HOME » NEWS » Sports » CRICKET JOSH PHILIPPE BOWLERS POWER SIXERS TO CRUSHING WIN ZP

BBL 10: ಬಿಗ್ ಬ್ಯಾಷ್​ ಲೀಗ್​ನಲ್ಲಿ RCB ಆಟಗಾರನ ಅಬ್ಬರ..!

ಸಿಡ್ನಿ ಸಿಕ್ಸರ್ ಪರ ಬೆನ್‌ ಡ್ವಾರ್ಷಿಯಸ್ 13ಕ್ಕೆ 4 ಸ್ಟೀವ್‌ ಒಕೆಪಿ ಮೂರು ಓವರ್‌ಗಳಲ್ಲಿ 16ಕ್ಕೆ 3 ವಿಕೆಟ್‌ ಉರುಳಿಸಿ ಮಿಂಚಿದರು. ಆ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡ 145 ರನ್‌ಗಳ ಅಂತರದಿಂದ ಜಯಗಳಿಸುವ ಮೂಲಕ ಬಿಬಿಎಲ್‌ ಇತಿಹಾಸದಲ್ಲೇ ಬೃಹತ್‌ ಅಂತರದ ಗೆಲುವಿನ ದಾಖಲೆ ಬರೆಯಿತು.

news18-kannada
Updated:December 14, 2020, 4:38 PM IST
BBL 10: ಬಿಗ್ ಬ್ಯಾಷ್​ ಲೀಗ್​ನಲ್ಲಿ RCB ಆಟಗಾರನ ಅಬ್ಬರ..!
Philippe
  • Share this:
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್​ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಈ ಗೆಲುವಿಗೆ ಪ್ರಮುಖ ಕಾರಣರಾಗಿದ್ದದ್ದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರ ಜೋಶ್ ಫಿಲಿಪೆ ಎಂಬುದು ವಿಶೇಷ. ಹೌದು, ಭಾನುವಾರ ನಡೆದ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಸಿಕ್ಸರ್ಸ್​ ನಡುವಣ ಪಂದ್ಯವು ಭರ್ಜರಿ ಬ್ಯಾಟಿಂಗ್​ಗೆ ಸಾಕ್ಷಿಯಾಗಿತ್ತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಆಯ್ಕೆ ಪಡೆದ ಸಿಡ್ನಿ ಸಿಕ್ಸರ್ಸ್‌ ತಂಡಕ್ಕೆ ಜೋಶ್ ಫಿಲಿಪೆ ಸ್ಪೋಟಕ ಆರಂಭ ಒದಗಿಸಿದ್ದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ 3 ಸಿಕ್ಸರ್, 9 ಬೌಂಡರಿಗಳನ್ನು ಬಾರಿಸಿದ್ದರು. ಕೇವಲ 57 ಎಸೆತಗಳಲ್ಲಿ 95 ರನ್ ಸಿಡಿಸಿದ 23 ವರ್ಷದ ಫಿಲಿಪೆ ತಂಡದ ಮೊತ್ತ 205 ರನ್​ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸ್ಟೀವ್ ಒಕೆಫಿ ಯಶಸ್ವಿಯಾದರು. ನಾಯಕ ಆರೋನ್ ಫಿಂಚ್ ಮೊದಲಿಗರಾಗಿ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರ ಬೆನ್ನಲ್ಲೇ ಪೆವಿಲಿಯನ್ ಪೆರೇಡ್ ನಡೆಸಿದ ಮೊಲ್ಬೋರ್ನ್​ ತಂಡ 10.4 ಓವರ್‌ಗಳಲ್ಲಿ ಕೇವಲ 60 ರನ್‌ಗಳಿಗೆ ಆಲ್‌ಔಟಾಯಿತು.

ಸಿಡ್ನಿ ಸಿಕ್ಸರ್ ಪರ ಬೆನ್‌ ಡ್ವಾರ್ಷಿಯಸ್ 13ಕ್ಕೆ 4 ಸ್ಟೀವ್‌ ಒಕೆಪಿ ಮೂರು ಓವರ್‌ಗಳಲ್ಲಿ 16ಕ್ಕೆ 3 ವಿಕೆಟ್‌ ಉರುಳಿಸಿ ಮಿಂಚಿದರು. ಆ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡ 145 ರನ್‌ಗಳ ಅಂತರದಿಂದ ಜಯಗಳಿಸುವ ಮೂಲಕ ಬಿಬಿಎಲ್‌ ಇತಿಹಾಸದಲ್ಲೇ ಬೃಹತ್‌ ಅಂತರದ ಗೆಲುವಿನ ದಾಖಲೆ ಬರೆಯಿತು.


ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
Published by: zahir
First published: December 14, 2020, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories