HOME » NEWS » Sports » CRICKET JOFRA ARCHER DROPPED 3 CATCHES IN 1 INNINGS THE QUESTION OF FIXING IS RAISED

VIDEO: ಹ್ಯಾಟ್ರಿಕ್ ಕ್ಯಾಚ್ ಡ್ರಾಪ್: ಮುಂಬೈಯೊಂದಿಗೆ ಫಿಕ್ಸಿಂಗ್ ಮಾಡಿದ್ರಾ ಜೋಫ್ರಾ ಆರ್ಚರ್​?

ಇನ್ನು 18.3ನೇ ಓವರ್‌ನಲ್ಲಿ ಹಾರ್ದಿಕ್ ನೀಡಿದ ಮತ್ತೊಂದು ಸುಲಭ ಕ್ಯಾಚ್‌ ಹಿಡಿಯುವಲ್ಲಿ ಆರ್ಚರ್​ ವಿಫಲರಾದರು. ಒಂದೇ ಪಂದ್ಯದಲ್ಲಿ ನಿರಂತರ ಮೂರು ಕ್ಯಾಚ್​ಗಳನ್ನು ಕೈ ಚೆಲ್ಲಿದ ಆರ್ಚರ್​ ಆಟದ ಮೇಲೆ ಫಿಕ್ಸಿಂಗ್ ಎಂಬ ಕರಿ ಛಾಯೆ ಆವರಿಸಿದೆ.

zahir | news18
Updated:April 20, 2019, 9:51 PM IST
VIDEO: ಹ್ಯಾಟ್ರಿಕ್ ಕ್ಯಾಚ್ ಡ್ರಾಪ್: ಮುಂಬೈಯೊಂದಿಗೆ ಫಿಕ್ಸಿಂಗ್ ಮಾಡಿದ್ರಾ ಜೋಫ್ರಾ ಆರ್ಚರ್​?
ಆರ್ಚರ್
  • News18
  • Last Updated: April 20, 2019, 9:51 PM IST
  • Share this:
ಐಪಿಎಲ್​ನ 36ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ರಾಜಸ್ಥಾನ್ ರಾಯಲ್ಸ್​ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆಲ್​ರೌಂಡರ್ ಜೋಫ್ರಾ ಆರ್ಚರ್ ನೀಡಿದ ಪ್ರದರ್ಶನದ ಮೇಲೆ ಕರಿ ನೆರಳು ಆವರಿಸಿದೆ.

ಕ್ಯಾಚ್​ ವಿನ್ಸ್​ ದಿ ಮ್ಯಾಚ್​ ಸಿದ್ಧಾಂತವನ್ನು ಹೊಂದಿರುವ ಕ್ರಿಕೆಟ್​ನಲ್ಲಿ ಇಂದು ಜೋಫ್ರಾ ಅಕ್ಷರಶಃ ವಿರುದ್ದವಾಗಿದ್ದರು. ಅದು ಕೂಡ ಮೂರು ಸುಲಭ ಕ್ಯಾಚ್​ಗಳನ್ನು ಕೈ ಚೆಲ್ಲುವ ಮೂಲಕ. ಮೂರನೇ ಓವರ್​ನಲ್ಲೇ ಮುಂಬೈ ಆಘಾತ ನೀಡಿದ್ದ ಕನ್ನಡಿಗ ಶ್ರೇಯಸ್ ಗೋಪಾಲ್ ಅವರಿಗೆ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆಯುವ ಅವಕಾಶವಿತ್ತು. ಶ್ರೇಯಸ್​ರ ಅಂತಿಮ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಡಿ ಕೊಕ್​ ಕ್ಯಾಚ್​ನ್ನು ಆರ್ಚರ್​ ಕೈ ಚೆಲ್ಲಿ ನಿರಾಸೆ ಮೂಡಿಸಿದರು. ಇದರ ಪರಿಣಾಮ ರಾಜಸ್ಥಾನ್ ಭಾರೀ ಬೆಲೆ ತೆರಬೇಕಾಯಿತು. 6 ರನ್ ವೇಳೆ ಜೀವದಾನ ಪಡೆದ ಡಿ ಕೊಕ್ ಬಳಿಕ ಸ್ಪೋಟಕ ಆಟವಾಡಿ ಆರು ಬೌಂಡರಿ ಹಾಗೂ 2 ಸಿಕ್ಸರ್​ನೊಂದಿಗೆ 65 ರನ್​ಗಳಿಸಿದರು.

ಇನ್ನು ಟಿ20 ಕ್ರಿಕೆಟ್​ನ ಅತ್ಯಂತ ಮುಖ್ಯ ಘಟ್ಟವಾದ ಅಂತಿಮ ಓವರ್​ಗಳಲ್ಲಿ ಮತ್ತದೇ ತಪ್ಪನ್ನು ಆರ್ಚರ್ ಮಾಡಿದರು. 17ನೇ ಓವರ್​ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಸುಲಭ ಕ್ಯಾಚ್​ನ್ನು ಕೈಬಿಟ್ಟ ಆರ್ಚರ್ ಮತ್ತೊಮ್ಮೆ ಆರ್​ಆರ್​ ತಂಡಕ್ಕೆ ಶಾಕ್ ನೀಡಿದರು. ಈ ಬಳಿಕ ಪಾಂಡ್ಯ ಒಂದು ಸಿಕ್ಸರ್ ಸಿಡಿಸಿ ತಂಡದ ಮೊತ್ತಕ್ಕೆ 6 ರನ್​ ಪೇರಿಸಿದರು.

ಇದನ್ನೂ ಓದಿ: RR vs MI: ಸ್ಮಿತ್ ಆಕರ್ಷಕ ಅರ್ಧಶತಕ: ರಾಯಲ್ಸ್​ ವಿರುದ್ಧ ಮತ್ತೆ ಮಂಡಿಯೂರಿದ ಮುಂಬೈ

ಇನ್ನು 18.3ನೇ ಓವರ್‌ನಲ್ಲಿ ಹಾರ್ದಿಕ್ ನೀಡಿದ ಮತ್ತೊಂದು ಸುಲಭ ಕ್ಯಾಚ್‌ ಹಿಡಿಯುವಲ್ಲಿ ಆರ್ಚರ್​ ವಿಫಲರಾದರು. ಒಂದೇ ಪಂದ್ಯದಲ್ಲಿ ನಿರಂತರ ಮೂರು ಕ್ಯಾಚ್​ಗಳನ್ನು ಕೈ ಚೆಲ್ಲಿದ ಆರ್ಚರ್​ ಆಟದ ಮೇಲೆ ಫಿಕ್ಸಿಂಗ್ ಎಂಬ ಕರಿ ಛಾಯೆ ಆವರಿಸಿದೆ. ಅತ್ಯುತ್ತಮ ಆಟಗಾರನಾಗಿರುವ ಆರ್ಚರ್​ ಸುಲಭ ಕ್ಯಾಚುಗಳನ್ನು ಕೈ ಬಿಟ್ಟಿರುವು ಹಲವು ಕ್ರಿಕೆಟ್​ ಪ್ರೇಮಿಗಳಲ್ಲಿ ಸಂಶಯ ಮೂಡುವಂತೆ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಆರ್ಚರ್ ಮುಂಬೈ ವಿರುದ್ಧ ಫಿಕ್ಸ್ ಆಗಿದ್ದಾರೆ ಎಂದು ಕೆಲವರು ದೂರುತ್ತಿದ್ದಾರೆ.ಆಟದಲ್ಲಿ ಕ್ಯಾಚ್​ಗಳು ಕೈ ಚೆಲ್ಲುವುದು ಸಾಮಾನ್ಯ. ಅದರಲ್ಲೂ ಒಂದೇ ಪಂದ್ಯದಲ್ಲಿ ಒಬ್ಬ ಆಟಗಾರನೇ ಮೂರು ಕ್ಯಾಚ್ ಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ಫಿಕ್ಸಿಂಗ್​ ಅಥವಾ ಆಟಗಾರನ ಕ್ಷೇತ್ರ ರಕ್ಷಣೆಯಲ್ಲಿನ ವಿಫಲತೆಯೇ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
First published: April 20, 2019, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories