದಿ ಆಗಿದ್ದಾರೆ..ಇದರ ನಡುವೆ ಫ್ರಾಂಚೈಸಿಗಳು ಸಹ ಹಲವು ಆಟಗಾರರಿಗೆ ಹಣದ ಹೊಳೆಯನ್ನೇ ಹರಿಸುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಐಪಿಎಲ್ ಹರಾಜು ಪ್ರಕ್ರಿಯೆ ಕ್ರೀಡಾಂಗಣದಲ್ಲಿ ಆಟಗಾರರು ಆಡುವಷ್ಟೇ ಕುತೂಹಲ ಮೂಡಿಸಿದ್ದು, ಎಲ್ಲಾ ಫ್ರಾಂಚೈಸಿಗಳ ಮೇಲೆ ಅಭಿಮಾನಿಗಳ ಕಣ್ಣು ಇದೆ.. ಇದರ ನಡುವೆ ನೆನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಫ್ರಾಂಚೈಸಿಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡ ಕೊಂಚ ಗಮನ ಸೆಳೆದಿದೆ. ಯಾಕಂದ್ರೆ ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ಪರ ಸ್ಟಾರ್ ಕಿಡ್ಸ್ ಗಳು ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿದೆ
KKR ಪರ ಹರಾಜು ಪ್ರಕ್ರಿಯೆಯಲ್ಲಿ ಜೂಹಿ, ಶಾರುಕ್ ಮಕ್ಕಳು
ಬಾಲಿವುಡ್ ನಟಿ ಜೂಹಿ ಚಾವ್ಲಾ ಹಾಗೂ ಸೂಪರ್ ಸ್ಟಾರ್ ಶಾರುಖ್ ಖಾನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರು ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ.. ಜಂಟಿಯಾಗಿ ತಂಡದ ಮಾಲೀಕತ್ವ ಹೊಂದಿರುವ ಜೂಹಿ ಚಾವ್ಲಾ ಹಾಗೂ ಶಾರುಖ್ ಖಾನ್ ಪ್ರತಿಬಾರಿ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ..ಜ್ಞ
ವಿಶೇಷ ಅಂದರೆ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಶಾರುಖ್ ಖಾನ್ ಹಾಗೂ ಜೂಹಿಚಾವ್ಲಾ ಭಾಗಿಯಾಗದೆ ಮಕ್ಕಳಿಗೆ ಜವಾಬ್ದಾರಿ ವಹಿಸಿದ್ದಾರೆ. ಹೌದು ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಜೂಹಿ ಚಾವ್ಲಾ ಮಗಳು ಜಾನವಿ, ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಭಾಗಿಯಾಗಿದ್ದರು.
ಇದನ್ನೂ ಓದಿ: ಮರಳಿ RCB ಗೂಡು ಸೇರಿದ ಹರ್ಷಲ್ ಪಟೇಲ್
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಸಂತಸ ವ್ಯಕ್ತಪಡಿಸಿದ ಜೂಹಿ
ಇನ್ನು ಕೆಕೆಆರ್ ತಂಡದ ಮಾಲಕಿ ಜೂಹಿ ಚಾವ್ಲಾ ನಿನ್ನೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಂತೆ ತಂಡಕ್ಕೆ ಸೇರ್ಪಡೆಯಾಗಿರುವ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಪ್ಯಾಟ್ ಕಮಿನ್ಸ್, ನಿತೀಶ್ ರಾಣಾ ಅವರನ್ನು ಸ್ವಾಗತ ಮಾಡುವವ ಪೋಸ್ಟ್ ಹಾಕಿದ್ದರು. ಇದರ ಜೊತೆಗೆ ಜೂಹಿಚಾವ್ಲಾ ತಮ್ಮ ಮಗಳಾದ ಜಾನವಿ, ಹಾಗೂ ಶಾರುಖ್ ಖಾನ್ ಮಕ್ಕಳಾದ ಸುಹಾನ ಹಾಗೂ ಆರ್ಯನ್ ಖಾನ್ ಫೋಟೋ ಹಂಚಿಕೊಳ್ಳುವ ಮೂಲಕ
ಕೆಕೆಆರ್ ತಂಡಕ್ಕೆ ನಿಮಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ
ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾಗಿದ್ದ ಆರ್ಯನ್..
ಇನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ವೇಳೆ ಆರ್ಯನ್ ಖಾನ್ ನನ್ನು NCB ಅಧಿಕಾರಿಗಳು ದಾಳಿ ನಡೆಸಿ ಬಂಧನ ಮಾಡಿದ್ದರು. ಇದಾದ ಬಳಿಕ ಮಗನ ಹೆಸರನ್ನು ಸರಿ ಮಾಡಲು ಪ್ರಯತ್ನ ಮಾಡುತ್ತಿರುವ ಶಾರುಖ್ ಖಾನ್ ಮಗನಿಗೆ ದೊಡ್ಡ ಜವಾಬ್ದಾರಿ ಹೊರಿಸಿ ಐಪಿಎಲ್ ಹರಾಜು ಪ್ರಕ್ರಿಯೆ ಗೆ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ: ಕರ್ನಾಟಕದ ಆಟಗಾರರು ಯಾವ್ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ? ಇಲ್ಲಿದೆ ಲಿಸ್ಟ್
ಈ ಹಿಂದೆಯೂ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಆರ್ಯನ್ ಹಾಗೂ ಜಾನ್ವಿ
ಕೆಲ ವರ್ಷಗಳ ಹಿಂದೆಯೂ ಆರ್ಯನ್ ಹಾಗೂ ಜಾನ್ವಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರಿಗೂ ಕ್ರಿಕೆಟ್ ಮೇಲೆ ಸಾಕಷ್ಟು ಆಸಕ್ತಿ ಇದೆ. ಈ ಕಾರಣಕ್ಕೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಜೂಹಿ ಹೇಳಿಕೊಂಡಿದ್ದರು.
'ಮಕ್ಕಳು ತಮ್ಮ ತಂಡದ ಬಗ್ಗೆ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ ಎಂಬುದು ಸಂತಸ ತಂದಿದೆ. ಇದನ್ನು ಮಾಡಲು ಅವರಿಗೆ ನಾವು ಒತ್ತಾಯ ಹೇರುತ್ತಿಲ್ಲ. ಅವರು ನಿಜವಾಗಿಯೂ ಇದನ್ನು ಮಾಡೋಕೆ ಬಯಸುತ್ತಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಜಾನ್ವಿ ರಾತ್ರಿ ಎದ್ದ ಉದಾಹರಣೆ ಕೂಡ ಇದೆ' ಎಂದಿದ್ದರು ಜೂಹಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ