Jasprit Bumrah: ಕ್ಯಾಪ್ಟನ್ಸಿ ಜವಾಬ್ದಾರಿ ಕೊಟ್ಟರೆ ಖುಷಿಯಿಂದ ಹೊರಲು ಸಿದ್ಧ: ಜಸ್​ಪ್ರೀತ್ ಬುಮ್ರಾ

India Test Team Captaincy: ಭಾರತ ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಸ್ಥಾನಕ್ಕೆ ಯಾರಿಗೆ ಜವಾಬ್ದಾರಿ ಕೊಡಬಹುದು ಎಂಬ ಆಲೋಚನೆ ಬಿಸಿಸಿಐ ವಲಯದಲ್ಲಿ ನಡೆದಿದೆ. ಫಾಸ್ಟ್ ಬೌಲರ್ ಬೂಮ್ರಾ ಹೆಸರೂ ಕ್ಯಾಪ್ಟನ್ಸಿಗೆ ಪರಿಗಣಿತವಾಗಿದೆ. ಈ ಬಗ್ಗೆ ಅವರ ರಿಯಾಕ್ಷನ್ಸ್ ಇಲ್ಲಿವೆ…

ಜಸ್​ಪ್ರೀತ್ ಬುಮ್ರಾ

ಜಸ್​ಪ್ರೀತ್ ಬುಮ್ರಾ

 • Share this:
  ನವದೆಹಲಿ, ಜ. 17: ಟೀಮ್ ಇಂಡಿಯಾದ ನಾಯಕತ್ವದ ಜವಾಬ್ದಾರಿ ಕೊಟ್ಟರೆ ಆ ಅವಕಾಶವನ್ನು ಸ್ವೀಕರಿಸುವುದಾಗಿ ಭಾರತದ ವೇಗದ ಬೌಲರ್ ಜಸ್​ಪ್ರೀತ್ ಬುಮ್ರಾ (Team India Fast Bowler Jasprit Bumrah) ಹೇಳಿದ್ದಾರೆ. ಟೆಸ್ಟ್ ತಂಡದ ಕ್ಯಾಪ್ಟನ್ಸಿಯನ್ನು ವಿರಾಟ್ ಕೊಹ್ಲಿ ತ್ಯಜಿಸಿರುವ (Virat Kohli leaving test team captaincy) ಹಿನ್ನೆಲೆಯಲ್ಲಿ ಹೊಸ ನಾಯಕನ ಶೋಧ ನಡೆದಿದ್ದು, ಅದರಲ್ಲಿ ಜಸ್​ಪ್ರೀತ್ ಬುಮ್ರಾ ಅವರ ಹೆಸರೂ ಕೇಳಿಬಂದಿದೆ. ಸೌತ್ ಆಫ್ರಿಕಾ ವಿರುದ್ಧದ ಓಡಿಐ ಸರಣಿಯಲ್ಲಿ ಭಾರತ ತಂಡಕ್ಕೆ ಬುಮ್ರಾ ಉಪನಾಯಕನಾಗಿದ್ದಾರೆ. ಟೆಸ್ಟ್ ತಂಡದ ಕ್ಯಾಪ್ಟನ್ಸಿಯನ್ನ ಬೂಮ್ರಾಗೆ ಕೊಟ್ಟು ಪ್ರಯೋಗ ಮಾಡುವ ಸಾಧ್ಯತೆ ಇಲ್ಲದಿಲ್ಲ. ಹಾಗೊಂದು ವೇಳೆ ಆದಲ್ಲಿ ಕಪಿಲ್ ದೇವ್ ಬಳಿಕ ಟೀಮ್ ಇಂಡಿಯಾಗೆ ವೇಗದ ಬೌಲರ್​ವೊಬ್ಬರು ನಾಯಕರಾದಂತಾಗುತ್ತದೆ.

  ಟೀಮ್ ಇಂಡಿಯಾ ಕ್ಯಾಪ್ಟನ್ಸಿ ಸಿಗುವ ಸಾಧ್ಯತೆ ಬಗ್ಗೆ ಮಾಧ್ಯಮದವರು ಜಸ್​ಪ್ರೀತ್ ಬುಮ್ರಾ ಅವರನ್ನ ಕೇಳಿದಾಗ ಅವರು, ಇಂಥದ್ದೊಂದು ಅವಕಾಶ ಸಿಕ್ಕರೆ ಅದು ತಮಗೆ ಸಿಗುವ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.

  “ಈ ಅವಕಾಶ ಸಿಕ್ಕರೆ ಅದೊಂದು ಗೌರವ ಪ್ರಾಪ್ತಿಯಾದಂತೆ. ಯಾವ ಆಟಗಾರನಾಗಲೀ ಈ ಅವಕಾಶ ನಿರಾಕರಿಸುವುದಿಲ್ಲ. ಇದಕ್ಕೆ ನಾನೂ ಹೊರತಲ್ಲ. ಯಾವುದೇ ನಾಯಕತ್ವ ಗುಂಪಾಗಲೀ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡುತ್ತೇನೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಜಸ್​ಪ್ರೀತ್ ಬುಮ್ರಾ ಹೇಳಿದ್ಧಾರೆ.

  ಇದನ್ನೂ ಓದಿ: PKL 8: ಬೆಂಗಾಲ್ ವಿರುದ್ದ ಟೈಟಾನ್ಸ್​ಗೆ ವೀರೋಚಿತ ಸೋಲು; ಪಲ್ಟನ್​ಗೆ ಸೋಲುಣಿಸಿದ ಯೋದ್ಧಾ

  ಸೌತ್ ಆಫ್ರಿಕಾ ವಿರುದ್ಧದ ಓಡಿಐ ಸರಣಿಯಲ್ಲಿ ರೋಹಿತ್ ಶರ್ಮಾ ಅಲಭ್ಯರಿರುವ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಅವರಿಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಲಾಗಿದೆ. ಜಸ್​ಪ್ರೀತ್ ಬುಮ್ರಾ ವೈಸ್ ಕ್ಯಾಪ್ಟನ್ ಆಗಿದ್ಧಾರೆ. ಈ ವಿಚಾರವನ್ನು ಪ್ರಸ್ತಾಪಿಸಿದರ ಅವರು, ತಮಗೆ ಜವಾಬ್ದಾರಿ ತೆಗೆದುಕೊಳ್ಳುವುದು ಹಾಗೂ ತಂಡದ ಆಟಗಾರರಿಗೆ ನೆರವಾಗುವ ಕಾರ್ಯ ಬಹಳ ಸಹಜವಾಗಿ ಬರುತ್ತದೆ ಎಂದಿದ್ದಾರೆ.

  “ಟೆಸ್ಟ್ ನಾಯಕತ್ವದ ಅವಕಾಶ ಸಿಕ್ಕರೆ ಇದೇ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸುತ್ತೇನೆ. ಜವಾಬ್ದಾರಿ ತೆಗೆದುಕೊಂಡು ಆಟಗಾರರೊಂದಿಗೆ ಮಾತನಾಡಿ ಅವರಿಗೆ ನೆರವಾಗುವುದು ಆಗಿನಿಂದಲೂ ಇರುವ ನನ್ನ ಧೋರಣೆ ಆಗಿದೆ. ಮುಂದೆ ಯಾವುದೇ ಪರಿಸ್ಥಿತಿ ಬಂದರೂ ನನ್ನ ಧೋರಣೆ ಇದೇ ಆಗಿರುತ್ತದೆ” ಎಂದು ಜಸ್​ಪ್ರೀತ್ ಬೂಮ್ರಾ ಸ್ಪಷ್ಟಪಡಿಸಿದ್ದಾರೆ.

  ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಸಿ ತ್ಯಜಿಸಿದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಮ್ರಾ, ಇದು ವಿರಾಟ್ ಕೊಹ್ಲಿ ಅವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

  ಇದನ್ನೂ ಓದಿ: ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ಮೂವರ ಹೆಸರು; ಯಾರ ಒಲವು ಯಾರತ್ತ, ಒಂದು ನೋಟ

  “ನೋಡಿ, ನಾನು ವಿರಾಟ್ ಕೊಹ್ಲಿ ಅವರ ನಿರ್ಧಾರದ ಬಗ್ಗೆ ಟಿಪ್ಪಣಿ ಮಾಡಲು ಬಂದಿಲ್ಲ. ಇದು ಅವರ ವೈಯಕ್ತಿಕ ನಿರ್ಧಾರ. ನಾವು ಇದನ್ನ ಗೌರವಿಸುತ್ತೇನೆ. ಅವರ ಶರೀರ ಹೇಗೆ ಸ್ಪಂದಿಸುತ್ತಿದೆ ಮತ್ತು ಅವರು ಮನಸು ಯಾವ ಸ್ಥಿತಿಯಲ್ಲಿ ಇದೆ ಎಂಬುದು ಅವರಿಗೆ ಗೊತ್ತಿರುತ್ತದೆ. ನಾವು ಅದನ್ನು ಗೌರವಿಸುತ್ತೇವೆ. ನಾನು ಅವರ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು. ಅವರ ನಾಯಕತ್ವದಲ್ಲಿ ಆಡಲು ಬಹಳ ಖುಷಿ ಆಗಿತ್ತು. ಈ ಮುಂಚೆ ಹೇಳಿದ ಆಗೆ ವಿರಾಟ್ ಕೊಹ್ಲಿ ಅವರಿದ್ದರೆ ತಂಡಕ್ಕೆ ಒಂದು ಶಕ್ತಿ ಸಂಚಯ ಆದಂತೆ. ಅವರು ಯಾವಾಗಲೇ ಆದರೂ ತಂಡದಲ್ಲಿ ಇದ್ದರೆ ನಾಯಕನಂತೆಯೇ. ತಂಡಕ್ಕೆ ಅವರ ಕೊಡುಗೆ ಬಹಳ ದೊಡ್ಡದು. ಮುಂದೆಯೂ ಅವರ ಕೊಡಗೆ ಅಗಾಧವಾಗಿರುತ್ತದೆ” ಎಂದು ಬೂಮ್ರಾ ಹೇಳಿದ್ಧಾರೆ.
  Published by:Vijayasarthy SN
  First published: