ರಾಖಿ ಕಟ್ಟಿಸಿಕೊಂಡ ಬೂಮ್ರಾ; ಪ್ರತಿ ವರ್ಷ ಇದನ್ನೊಂದು ಮಿಸ್​ ಮಾಡಲ್ಲ ಅಂದ್ರು ಯಾರ್ಕರ್​ ಕಿಂಗ್​

ಆಗಸ್ಟ್​ 15ರಂದು ವೆಸ್ಟ್​ ಇಂಡೀಸ್​​​ ವಿರುದ್ಧ ಆರಂಭಗೊಳ್ಳುಲಿರುವ ಟೆಸ್ಟ್​ ಸರಣಿಗಾಗಿ ಬೂಮ್ರಾ ಕೆರಿಬಿಯನ್​ ಪ್ರವಾಸ ಕೈಗೊಳ್ಳಬೇಕಾಗಿದ್ದು, ಹೀಗಾಗಿ ಇಂದು ಮನೆಯಲ್ಲಿ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ.

news18
Updated:August 13, 2019, 9:09 PM IST
ರಾಖಿ ಕಟ್ಟಿಸಿಕೊಂಡ ಬೂಮ್ರಾ; ಪ್ರತಿ ವರ್ಷ ಇದನ್ನೊಂದು ಮಿಸ್​ ಮಾಡಲ್ಲ ಅಂದ್ರು ಯಾರ್ಕರ್​ ಕಿಂಗ್​
ಬೂಮ್ರಾ
  • News18
  • Last Updated: August 13, 2019, 9:09 PM IST
  • Share this:
ನವಹೆಹಲಿ: ಟೆಸ್ಟ್ ಸರಣಿಗಾಗಿ ವೆಸ್ಟ್​ ಇಂಡೀಸ್​​ ಪ್ರವಾಸಕ್ಕೆ ತೆರಳುವ ಮುನ್ನ ಬೂಮ್ರಾ ತನ್ನ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಜೊತೆಗೆ ರಕ್ಷಾ ಬಂಧನ ಆಚರಣೆ ಮಾಡಲು ದೇಶದ ಜನರು ಮುಂದಾಗಿದ್ದಾರೆ. ಆದರೆ ಟೀಂ ಇಂಡಿಯಾದ ಯಾರ್ಕರ್​ ಕಿಂಗ್​ ಬೂಮ್ರಾ ಎರಡು ದಿನ ಮುಂಚಿತವಾಗಿಯೇ ರಕ್ಷಾ ಬಂಧನ ಆಚರಣೆ ಮಾಡಿಕೊಂಡಿದ್ದಾರೆ.

ಆಗಸ್ಟ್​ 15ರಂದು ವೆಸ್ಟ್​ ಇಂಡೀಸ್​​​ ವಿರುದ್ಧ ಆರಂಭಗೊಳ್ಳುಲಿರುವ ಟೆಸ್ಟ್​ ಸರಣಿಗಾಗಿ ಬೂಮ್ರಾ ಕೆರಿಬಿಯನ್​ ಪ್ರವಾಸ ಕೈಗೊಳ್ಳಬೇಕಾಗಿದ್ದು, ಹೀಗಾಗಿ ಇಂದು ಮನೆಯಲ್ಲಿ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಜೊತೆಗೆ ಈ ಸಂಭ್ರಮವನ್ನು ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಡ್ಯುಟಿಗೆ ಹಾಜರಾಗಬೇಕಿರುವ ಕಾರಣ, ರಕ್ಷಾ ಬಂಧನ ಮಿಸ್​​ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಬ್ಬವನ್ನು ಸಹೋದರಿ ಜುಹಿಕಾ ಜತೆ ಆಚರಣೆ ಮಾಡಿಕೋಂಡಿರುವೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ: ಡಿ.ವಿ. ಸದಾನಂದಗೌಡ



Loading...

ಟಿ-20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆಕೊಂಡಿದ್ದ ಬೂಮ್ರಾ ಇದೀಗ ಟೆಸ್ಟ್​ ಸರಣಿಯಲ್ಲಿ ಸೇರಿಕೊಳ್ಳಲ್ಲಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಎರಡು ಟೆಸ್ಟ್​ ಪಂದ್ಯ ಆಡಲಿದೆ.
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...