ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಈ ಸ್ಟಾರ್ ಆಟಗಾರ..!

2011, 2015 ರ ವಿಶ್ವಕಪ್​ನಲ್ಲಿ ಆಡಿರುವ ಜೆ.ಪಿ ಡುಮಿನಿ ಸದ್ಯ ಶ್ರೀಲಂಕಾ ವಿರುದ್ಧ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

zahir | news18
Updated:March 16, 2019, 9:22 PM IST
ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಈ ಸ್ಟಾರ್ ಆಟಗಾರ..!
Photo by Ron Gaunt / BCCI / SPORTZPICS
  • News18
  • Last Updated: March 16, 2019, 9:22 PM IST
  • Share this:
ವಿಶ್ವಕಪ್ 2019 ಆರಂಭಕ್ಕೂ ಮುನ್ನವೇ ಪ್ರಮುಖ ಆಟಗಾರರು ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸುತ್ತಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, ಇದೀಗ ದಕ್ಷಿಣ ಆಫ್ರಿಕಾ ಆಲ್​ರೌಂಡರ್​ ಜೆ.ಪಿ ಡುಮಿನಿ ವರ್ಲ್ಡ್​ಕಪ್​ ಬಳಿಕ ಏಕದಿನ ಕ್ರಿಕೆಟ್ ​ಗೆ ಗುಡ್​ಬೈ ಹೇಳುವುದಾಗಿ ತಿಳಿಸಿದ್ದಾರೆ.

193 ಏಕದಿನ ಪಂದ್ಯಗಳಿಂದ 5047 ರನ್​ಗಳನ್ನು ಬಾರಿಸಿರುವ ಡುಮಿನಿ ಈ ಬಾರಿ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಅದರಂತೆ ಇದು ನನ್ನ ಕೊನೆಯ ವಿಶ್ವಕಪ್​ ಆಗಿರಲಿದೆ ಎಂದಿದ್ದಾರೆ. ಕ್ರೀಡಾಪಟುಗಳು ನಿವೃತ್ತಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲೇಬೇಕಿದೆ. ಕುಟುಂಬ ವರ್ಗದವರೊಂದಿಗೆ ಸಮಯ ಕಳೆಯಲು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳುತ್ತಿದ್ದೇನೆ.  ಆದರೆ ಟಿ20 ಹಾಗೂ ಅಂತರಾಷ್ಟ್ರೀಯ ಲೀಗ್​ನಲ್ಲಿ ಮುಂದುವರೆಯುವುದಾಗಿ ಡುಮಿನಿ ತಿಳಿಸಿದ್ದಾರೆ.

2011, 2015 ರ ವಿಶ್ವಕಪ್​ನಲ್ಲಿ ಆಡಿರುವ ಜೆ.ಪಿ ಡುಮಿನಿ ಸದ್ಯ ಶ್ರೀಲಂಕಾ ವಿರುದ್ಧ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೆಯೇ ಉತ್ತಮ ಫಾರ್ಮ್​ ಅನ್ನು ಉಳಿಸಿಕೊಳ್ಳುವ ಮೂಲಕ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಅದ್ಭುತ ಆಲ್​ರೌಂಡರ್​ ಆಗಿ ಸ್ಥಾನ ಪಡೆದ ಡುಮಿನಿ ಬೌಲಿಂಗ್​ನಲ್ಲೂ ಮಿಂಚಿದ್ದರು. ಸಂಕಷ್ಟದ ಸಂದರ್ಭದಲ್ಲಿ ಸ್ಪಿನ್ ಮೋಡಿ ಮೂಲಕ ಹರಿಣಗಳ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟು 68 ವಿಕೆಟ್​ ಕಬಳಿಸಿರುವ ಡುಮಿನಿ ಈ ಬಾರಿಯ ದಕ್ಷಿಣ ಆಫ್ರಿಕಾ ತಂಡ ಅನುಭವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಲೀಗ್​​ನಲ್ಲಿ ಪ್ರಮುಖ ಆಟಗಾರನಾಗಿ ಸ್ಥಾನಗಿಟ್ಟಿಸಿಕೊಂಡಿದ್ದರು.

ಇದನ್ನೂ ಓದಿ: ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ..!

First published: March 16, 2019, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading