HOME » NEWS » Sports » CRICKET JASPRIT BUMRAH PLAYS SAFE WHEN ASKED TO PICK ONE HOTTER ACTRESS BETWEEN ANUSHKA SHARMA AND DEEPIKA PADUKONE VB

ಅನುಷ್ಕಾ ಶರ್ಮಾ-ದೀಪಿಕಾ ಇವರಲ್ಲಿ ಯಾರು ಹಾಟ್?; ಯಾರ್ಕರ್ ಪ್ರಶ್ನೆಗೆ ಬುಮ್ರಾ ಉತ್ತರವೇನು ಗೊತ್ತಾ?

ಬಾಲಿವುಡ್ ತಾರೆಯರಾದ ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಟೆ ಇವರಿಬ್ಬರಲ್ಲಿ ಹಾಟೆಸ್ಟ್​​ ನಟಿ ಯಾರು? ಎಂಬ ಪ್ರಶ್ನೆಯನ್ನು ಆ್ಯಂಕರ್ ಬುಮ್ರಾ ಅವರಿಗೆ ಕೇಳಿದ್ದಾರೆ. ಇದಕ್ಕೆ ಬುಮ್ರಾ ನೀಡಿದ ಉತ್ತರ...

Vinay Bhat | news18-kannada
Updated:September 10, 2019, 3:21 PM IST
ಅನುಷ್ಕಾ ಶರ್ಮಾ-ದೀಪಿಕಾ ಇವರಲ್ಲಿ ಯಾರು ಹಾಟ್?; ಯಾರ್ಕರ್ ಪ್ರಶ್ನೆಗೆ ಬುಮ್ರಾ ಉತ್ತರವೇನು ಗೊತ್ತಾ?
ಅನುಷ್ಕಾ ಶರ್ಮಾ, ಬುಮ್ರಾ ಮತ್ತು ದೀಪಿಕಾ ಪಡುಕೋಣೆ
  • Share this:
ಬೆಂಗಳೂರು (ಸೆ. 10): ಟೀಂ ಇಂಡಿಯಾದ ಬಹುಬೇಡಿಕೆಯ ಆಟಗಾರ ಜಸ್​ಪ್ರೀತ್ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮೂಲಕ ಬೆಳಕಿಗೆ ಬಂದ ಬುಮ್ರಾ ಯಾರ್ಕರ್ ಸ್ಪೆಷಲಿಸ್ಟ್​ ಎಂದೇ ಫೇಮಸ್.

ಇತ್ತೀಚೆಗಷ್ಟೆ ಫೋಟೋ ಶೂಟ್ ಮಾಡಿಸಿ ವೈರಲ್ ಆಗಿದ್ದ ಬುಮ್ರಾ, ಈಗ ಯೂ ಟ್ಯೂಬ್ ಚಾನಲ್​​ವೊಂದಕ್ಕೆ ನೀಡಿದ ಸಂದರ್ಶನದ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್​ಗೆ ಆ್ಯಂಕರ್​ ಯಾರ್ಕರ್ ಪ್ರಶ್ನೆ ಬಿಟ್ಟಿದ್ದಾರೆ.

'ಬಾಲಿವುಡ್ ತಾರೆಯರಾದ ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಟೆ ಇವರಿಬ್ಬರಲ್ಲಿ ಹಾಟೆಸ್ಟ್​​ ನಟಿ ಯಾರು?' ಎಂಬ ಪ್ರಶ್ನೆಯನ್ನು ಆ್ಯಂಕರ್ ಬುಮ್ರಾ ಅವರಿಗೆ ಕೇಳಿದ್ದಾರೆ. ಅನುಷ್ಕಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಆಗಿರುವುದರಿಂದ ಎಚ್ಚರಿಕೆಯಿಂದ ಉತ್ತರ ನೀಡಿದ ಎಂದು ಆ್ಯಂಕರ್ ಬುಮ್ರಾಗೆ ಒತ್ತಿ ಹೇಳಿದರು.

Jasprit Bumrah responds cheekily when asked to pick the hotter actress between Anushka Sharma and Deepika Padukone
ಜಸ್​ಪ್ರೀತ್ ಬುಮ್ರಾ, ಟೀಂ ಇಂಡಿಯಾ ಆಟಗಾರ


ಆರಂಭದಲ್ಲಿ ಗಡಿಬಿಡಿ ಆದ ಬುಮ್ರಾ ಸ್ವಲ್ಪ ಸಮಯ ತೆಗೆದುಕೊಂಡು ದೀಪಿಕಾ ಪಡುಕೋಣೆ ಎಂದು ಹೇಳಿದರು. ಅಲ್ಲದೆ 'ಇದು ನನ್ನ ಸೇಫ್ ಉತ್ತರವಲ್ಲ, ನನಗೆ ನಿಜಕ್ಕೂ ದೀಪಿಕಾ ಅವರೇ ಹಾಟ್ ನಟಿ' ಎಂದು ಉತ್ತರಿಸಿದರು. ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಜೊತೆ ಬುಮ್ರಾ ಕ್ರಿಕೆಟ್ ಹೊರತಾಗಿಯು ಬುಮ್ರಾ ಉತ್ತಮ ಬಾಂಧವ್ಯ ಹೊಂದಿದ್ದಾರೆ.

Happy Birthday Manish Pandey: ಆರ್ಮಿ ಸೇರಬೇಕಿದ್ದ ಪಾಂಡೆ ಕ್ರಿಕೆಟರ್​​ ಆಗಿದ್ದು ಹೇಗೆ?; ಕನ್ನಡಿಗನ ಬಗ್ಗೆ ನಿಮಗೆ ತಿಳಿದಿರದ ಸೀಕ್ರೆಟ್ ಇಲ್ಲಿದೆ!

ಇನ್ನು 'ಅಲಿಯಾ ಭಟ್ ಹಾಗೂ ಪರಿಣಿತಿ ಚೋಪ್ರಾ ಅವರಲ್ಲಿ ನಿಮ್ಮ ಪ್ರಕಾರ ಯಾರು ತುಂಬಾ ಫನ್?' ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೂ ಸೇಫ್ ಆಗಿ ಉತ್ತರ ನೀಡಿದ ಬುಮ್ರಾ, 'ನಾನು ಅಲಿಯಾ ಅವರ ಹೆಚ್ಚಿನ ಸಿನಿಮಾ ನೋಡಿದ್ದೇನೆ, ಹಾಗಾಗಿ ಅಲಿಯಾ' ಎಂದು ಹೇಳಿದರು. ಇದಕ್ಕೆ ಆ್ಯಂಕರ್ 'ನೀವು ಅಲಿಯಾ ಅವರನ್ನು ಇಷ್ಟ ಪಡುತ್ತೀರ?' ಎಂದು ಕೇಳಿದ್ದಾರೆ. 'ನಾನು ಅಲಿಯಾ ನಟಿಸಿದ ಹೆಚ್ಚಿನ ಚಿತ್ರಗಳನ್ನು ನೋಡಿದ್ದೇನೆ. ಪರಿಣಿತಿ ಅವರ ಸಿನಿಮಾ ನೋಡಿಲ್ಲ. ಹೀಗಾಗಿ ಅಲಿಯಾ ಹೆಸರು ತೆಗೊಂಡೆ ಅಷ್ಟೆ!' ಎಂಬ ಉತ್ತರ ನೀಡಿದರು.ಸದ್ಯ ವೆಸ್ಟ್​ ಇಂಡೀಸ್ ಪ್ರವಾಸ ಮುಗಿಸಿ ತವರಿನಲ್ಲಿರುವ ಭಾರತ ಕೆಲವೆ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆರಂಭಿಸಲಿದೆ. ಸೆ. 15 ರಂದು ಧರ್ಮಶಾಲದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ.

ಬುಮ್ರಾ ಜೊತೆಗಿನ ಸಂದರ್ಶನದ ವಿಡಿಯೋ ಇಲ್ಲಿದೆ:

First published: September 10, 2019, 3:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading