IPL 2021| ಜೋಸ್​ ಬಟ್ಲರ್ ಬೆನ್ನಿಗೆ ಐಪಿಎಲ್​ನಿಂದ ಹೊರಗುಳಿದ ಜಾನಿ ಬೈರ್‌ಸ್ಟೊ, ಕ್ರಿಸ್ ವೋಕ್ಸ್, ಡೇವಿಡ್ ಮಲನ್!

ಜಾನಿ ಬೈರ್‌ಸ್ಟೊ (ಸನ್ ರೈಸರ್ಸ್ ಹೈದರಾಬಾದ್), ಕ್ರಿಸ್ ವೋಕ್ಸ್ (ಡೆಲ್ಲಿ ಕ್ಯಾಪಿಟಲ್ಸ್), ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ (ರಾಜಸ್ಥಾನ ರಾಯಲ್ಸ್) ಐಪಿಎಲ್​ 2021 ರಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಜಾನಿ ಬೈರ್‌ಸ್ಟೊ-ಜೋಸ್ ಬಟ್ಲರ್.

ಜಾನಿ ಬೈರ್‌ಸ್ಟೊ-ಜೋಸ್ ಬಟ್ಲರ್.

 • Share this:
  ಐಪಿಎಲ್​ 2021 ಆವೃತ್ತಿಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಈ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಬೇಕು ಎಂಬುದು ಬಿಸಿಸಿಐಗೆ (BCCI) ಪ್ರತಿಷ್ಠೆಯ ವಿಷಯವೂ ಹೌದು. ಆದರೆ, ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಿದ್ದ ಈ ಮಹತ್ವದ ಟೂರ್ನಿ ಕೊರೋನಾ ಎರಡನೇ ಅಲೆಯ ಕಾರಣ ದಿಂದಾಗಿ ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್​ 19 ರಿಂದ ಯುಎಇ ಯಲ್ಲಿ ಈ ಟೂರ್ನಿ ನಡೆಯಲಿದೆ. ಆದರೆ, ಅನೇಕ ವಿದೇಶಿ ಆಟಗಾರರು ಈ ಶ್ರೀಮಂತ ಕ್ರಿಕೆಟ್​ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದಾರೆ. ಕೊರೋನಾ ಕಾರಣಕ್ಕೆ ಬಯೋ ಬಬಲ್​ನಲ್ಲಿ ದೀರ್ಘಾವದಿ ಇರುವುದು ಅಸಾಧ್ಯ ಎಂದು ಈ ಹಿಂದೆ ಇಂಗ್ಲೆಂಡ್​ ತಂಡದ ಉಪ ನಾಯಕ ಜೋಸ್ ಬಟ್ಲರ್ (Jos Butler) ಈ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ಇದೇ ಕಾರಣವನ್ನು ಮುಂದಿಟ್ಟು ಇಂಗ್ಲೆಂಡ್ ಆಟಗಾರ ರಾದ ಜಾನಿ ಬೈರ್‌ಸ್ಟೊ (Jonny Bairstow), ಕ್ರಿಸ್ ವೋಕ್ಸ್ (Chris Woakes)ಮತ್ತು ಡೇವಿಡ್ ಮಲನ್ (Dawid Malan) ಸಹ ಐಪಿಎಲ್​ 2021ರಿಂದ ಹಿಂದೆ ಸರಿದಿದ್ದಾರೆ.

  ಈ ಹಿಂದೆಯೇ ಇತರೆ ಇಂಗ್ಲೆಂಡ್ ಆಟಗಾರರಾd ಬೆನ್​ ಸ್ಟೋಕ್ಟ್​ ಮತ್ತು ಜೋಫ್ರಾ ಆರ್ಚರ್​ ತಾವು ಐಪಿಎಲ್​ನಲ್ಲಿ ಆಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಪಂಜಾಬ್ ಕಿಂಗ್ಸ್​ ಇಲೆವೆನ್​ ತಂಡ ಡೇವಿಡ್ ಮಲನ್ ಬದಲಿಗೆ ಈಗಾಗಲೇ ದಕ್ಷಿಣಾ ಆಫ್ರಿಕಾದ ಡ್ಯಾಶಿಂಗ್ ಓಪನರ್​ ಐಡೆನ್ ಮಾಕ್ರಮ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

  ಜಾನಿ ಬೈರ್‌ಸ್ಟೊ (ಸನ್ ರೈಸರ್ಸ್ ಹೈದರಾಬಾದ್), ಕ್ರಿಸ್ ವೋಕ್ಸ್ (ಡೆಲ್ಲಿ ಕ್ಯಾಪಿಟಲ್ಸ್), ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ (ರಾಜಸ್ಥಾನ ರಾಯಲ್ಸ್) ಎಲ್ಲರೂ ಇಂಗ್ಲೆಂಡ್‌ನ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಇಂಗ್ಲೆಂಡಿನ ಆಷಸ್ ಟೂರ್ನಿಯಲ್ಲಿ ಕೂಡ ಹೆಸರು ಪಡೆಯುವ ನಿರೀಕ್ಷೆಯಿದೆ. ಪರಿಣಾಮವಾಗಿ, ಅವರು ಕ್ರಿಕೆಟ್​ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ದೇಶದಿಂದ ದೇಶಕ್ಕೆ ತೆರಳಿದಾಗ ಅವರು ಕ್ವಾರಂಟೈನ್‌ನಲ್ಲಿರುವ ಸಮಯವನ್ನು ಒಳಗೊಂಡಂತೆ ಮನೆಯಿಂದ ನಾಲ್ಕು ತಿಂಗಳುಗಳಿಗಿಂತ ಹೆಚ್ಚು ದೂರವಿರಬೇಕಾಗುತ್ತದೆ.

  ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಇತ್ತೀಚೆಗೆ ತಂದೆಯಾಗಿದ್ದು, ಇದೇ ಕಾರಣಕ್ಕೆ ಇಬ್ಬರೂ ಕುಟುಂಬದ ಜೊತೆಗೆ ಸಮಯವನ್ನು ಕಳೆಯುವ ಸಲುವಾಗಿ ಐಪಿಎಲ್​ ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: IPL- ಭಾರತ ವಿರುದ್ಧ ಅಕ್ರೋಶ: ಐಪಿಎಲ್​ನಿಂದ ಹೊರನಡೆಯಲಿದ್ದಾರೆ ಇಂಗ್ಲೆಂಡ್ ಆಟಗಾರರು

  ಆದರೆ, ಇಂಗ್ಲೆಂಡ್​ ತಂಡದ ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕುರ್ರನ್, ಟಾಮ್ ಕುರ್ರನ್, ಜಾರ್ಜ್ ಗಾರ್ಟನ್, ಇಯೋನ್ ಮಾರ್ಗನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಲಿಯಾಮ್ ಲಿವಿಂಗ್ಸ್ಟನ್ ಮತ್ತು ಜೇಸನ್ ರಾಯ್ ಐಪಿಎಲ್ ನಲ್ಲಿ ಭಾಗವಹಿಸುವುದು ಖಚಿತವಾಗಿದೆ. ಈ ಪೈಕಿ ಕೆಲವರು ಇಂದು (ಶನಿವಾರ) ಯುಎಇಗೆ ವಾಣಿಜ್ಯ ವಿಮಾನದಲ್ಲಿ ಹಾರುವ ನಿರೀಕ್ಷೆಯಿದೆ. ಟಿ 20 ಅಂತಿಮ ದಿನದ ನಂತರ (ಸೆಪ್ಟೆಂಬರ್ 18 ರಂದು) ಯಾರೂ ಸಹ ತಂಡದಿಂದ ನಿರ್ಗಮಿಸುವಂತಿಲ್ಲ.
  Published by:MAshok Kumar
  First published: