ಬುಮ್ರಾ ಓರ್ವ ಬೇಬಿ ಬೌಲರ್, ಅವನಿನ್ನೂ ಬಚ್ಚಾ ಎಂದ ಸ್ಟಾರ್ ಕ್ರಿಕೆಟಿಗ

ನಾನು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಬುಮ್ರಾ ಬೌಲಿಂಗ್ ಮಾಡಲು ಬಂದರೆ ಅವರ ಮೇಲೆ ಒತ್ತಡ ಇರುತ್ತಿತ್ತು, ನನ್ನ ಮೇಲಲ್ಲ. ಸದ್ಯದ ಕ್ರಿಕೆಟ್​ನಲ್ಲಿ ವಿಶ್ವದ ಶ್ರೇಷ್ಠ ಬೌಲರ್ ನನ್ನ ಪ್ರಕಾರ ಬುಮ್ರಾ ಅಲ್ಲ- ಅಬ್ದುಲ್ ರಝಾಕ್

news18-kannada
Updated:December 5, 2019, 9:29 AM IST
ಬುಮ್ರಾ ಓರ್ವ ಬೇಬಿ ಬೌಲರ್, ಅವನಿನ್ನೂ ಬಚ್ಚಾ ಎಂದ ಸ್ಟಾರ್ ಕ್ರಿಕೆಟಿಗ
ಜಸ್​ಪ್ರೀತ್ ಬುಮ್ರಾ
  • Share this:
ಬೆಂಗಳೂರು (ಡಿ. 05): ಟೀಂ ಇಂಡಿಯಾದ ಸ್ಟಾರ್ ವೇಗಿ, ವಿಶ್ವದ ನಂಬರ್ ಒನ್ ಬೌಲರ್ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಬಂದರೆ ಎದುರಾಳಿ ಬ್ಯಾಟ್ಸ್​ಮನ್​ ಒಮ್ಮೆ ಭಯಬೀಳುವುದು ಕಂಡಿತ. ತನ್ನ ವಿಶಿಷ್ಠ ಶೈಲಿ ಹಾಗೂ ಡೆಡ್ಲಿ ಯಾರ್ಕರ್​ಗಳ ಮೂಲಕ ಕಡಿಮೆ ಅವಧಿಯಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಬುಮ್ರಾ ಬಗ್ಗೆ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಆಟಗಾರ ಅಬ್ದುಲ್ ರಝಾಕ್ ವ್ಯಂಗವಾಗಿ ಮಾತನಾಡಿದ್ದಾರೆ.

ಪಾಕಿಸ್ತಾನ ವೆಬ್​ಸೈಟ್ ಒಂದಕ್ಕೆ ಹೇಳಿಕೆ ನೀಡಿರುವ ಇವರು, "ನಾನು ಈಗ ಏನಾದರು ಕ್ರಿಕೆಟ್ ಆಡುತ್ತಿದ್ದರೆ ಬೇಬಿ ಬೌಲರ್ ಬುಮ್ರಾ ಎಸೆತವನ್ನು ಸುಲಭವಾಗಿ ಸರಿಯಾಗಿಯೇ ದಂಡಿಸುತ್ತಿದ್ದೆ" ಎಂದು ರಝಾಕ್ ಹೇಳಿದ್ದಾರೆ.

‘Jasprit Bumrah a baby bowler, would have easily dominated him’: Former Pakistan all-rounder Abdul Razzaq
ಅಬ್ದುಲ್ ರಝಾಕ್, ಪಾಕಿಸ್ತಾನ ಮಾಜಿ ಆಲ್ರೌಂಡರ್


IND vs WI: ನಾಳೆ ಮೊದಲ ಟಿ-20 ಫೈಟ್; ಭಾರತ- ವಿಂಡೀಸ್ ಆಟಗಾರರ ಅಭ್ಯಾಸ ಹೇಗಿದೆ ಗೊತ್ತಾ?

"ನನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನಾನು ವಿಶ್ವದ ಶ್ರೇಷ್ಠ ಬೌಲರ್​ಗಳನ್ನು ಎದುರಿಸಿದ್ದೇನೆ. ವಸೀಂ ಅಕ್ರಂ, ಶೋಯೆಬ್ ಅಖ್ತರ್ ಹಾಗೂ ಗ್ಲೆನ್ ಮೆಗ್ರಾತ್ ಅವರಂತಹ ಸ್ಟಾರ್ ವೇಗಿಗಳ ಎದುರು ಆಡಿದ್ದೇನೆ. ಹೀಗಾಗಿ ಬುಮ್ರಾ ವಿರುದ್ಧ ಬ್ಯಾಟ್ ಮಾಡುವುದು ನನಗೆ ಕಷ್ಟದ ವಿಚಾರವೇ ಅಲ್ಲ. ಇವರಿಗೆಲ್ಲ ಹೋಲಿಸಿದರೆ ಬುಮ್ರಾ ನನ್ನ ಮುಂದೆ ಬಚ್ಚಾ"

"ನಾನು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಬುಮ್ರಾ ಬೌಲಿಂಗ್ ಮಾಡಲು ಬಂದರೆ ಅವರ ಮೇಲೆ ಒತ್ತಡ ಇರುತ್ತಿತ್ತು, ನನ್ನ ಮೇಲಲ್ಲ. ಸದ್ಯದ ಕ್ರಿಕೆಟ್​ನಲ್ಲಿ ವಿಶ್ವದ ಶ್ರೇಷ್ಠ ಬೌಲರ್ ನನ್ನ ಪ್ರಕಾರ ಬುಮ್ರಾ ಅಲ್ಲ. ಅನೇಕ ಬೌಲರ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.

10 ವರ್ಷ, 500 ಪಂದ್ಯಗಳು...ಆದರೆ ಭಾರತ ಕ್ರಿಕೆಟ್ ಮಂಡಳಿ ಬಿಡಿಗಾಸು ನೀಡಿಲ್ಲ..!ಮಾತು ಮುಂದುವರೆಸಿದ ಅವರು, "ಬುಮ್ರಾ ಗಣನೀಯ ರೀತಿಯಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಅವರು ಬೌಲಿಂಗ್ ಮಾಡುವ ಶೈಲಿ ವಿಚಿತ್ರವಾಗಿದೆ. ಆದರೂ ಸರಿಯಾದ ಸ್ಥಳದಲ್ಲಿ ಚೆಂಡನ್ನು ಪಿಚ್ ಮಾಡುವುದರಿಂದ ಯಶಸ್ವಿಯಾಗುತ್ತಿದ್ದಾರೆ" ಎಂಬುದು ರಝಾಕ್ ಮಾತು.

40 ವರ್ಷದ ಮಾಜಿ ಆಲ್‌ರೌಂಡರ್‌ ಪಾಕಿಸ್ತಾನ ತಂಡದ ಪರ 1999ರಿಂದ 2013ರವರೆಗೆ ಒಟ್ಟು 46 ಟೆಸ್ಟ್‌, 265 ಏಕದಿನ ಮತ್ತು 32 ಟಿ-20 ಪಂದ್ಯಗಳನ್ನು ಆಡಿದ್ದಾರೆ.

First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ