VIDEO: ಕ್ಯಾಚ್ ಆಫ್​ ದಿ ಇಯರ್: ಬೌಂಡರಿ ಗೆರೆ ದಾಟಿ ಭರ್ಜರಿ ಫೀಲ್ಡಿಂಗ್; ಔಟಾ-ನಾಟೌಟಾ ನೀವೇ ನಿರ್ಧರಿಸಿ

ಸೋಷಿಯಲ್ ಮೀಡಿಯಾದಲ್ಲಿ ಈ ಕ್ಯಾಚ್​ನ ಬಗ್ಗೆ  ಪರ ವಿರೋಧ ಚರ್ಚೆಗಳು  ಕೇಳಿ ಬಂದಿವೆ. ಏಕೆಂದರೆ ಬೌಂಡರಿಯ ಹೊರಗೆ ನಿಂತು ಚೆಂಡನ್ನು ಒಳಗೆ  ಹಾಕುವುದಿದ್ದರೆ ಅನೇಕ ಸಿಕ್ಸ್​ಗಳನ್ನು ತಡೆಯಬಹುದು ಎಂಬುದು ಕೆಲವರ ವಾದ.

zahir | news18-kannada
Updated:January 9, 2020, 6:14 PM IST
VIDEO: ಕ್ಯಾಚ್ ಆಫ್​ ದಿ ಇಯರ್: ಬೌಂಡರಿ ಗೆರೆ ದಾಟಿ ಭರ್ಜರಿ ಫೀಲ್ಡಿಂಗ್; ಔಟಾ-ನಾಟೌಟಾ ನೀವೇ ನಿರ್ಧರಿಸಿ
ಕ್ಯಾಚ್
  • Share this:
ಕ್ಯಾಚ್ ದಿ ಮ್ಯಾಚ್. ಕ್ರಿಕೆಟ್ ಅಂಗಳದಲ್ಲಿ ಸಾಮಾನ್ಯವಾಗಿ ಬಳಸುವ ವಾಕ್ಯ. ಅಂದರೆ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಬಿಗ್ ಬ್ಯಾಷ್ ಲೀಗ್​ನ ಹೋಬಾರ್ಟ್​ ಹುರ್ರಿಕೇನ್ಸ್ ಹಾಗೂ ಬ್ರಿಸ್ಬೇನ್ ಹೀಟ್ ನಡುವಣ ಪಂದ್ಯ ಸಾಕ್ಷಿಯಾಗಿತ್ತು.

ಹೋಬಾರ್ಟ್​ ಪರ 15 ನೇ ಓವರ್‌ನಲ್ಲಿ ಬ್ರಿಸ್ಬೇನ್ ತಂಡ ಮ್ಯಾಥ್ಯೂ ಹೇಡ್ ಔಟಾಗಿದ್ದರು. ಬೆನ್​ ಕಟ್ಟಿಂಗ್ ಎಸೆದ ಈ ಓವರ್​ನ ಐದನೇ ಎಸೆತವನ್ನು ಹೇಡ್ ಸಿಕ್ಸರ್​ಗಟ್ಟಲು ಯತ್ನಿಸಿದ್ದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟಲಿದೆ ಅನ್ನುವಾಗಲೇ ರೇನ್​ಶಾ ಅದ್ಭುತ ಫೀಲ್ಡಿಂಗ್ ಎಲ್ಲರನ್ನು ನಿಬ್ಬೆರಗಾಗಿಸಿತ್ತು.

ರನ್ನಿಂಗ್ ಮೂಲಕ ಬಂದ ರೇನ್​ಶಾ ಚೆಂಡನ್ನು ಹಿಡಿದರೂ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟಿದ್ದರು. ಆದರೆ ಅದಾಗಲೇ ಬೌಂಡರಿ ಒಳಗೆ ಬಾಲನ್ನು ಗಾಳಿಗೆ ಎಸೆದ ರೇನ್ ಮತ್ತೊಮ್ಮೆ ಜಿಗಿದು ಚೆಂಡನ್ನು ಮತ್ತೊಬ್ಬ ಫೀಲ್ಡರ್​ಗೆ ತಲುಪಿಸಿದರು. ಹೀಗೆ ತೂರಿ ಬಂದ ಚೆಂಡನ್ನು ಸುಲಭವಾಗಿ ಟಾಮ್ ಬ್ಯಾಂಟನ್ ತಮ್ಮ ಕೈಯಲ್ಲಿ ಬಂಧಿಸಿದರು.

ಅಂದರೆ ಬೌಂಡರಿ ದಾಟಿದ ರೇನ್​ಶಾ ಎರಡು ಬಾರಿ ಚೆಂಡನ್ನು ಗಾಳಿಯಲ್ಲಿ ತೇಲಿಸಿದ್ದರು. ಇದರಿಂದ ವೀಕ್ಷಕರಲ್ಲೂ ಔಟ್ ನೀಡುತ್ತಾರಾ? ನಾಟೌಟಾ ಎಂಬ ಕುತೂಹಲ ಮೂಡಿತ್ತು. ಹಾಗೆಯೇ ಆನ್-ಫೀಲ್ಡ್ ಅಂಪೈರ್​ಗಳು ತೀರ್ಪಿಗಾಗಿ ಮೂರನೇ ಅಂಪೈರ್ ಮೊರೆ ಹೋದರು. ಮತ್ತೊಂದೆಡೆ ವೇಡ್ ಕೂಡ ಆಟಗಾರರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಆದರೆ ಮೂರನೇ ಅಂಪೈರ್ ತೀರ್ಮಾನ ಮಾತ್ರ ಔಟ್ ಎಂದೇ ಆಗಿತ್ತು. ಐಸಿಸಿ ನಿಯಮಗಳ ಪ್ರಕಾರ ಮ್ಯಾಥ್ಯು ವೇಡ್ ಔಟಾಗಿದ್ದರು.

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​ ಕನ್ನಡ ಸೀಸನ್​ 7ನಲ್ಲಿ ಬಿಗ್ ಟ್ವಿಸ್ಟ್​..!


ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಕ್ಯಾಚ್​ನ ಬಗ್ಗೆ  ಪರ ವಿರೋಧ ಚರ್ಚೆಗಳು  ಕೇಳಿ ಬಂದಿವೆ. ಏಕೆಂದರೆ ಬೌಂಡರಿಯ ಹೊರಗೆ ನಿಂತು ಚೆಂಡನ್ನು ಒಳಗೆ  ಹಾಕುವುದಿದ್ದರೆ ಅನೇಕ ಸಿಕ್ಸ್​ಗಳನ್ನು ತಡೆಯಬಹುದು ಎಂಬುದು ಕೆಲವರ ವಾದ. ಅದೇನೇ ಇದ್ದರೂ  ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಸೂಪರ್ ಕ್ಯಾಚ್​ಗೆ ಬಿಗ್ ಬ್ಯಾಷ್ ಲೀಗ್ ಸಾಕ್ಷಿಯಾಯಿತು.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ