‘ಬುಮ್ರಾ ಬೇಬಿ ಬೌಲರ್’ ಎಂದ ಪಾಕ್ ಕ್ರಿಕೆಟಿಗನಿಗೆ ಮೈಚಳಿ ಬಿಡಿಸಿದ ಜಸ್​ಪ್ರೀತ್ ಅಭಿಮಾನಿಗಳು!

6 ಬಾಲ್​ಗೆ 36 ರನ್​ಗಳ ಅವಶ್ಯಕತೆಯಿದೆ. ಬ್ಯಾಟಿಂಗ್ ಅಬ್ದುಲ್ ರಝಾಕ್. ಬೌಲಿಂಗ್ ಜಸ್​ಪ್ರೀತ್ ಬುಮ್ರಾ. ಯಾರು ಗೆಲ್ಲ ಬಹುದು?- ರಝಾಕ್​ ಅವರನ್ನು ಟ್ರೋಲ್ ಮಾಡಿದ ಬುಮ್ರಾ ಅಭಿಮಾನಿಗಳು

Vinay Bhat | news18-kannada
Updated:December 5, 2019, 12:51 PM IST
‘ಬುಮ್ರಾ ಬೇಬಿ ಬೌಲರ್’ ಎಂದ ಪಾಕ್ ಕ್ರಿಕೆಟಿಗನಿಗೆ ಮೈಚಳಿ ಬಿಡಿಸಿದ ಜಸ್​ಪ್ರೀತ್ ಅಭಿಮಾನಿಗಳು!
ಜಸ್​ಪ್ರೀತ್ ಬುಮ್ರಾ ಹಾಗೂ ಅಬ್ದುಲ್ ರಝಾಕ್
  • Share this:
ಬೆಂಗಳೂರು (ಡಿ. 05): ಏಕದಿನ ಕ್ರಿಕೆಟ್​ನ ನಂಬರ್ ಒನ್ ಬೌಲರ್, ಟೀಂ ಇಂಡಿಯಾದ ಜಸ್​ಪ್ರೀತ್ ಬುಮ್ರಾ ಬಗ್ಗೆ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಆಟಗಾರ ಅಬ್ದುಲ್ ರಝಾಕ್ ನೀಡುವ ಹೇಳಿಕೆಗೆ ಅಭಿಮಾನಿಗಳು ಸರಿಯಾಗೆ ತಿರುಗೇಟು ನೀಡಿದ್ದಾರೆ.

ನಿನ್ನೆಯಷ್ಟೆ ಪಾಕಿಸ್ತಾನ ವೆಬ್​ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಝಾಕ್, "ನಾನು ಈಗ ಏನಾದರು ಕ್ರಿಕೆಟ್ ಆಡುತ್ತಿದ್ದರೆ ಬೇಬಿ ಬೌಲರ್ ಬುಮ್ರಾ ಎಸೆತವನ್ನು ಸುಲಭವಾಗಿ ಸರಿಯಾಗಿಯೇ ದಂಡಿಸುತ್ತಿದ್ದೆ" ಎಂದು ಹೇಳಿದ್ದರು.

ಅಲ್ಲದೆ "ನನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನಾನು ವಿಶ್ವದ ಶ್ರೇಷ್ಠ ಬೌಲರ್​ಗಳನ್ನು ಎದುರಿಸಿದ್ದೇನೆ. ವಸೀಂ ಅಕ್ರಂ, ಶೋಯೆಬ್ ಅಖ್ತರ್ ಹಾಗೂ ಗ್ಲೆನ್ ಮೆಗ್ರಾತ್ ಅವರಂತಹ ಸ್ಟಾರ್ ವೇಗಿಗಳ ಎದುರು ಆಡಿದ್ದೇನೆ. ಹೀಗಾಗಿ ಬುಮ್ರಾ ವಿರುದ್ಧ ಬ್ಯಾಟ್ ಮಾಡುವುದು ನನಗೆ ಕಷ್ಟದ ವಿಚಾರವೇ ಅಲ್ಲ. ಇವರಿಗೆಲ್ಲ ಹೋಲಿಸಿದರೆ ಬುಮ್ರಾ ನನ್ನ ಮುಂದೆ ಬಚ್ಚಾ" ಎಂದು ರಝಾಕ್ ಹೇಳಿಕೆ ನೀಡಿದ್ದರು.

ಬುಮ್ರಾ ಓರ್ವ ಬೇಬಿ ಬೌಲರ್, ಅವನಿನ್ನೂ ಬಚ್ಚಾ ಎಂದ ಸ್ಟಾರ್ ಕ್ರಿಕೆಟಿಗ

ಇದರಿಂದ ಕೆಂಡಾಮಂಡಲರಾಗಿರುವ ಬುಮ್ರಾ ಅಭಿಮಾನಿಗಳು ರಝಾಕ್​ರನ್ನು ಟ್ರೋಲ್ ಮಾಡುತ್ತಿದ್ದಾರೆ. ರಝಾಕ್ ನೀಡಿರುವ ಹೇಳಿಕೆ ಜೋಕ್ ಆಫ್ ದಿ ಇಯರ್ ಎಂದು ಹೇಳುತ್ತಿದ್ದಾರೆ. ಅಲ್ಲದೆ 2011 ವಿಶ್ವಕಪ್​ನಲ್ಲಿ ಮುನಾಫ್​​ ಪಟೇಲ್ ಎಸೆತದ ನಿಧಾನಗತಿಯ ಸುಲಭ ಚೆಂಡಿಗೆ ರಝಾಕ್ ಬೌಲ್ಡ್​ ಆಗಿರುವ ಫೋಟೋ ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.

  ವಿಂಡೀಸ್ ವಿರುದ್ಧದ ಸರಣಿಯಲ್ಲೂ ಕಣಕ್ಕಿಳಿಯಲ್ಲ ಸ್ಯಾಮ್ಸನ್​; ಯಾಕೆ?, ಇಲ್ಲಿವೆ ಕಾರಣ!

ಇನ್ನು ಕೆಲವರು "ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ನಿಮ್ಮ ಬ್ಯಾಟಿಂಗ್ ಸರಾಸರಿ 30 ದಾಟಿಲ್ಲ. ಹೀಗಿರುವಾಗ ನೀವು ಬುಮ್ರಾ ಅವರನ್ನು ಹಿಂದಕ್ಕಬಹುದು ಎಂದು ಯೋಚಿಸುತ್ತದ್ದೀರಿ. ನಿಮ್ಮ ನಿವೃತ್ತಿಯ ಸಮಯವನ್ನು ಖುಷಿಯಿಂದ ಕಳೆಯಿರಿ" ಎಂದು ಬರೆದುಕೊಂಡಿದ್ದಾರೆ.

 ಇನ್ನೊಬ್ಬರು "6 ಬಾಲ್​ಗೆ 36 ರನ್​ಗಳ ಅವಶ್ಯಕತೆಯಿದೆ. ಬ್ಯಾಟಿಂಗ್ ಅಬ್ದುಲ್ ರಝಾಕ್. ಬೌಲಿಂಗ್ ಜಸ್​ಪ್ರೀತ್ ಬುಮ್ರಾ. ಯಾರು ಗೆಲ್ಲ ಬಹುದು? ಎಂದು ಪ್ರಶ್ನಿಸಿದ್ದಾರೆ.

  

ಹಾರ್ದಿಕ್ ಪಾಂಡ್ಯ ಸ್ಥಾನ ಕಿತ್ತುಕೊಳ್ಳುವುದು ನನ್ನ ಗುರಿಯಲ್ಲ; ಟೀಂ ಇಂಡಿಯಾ ಯುವ ಆಲ್ರೌಂಡರ್

"ನಾನು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಬುಮ್ರಾ ಬೌಲಿಂಗ್ ಮಾಡಲು ಬಂದರೆ ಅವರ ಮೇಲೆ ಒತ್ತಡ ಇರುತ್ತಿತ್ತು, ನನ್ನ ಮೇಲಲ್ಲ. ಸದ್ಯದ ಕ್ರಿಕೆಟ್​ನಲ್ಲಿ ವಿಶ್ವದ ಶ್ರೇಷ್ಠ ಬೌಲರ್ ನನ್ನ ಪ್ರಕಾರ ಬುಮ್ರಾ ಅಲ್ಲ. ಅನೇಕ ಬೌಲರ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ" ಎಂದು ರಝಾಕ್ ಸಂದರ್ಶನದಲ್ಲಿ ಹೇಳಿದ್ದಾರೆ.

ಅಲ್ಲದೆ, "ಬುಮ್ರಾ ಗಣನೀಯ ರೀತಿಯಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಅವರು ಬೌಲಿಂಗ್ ಮಾಡುವ ಶೈಲಿ ವಿಚಿತ್ರವಾಗಿದೆ. ಆದರೂ ಸರಿಯಾದ ಸ್ಥಳದಲ್ಲಿ ಚೆಂಡನ್ನು ಪಿಚ್ ಮಾಡುವುದರಿಂದ ಯಶಸ್ವಿಯಾಗುತ್ತಿದ್ದಾರೆ" ಎಂಬುದು ರಝಾಕ್ ಮಾತಾಗಿತ್ತು.
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ