Jasprit Bumrah: ಟೀಮ್ ಇಂಡಿಯಾ ವೇಗಿಯ ಎಡವಟ್ಟು: ಮೈದಾನಕ್ಕಿಳಿದು ಮತ್ತೆ ಡ್ರೆಸಿಂಗ್ ರೂಮಿಗೆ ಓಡಿದ ಬುಮ್ರಾ

ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 217 ರನ್​ಗಳಿಸಿದರೆ, ನ್ಯೂಜಿಲೆಂಡ್ ತಂಡ 249 ರನ್ ಬಾರಿಸಿ 32 ರನ್​ಗಳ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ 5ನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವು 148 ರನ್​ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.

Jasprit Bumrah

Jasprit Bumrah

  • Share this:
    ಭಾರತ-ನ್ಯೂಜಿಲೆಂಡ್​ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 217 ರನ್​ಗಳಿಸಿದರೆ, ನ್ಯೂಜಿಲೆಂಡ್ ತಂಡ 249 ರನ್ ಬಾರಿಸಿ 32 ರನ್​ಗಳ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ 5ನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವು 148 ರನ್​ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿದ್ದ ಕಿವೀಸ್ ಬ್ಯಾಟ್ಸ್​ಮನ್​ಗಳಿಗೆ ಟೀಮ್ ಇಂಡಿಯಾ ವೇಗಿಗಳು ಆಘಾತ ನೀಡಿದರು. ಇದೇ ವೇಳೆ ಭಾರತ ತಂಡದ ವೇಗಿ ಜಸ್​ಪ್ರೀತ್ ಬುಮ್ರಾ ಎಡವಟ್ಟೊಂದನ್ನು ಮಾಡಿದ್ದರು.

    ಮಳೆಯಿಂದಾಗಿ ಐದನೇ ದಿನದಾಟ ಒಂದು ಗಂಟೆ ತಡವಾಗಿ ಆರಂಭವಾಗಿತ್ತು. ಅತ್ತ ಡ್ರೆಸಿಂಗ್ ರೂಮ್​ನಲ್ಲೇ ಹೆಚ್ಚಿನ ಸಮಯ ಕಳೆದಿದ್ದರಿಂದ ಬುಮ್ರಾ ಟೀಮ್ ಇಂಡಿಯಾದ ಹಳೆಯ ಜರ್ಸಿ ತೊಟ್ಟು ಮೈದಾನಕ್ಕಿಳಿದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಜೆರ್ಸಿ ಧರಿಸಲು ಮರೆತಿದ್ದ ಬುಮ್ರಾ ಹಳೆಯ ಜೆರ್ಸಿಯಲ್ಲೇ ಮೊದಲ ಓವರ್ ಬೌಲಿಂಗ್ ಮಾಡಿದ್ದರು.



    ಆ ಬಳಿಕ ತಪ್ಪಿನ ಅರಿವಾಗುತ್ತಿದ್ದಂತೆ ಮತ್ತೆ ಡ್ರೆಸಿಂಗ್ ರೂಮ್​ನತ್ತ ಓಡಿದರು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಜೆರ್ಸಿ ಧರಿಸಿ ಮತ್ತೆ ಮೈದಾನಕ್ಕೆ ಆಗಮಿಸಿದರು. ಇದೀಗ ಬುಮ್ರಾ ಅವರು ಹಳೆಯ ಜೆರ್ಸಿಯಲ್ಲಿ ಕಣಕ್ಕಿಳಿದಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



    ಒಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ನಲ್ಲಿ ಆಟಕ್ಕಿಂತ ಮಳೆಯಾಟವೇ ಹೆಚ್ಚಾಗಿದ್ದರಿಂದ ಬುಮ್ರಾ ಗೊಂದಲಕ್ಕೀಡಾಗಿದ್ದಾರೆ ಎಂದೇ ಹೇಳಬಹುದು.










    HOME » NEWS » SPORTS » CRICKET INDIA VS NEW ZEALAND WTC FINAL NEW ZEALAND 249 ALL OUT ZP



    WTC Final: ಶಮಿ ನಿಖರ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್: ಮೀಸಲು ದಿನದಾಟದಲ್ಲಿ ಫಲಿತಾಂಶದ ನಿರೀಕ್ಷೆ


    ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣದಿಂದ ಪಂದ್ಯವು ಸ್ಥಗಿತಗೊಂಡಿದ್ದರೆ ಆ ಸಮಯವನ್ನು ಹೊಂದಿಸಲು ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.





    WTC Final: ಶಮಿ ನಿಖರ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್: ಮೀಸಲು ದಿನದಾಟದಲ್ಲಿ ಫಲಿತಾಂಶದ ನಿರೀಕ್ಷೆ
    Team India







    • SHARE THIS:






    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಐತಿಹಾಸಿಕ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ತಂಡ 249 ರನ್​ಗಳಿಗೆ ಸರ್ವಪತನ ಕಂಡಿದೆ. ಭಾರತ ಪ್ರಥಮ ಇನಿಂಗ್ಸ್​ನಲ್ಲಿ ನೀಡಿದ 217 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಕಿವೀಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ವೇಗಿಗಳು ಯಶಸ್ವಿಯಾದರು. 3ನೇ ದಿನ 2 ವಿಕೆಟ್ ನಷ್ಟಕ್ಕೆ 101 ರನ್​ಗಳಿಸಿದ್ದ ನ್ಯೂಜಿಲೆಂಡ್ 5ನೇ ದಿನ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿತು. ತಂಡದ ಮೊತ್ತಕ್ಕೆ 33 ರನ್​ ಸೇರ್ಪಡೆಯಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.

    ಇದಾಗ್ಯೂ ನಾಯಕ ಕೇನ್ ವಿಲಿಯಮ್ಸನ್ ಮಾತ್ರ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು. ಪರಿಣಾಮ 177 ಎಸೆತಗಳನ್ನು ಎದುರಿಸಿದ ಕೇನ್ 49 ರನ್​ಗಳನ್ನು ಬಾರಿಸಿದರು. ಈ ಮೂಲಕ ದಿಢೀರ್ ಕುಸಿತವನ್ನು ತಡೆಯುವಲ್ಲಿ ಯಶಸ್ವಿಯಾದರು. ಇದಾಗ್ಯೂ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಕಿವೀಸ್ ಆಟಗಾರರು ಪರದಾಡಿದರು.





    192 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್​ಗೆ ಅಂತಿಮ ಹಂತದಲ್ಲಿ ಟಿಮ್ ಸೌಥಿ ಆಸರೆಯಾದರು. ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ ಕೊನೆಯ ಹಂತದಲ್ಲಿ 30 ರನ್​ ಬಾರಿಸುವ ಮೂಲಕ ತಂಡಕ್ಕೆ 32 ರನ್​ಗಳ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ವೇಗಿ ಮೊಹಮ್ಮದ್ ಶಮಿ 76 ರನ್‌ಗಳಿಗೆ 4 ವಿಕೆಟ್ ಪಡೆದರು. ಶಮಿಗೆ ಉತ್ತಮ ಸಾಥ್ ನೀಡಿದ ಇಶಾಂತ್ ಶರ್ಮಾ 48 ರನ್​ಗಳಿಗೆ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದೀಗ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ ಆರಂಭಿಸಿದೆ.

    ಮೀಸಲು ದಿನಕ್ಕೆ ಪಂದ್ಯ ಮುಂದುವರಿಕೆ:

    ಮೊದಲ ದಿನ ಮಳೆಗೆ ಆಹುತಿಯಾದ ಕಾರಣ ಎರಡನೇ ದಿನ ಪಂದ್ಯವನ್ನು ಆರಂಭಿಸಲಾಗಿತ್ತು. ಅದರಂತೆ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 146 ರನ್ ಬಾರಿಸಿತ್ತು. ಈ ವೇಳೆ ಮಂದ ಬೆಳಕಿನ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಮೂರನೇ ದಿನ ಭಾರತ 217 ರನ್​ಗಳಿಗೆ ಸರ್ವಪತನ ಕಂಡರೆ, ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಕಲೆಹಾಕಿತ್ತು. ಆದರೆ ನಾಲ್ಕನೇ ದಿನ ಕೂಡ ಸಂಪೂರ್ಣ ಮಳೆಗೆ ಆಹುತಿಯಾದ ಕಾರಣ ಪಂದ್ಯ ನಡೆದಿರಲಿಲ್ಲ. ಇದೀಗ 5ನೇ ದಿನದಲ್ಲಿ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್​ನಲ್ಲಿ 249 ರನ್​ಗಳಿಗೆ ಆಲೌಟ್ ಆಗಿದೆ. ಇನ್ನು ಉಭಯ ತಂಡಗಳ ಎರಡನೇ ಇನಿಂಗ್ಸ್ ನಡೆದರೆ ಮಾತ್ರ ಫಲಿತಾಂಶವನ್ನು ನಿರೀಕ್ಷಿಸಬಹುದು.

    ಇತ್ತ ಐಸಿಸಿ ಹೊಸ ನಿಯಮದಂತೆ ಮೀಸಲು ದಿನ ಆಟ ಮುಂದುವರೆಯಲಿದೆ. ಅಂದರೆ 6ನೇ ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣದಿಂದ ಪಂದ್ಯವು ಸ್ಥಗಿತಗೊಂಡಿದ್ದರೆ ಆ ಸಮಯವನ್ನು ಹೊಂದಿಸಲು ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಅದರಂತೆ ಮಳೆಯಿಂದ ರದ್ದಾದ ಪಂದ್ಯದ ಸಮಯವನ್ನು ಹೊಂದಿಸಲು ಹೆಚ್ಚುವರಿ ದಿನದಲ್ಲಿ (6ನೇ ದಿನ) ಪಂದ್ಯವನ್ನು ಆಡಲಾಗುತ್ತದೆ. 6ನೇ ದಿನದಲ್ಲಿ ಫಲಿತಾಂಶ ಮೂಡಿಬರದಿದ್ದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು.







    Published by:zahir
    First published: