India vs England Test| ಸರಣಿ ಸೋಲಿನ ಭೀತಿಯಲ್ಲಿ ಆಂಗ್ಲರು; 5ನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಮರಳಲಿರುವ ಬಟ್ಲರ್​

ಭಾರತದ ವಿರುದ್ಧ ಗೆಲುವು ಸಾಧಿಸಲು ಇಂಗ್ಲೆಂಡ್ ತಂಡ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ಕಸರತ್ತುಗಳು ಯಾವ ರೀತಿಯ ಫಲ ನೀಡಲಿವೆ? ಎಂಬುದನ್ನು ಪಂದ್ಯದ ದಿನವಷ್ಟೇ ಕಾದು ನೋಡಬೇಕಿದೆ. ಆದರೆ, ಈ ಸರಣಿಯನ್ನು ಭಾರತ ಗೆದ್ದರೆ ಅದೊಂದು ಹೊಸ ಇತಿಹಾಸವೇ ಸರಿ!.

ಜೋಸ್ ಬಟ್ಲರ್.

ಜೋಸ್ ಬಟ್ಲರ್.

 • Share this:
  ಮ್ಯಾಂಚೆಸ್ಟರ್​ (ಸೆಪ್ಟೆಂಬರ್​ 09); ಸರಿಯಾಗಿ ಇಂದಿಗೆ ಐದು ತಿಂಗಳ ಹಿಂದೆ ಭಾರತದಲ್ಲಿ ನಡೆದಿದ್ದ ಟೆಸ್ಟ್​ ಸರಣಿಯಲ್ಲಿ ಹೀನಾಯ ಸೋಲನುಭವಿಸಿದ್ದ ಆಂಗ್ಲರು ಭಾರತದ ವಿರುದ್ಧ ಸೇಡಿಗಾಗಿ ಕಾದಿತ್ತು. ಆಗಸ್ಟ್​ ತಿಂಗಳಿನಿಂದ ಇಂಗ್ಲೆಂಡ್​ (England) ನಲ್ಲೇ ಆರಂಭವಾಗಿದ್ದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಂಗ್ಲರು ಭಾರತದ (India) ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ, ಇದೀಗ ಎಲ್ಲಾ ಊಹೆಗಳೂ ವಿಶ್ಲೇಷಣೆಗಳೂ ಸಹ ತಲೆ ಕೆಳಗಾಗಿವೆ. ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ (IndvsEng test series) ಮುನ್ನಡೆಯಲ್ಲಿದ್ದಾರೆ. ನಾಳೆಯಿಂದ ಮ್ಯಾಂಚೆಸ್ಟರ್​ನಲ್ಲಿ ಆರಂಭವಾಗಲಿರುವ ಟೆಸ್ಟ್​ ಪಂದ್ಯ ಆಂಗ್ಲರ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಸಹ ಭಾರತಕ್ಕೆ ಸರಣಿ ಒಲಿದು ಬರಲಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಆಂಗ್ಲರು ತಂಡದಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದ್ದಾರೆ.

  ಜೋಸ್ ಬಟ್ಲರ್ ಒಳಕ್ಕೆ-ಬ್ಯಾರಿಸ್ಟೋವ್ ಹೊರಕ್ಕೆ;

  ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್​ಮನ್ ಜಾನಿ ಬ್ಯಾರಿಸ್ಟೋವ್ ಇಂಗ್ಲೆಂಡ್ ತಂಡದ ಉಪ ನಾಯಕನೂ ಹೌದು. ಆದರೆ, ಕಳೆದ ಒಂದು ವರ್ಷದಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಅವರು ಉತ್ತಮ ಫಾರ್ಮ್ ನಲ್ಲಿ ಇಲ್ಲ. ಆದರೂ ಅವರ ಅಗತ್ಯ ತಂಡಕ್ಕಿದೆ ಎಂಬುದು ನಾಯಕ ಜೋ ರೂಟ್ ಅಭಿಮತ. ಇದೇ ಕಾರಣಕ್ಕೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

  ಆದರೆ, ಭಾರತದ ವಿರುದ್ಧ ಮಹತ್ವದ ನಾಲ್ಕನೇ ಪಂದ್ಯದಲ್ಲಿ ಅವರು ತಂಡದಿಂದ ಹೊರಗುಳಿದಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದ ಜೋಸ್ ಬಟ್ಲರ್​ ಪಿತೃತ್ವ ರಜೆ ಪಡೆದು ತೆರಳಿದ್ದರು. ಆದರೆ, ಆ ಪಂದ್ಯದಲ್ಲಿ ಆಂಗ್ಲರು ಹೀನಾಯ ಸೋಲನುಭವಿಸಿದ್ದರು. 10 ಬ್ಯಾಟ್ಸ್​ಮನ್​ಗಳು ಸೇರಿ ತವರು ನೆಲದಲ್ಲಿ ಒಂದು ಇಡೀ ದಿನ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಭಾರತದ ಬೌಲರ್​ಗಳ ಎದುರು ಸುಲಭಕ್ಕೆ ಮಣಿದಿದ್ದರು.

  ಹೀಗಾಗಿ ಜೋಸ್​ ಬಟ್ಲರ್​ ಅವರನ್ನು ಕೊನೆಯ ಮತ್ತು ನಿರ್ಣಾಯಕ ಪಂದ್ಯಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಬಟ್ಲರ್ ಇಲ್ಲದ ಕಾರಣ ಕಳೆದ ಪಂದ್ಯದಲ್ಲಿ ಜಾನಿ ಬ್ಯಾರಿಸ್ಟೋವ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿದ್ದರು. ಆದರೆ, ಬ್ಯಾಟಿಂಗ್​ನಲ್ಲಿ ಮತ್ತೆ ವೈಫಲ್ಯ ಅನುಭವಿಸಿದ್ದರು. ಬ್ಯಾರಿಸ್ಟೋವ್ ಅವರ ಸತತ ವೈಫಲ್ಯವೂ ಸಹ ಇಂಗ್ಲೆಂಡ್ ತಂಡಕ್ಕೆ ಭಾರೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

  ಇದನ್ನೂ ಓದಿ: ಟೀಂ ಇಂಡಿಯಾ ಗಬ್ಬರ್​ಗೆ ಎರಡೆರಡು ಪೆಟ್ಟು: ವಿಚ್ಛೇದನದ ನಂತರ ಟಿ-20 ವಲ್ಡ್​ಕಪ್​ನಿಂದಲೂ ಡಿವೋರ್ಸ್​

  ಆದರೆ, ಬಟ್ಲರ್ ಸ್ಥಾನವನ್ನು ತುಂಬಿದ್ದ ಓಲಿ ಪೋಪ್ ಕಳೆದ ಪಂದ್ಯದ ಮೊದಲ ಇನ್ನಿಂಗ್ಸ್​ 81 ರನ್ ಗಳಿಸುವ ಮೂಲಕ ತಮಗೆ ನೀಡಿದ್ದ ಅವಕಾಶವನ್ನು ದಿಟ್ಟವಾಗಿ ಬಳಸಿಕೊಂಡಿದ್ದರು. ಹೀಗಾಗಿ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ ಸತತ ವಿಫಲ ಅನುಭವಿಸುತ್ತಿರುವ ಜಾನಿ ಬ್ಯಾರಿಸ್ಟೋವ್ ಅವರನ್ನು ಹೊರಗಿಟ್ಟು ಓಲಿ ಪೋಪ್​ಗೆ ಮತ್ತೊಂದು ಅವಕಾಶ ನೀಡಲಿದ್ದಾರೆ ಎನ್ನಲಾಗುತ್ತಿದೆ.

  ಇದಲ್ಲದೆ, ಇಂಗ್ಲೆಂಡ್​ನ ಆಫ್​ ಸ್ಪಿನ್ನರ್​ ಜಾಕ್ ಲೀಚ್​ ಭಾರತದ ಎದುರು ಅಹಮದಾಬಾದ್​ ಟೆಸ್ಟ್​ ಪಂದ್ಯದ ನಂತರ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅವರನ್ನೂ ಸಹ ಽನೇ ಟೆಸ್ಟ್ ಪಂದ್ಯಕ್ಕೆ ಪರಿಗಣಿಸಲಾಗಿದೆ. ಆದರೆ, ಸ್ಪಿನ್ನರ್ ವಿಭಾಗದಲ್ಲಿ ತಂಡದ ಮೊದಲ ಆಯ್ಕೆ ಆಫ್ ಸ್ಪಿನ್ನರ್​ ಆಲ್​ರೌಂಡರ್​ ಮೋಯಿನ್ ಅಲಿ ಅವರೇ ಎಂದು ನಾಯಕ ಜೋಸ್ ಬಟ್ಲರ್​ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

  ಇದನ್ನೂ ಓದಿ: India's T20 World Cup Squad| ಟಿ20 ವಿಶ್ವಕಪ್ ತಂಡ ಘೋಷಣೆ; ಧವನ್, ಚಹಲ್​ಗಿಲ್ಲ ಸ್ಥಾನ, ಅಶ್ವಿನ್, ವರುಣ್​ಗೆ ಜಾಕ್​ಪಾಟ್

  ಒಟ್ಟಾರೆ ಭಾರತದ ವಿರುದ್ಧ ಗೆಲುವು ಸಾಧಿಸಲು ಇಂಗ್ಲೆಂಡ್ ತಂಡ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ಕಸರತ್ತುಗಳು ಯಾವ ರೀತಿಯ ಫಲ ನೀಡಲಿವೆ? ಎಂಬುದನ್ನು ಪಂದ್ಯದ ದಿನವಷ್ಟೇ ಕಾದು ನೋಡಬೇಕಿದೆ. ಆದರೆ, ಈ ಸರಣಿಯನ್ನು ಭಾರತ ಗೆದ್ದರೆ ಅದೊಂದು ಹೊಸ ಇತಿಹಾಸವೇ ಸರಿ!.
  Published by:MAshok Kumar
  First published: