IPL: ಐಪಿಎಲ್ ಆರಂಭಕ್ಕೂ ಮುನ್ನವೇ ಗುಜರಾತ್ ಗೆ ಬಿಗ್ ಶಾಕ್ : ಕೈ ಕೊಟ್ಟ ಇಂಗ್ಲೆಂಡ್ ಆಟಗಾರ

Jason Roy: ಇಂಗ್ಲೀಷ್​ ಬ್ಯಾಟರ್​ ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಹೊರ ಹೋಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2022ರ ಆವೃತ್ತಿಯಲ್ಲೂ ವೈಯಕ್ತಿಕ ಕಾರಣ ನೀಡಿ ಹೊರ ಹೋಗಿದ್ದರು. ಆಗ ಅವರನ್ನು 1.5 ಕೋಟಿ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿತ್ತು

ಜೇಸನ್ ರಾಯ್

ಜೇಸನ್ ರಾಯ್

 • Share this:
  ಐಪಿಎಲ್(IPL) 15ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ.. ಮಿನಿ ಚುಟುಕು ಸಮರಕ್ಕೆ ಸ್ಥಳ ದಿನಾಂಕ ನಿಗದಿಯಾಗಿದ್ದು ಎಲ್ಲಾ ತಂಡಗಳು (Team)ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.. ಅದರಲ್ಲೂ ಈ ಬಾರಿಯ ಐಪಿಎಲ್ ಗೆ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಲಕ್ನೋ (lucknow super giants)ತಂಡಗಳು ಕಪ್ (Cup) ಗೆಲ್ಲುವ ಉತ್ಸಾಹದಲ್ಲಿ ಭಾರಿ ಸಿದ್ಧತೆ ಮಾಡಿಕೊಂಡಿವೆ.. ಆದ್ರೆ ಉತ್ಸಾಹದಲ್ಲಿ ಸಿದ್ಧತೆ ಮಾಡಿಕೊಂಡಿರುವ ಗುಜರಾತ್ (Gujarat) ತಂಡಕ್ಕೆ ಐಪಿಎಲ್ ಆರಂಭವಾಗುವುದಕ್ಕೂ ಮುನ್ನವೇ ಬೃಹತ್ ಶಾಕ್ ಎದುರಾಗಿದೆ.. ಗುಜರಾತ್ ತಂಡದ ಸ್ಟಾರ್ ಆಟಗಾರರೊಬ್ಬರು ಐಪಿಎಲ್ ಆರಂಭವಾಗುವುದಕ್ಕೂ ಮುನ್ನವೇ ಗುಜರಾತ್ ತಂಡಕ್ಕೆ ಕೈಕೊಟ್ಟಿರುವುದು ಈಗ ಗುಜರಾತ್ ಗೆ ನುಂಗಲಾರದ ತುತ್ತಾಗಿದೆ.

  ಗುಜರಾತ್ ಟೈಟಾನ್ಸ್ ಗೆ ಕೈಕೊಟ್ಟ ಜೇಸನ್ ರಾಯ್

  ಹೊಸ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಗೆ ಆರಂಭದಲ್ಲಿಯೇ ದೊಡ್ಡ ಆಘಾತ ಎದುರಾಗಿದೆ. ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೇಸನ್ ರಾಯ್ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ.

  ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 2 ಕೋಟಿ ರುಪಾಯಿ ನೀಡಿ ಜೇಸನ್ ರಾಯ್ ಅವರನ್ನು ಖರೀದಿಸಿತ್ತು.ಆದರೆ ಲೀಗ್​ ಆರಂಭಕ್ಕೆ ಮೂರು ವಾರಗಳಿರುವಾಗ ರಾಯ್​ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರುವುದು ಗುಜರಾತ್​ ಫ್ರಾಂಚೈಸಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಶುಬ್ಮನ್​ ಗಿಲ್​ ಹೊರತುಪಡಿಸಿದರೆ ರಾಯ್​ ತಂಡದಲ್ಲಿದ್ದ ಏಕೈಕ ಸ್ಪೆಷಲಿಸ್ಟ್ ರಾಯ್ ಓಪನರ್​ ಆಗಿದ್ದರು.

  ಇದನ್ನೂ ಓದಿ: WWE ರೋಚಕ ಕದನ; ವಿಶ್ವದ ಭಯಾನಕ ಮನುಷ್ಯ ಮಾರ್ಟಿನ್ ಫೋರ್ಡ್ vs The Rock ಮುಖಾಮುಖಿ ಹೋರಾಟ!

  ಸೋಶಿಯಲ್ ಮೀಡಿಯಾದಲ್ಲಿ ಗುಜರಾತ್ ಟೈಟಾನ್ಸ್ ಗೆ ಧನ್ಯವಾದ ತಿಳಿಸಿದ ರಾಯ್

  ಇನ್ನು ಐಪಿಎಲ್ ನಿಂದ ಹಿಂದೆ ಸರಿದಿರುವ ಬಗ್ಗೆ ಜೇಸನ್ ರಾಯ್ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.. ಅಲ್ಲದೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಜೇಸನ್ ರಾಯ್ ಅವರನ್ನು ಖರೀದಿ ಮಾಡಿದ ಗುಜರಾತ್ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

  ಗುಜರಾತ್ ಟೈಟಾನ್ಸ್ ಅಭಿಮಾನಿಗಳೇ ಹಾಗೂ ತಂಡದ ಆಟಗಾರರೇ, ತುಂಬಾ ಆಲೋಚನೆ ಮಾಡಿ, ಭಾರವಾದ ಹೃದಯದಿಂದ ನಾನು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇನೆ.

  ನನ್ನ ಮೇಲೆ ವಿಶ್ವಾಸವಿಟ್ಟು ಹರಾಜಿನಲ್ಲಿ ನನ್ನನ್ನು ಆಯ್ದುಕೊಂಡಿದ್ದಕ್ಕೆ ತಂಡದ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

  ಆದರೆ ನಾನು ಕುಟುಂಬದೊಟ್ಟಿಗೆ ಕೆಲವು ಅಮೂಲ್ಯ ಸಮಯವನ್ನು ಕಳೆಯಲು ಇದು ಸರಿಯಾದ ತೀರ್ಮಾನ ಎಂದು ನನಗನಿಸಿದೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಬೇಕಿದೆ. ಆದರೆ ನಾನು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಹಾರೈಸುತ್ತೇನೆ. ನನ್ನ ನಿರ್ಧಾರವನ್ನು ಬೆಂಬಲಿಸುವ ಎಲ್ಲರಿಗೂ ಧನ್ಯವಾದಗಳು ಎಂದು ಜೇಸನ್ ರಾಯ್ ಟ್ವೀಟ್ ಮಾಡಿದ್ದಾರೆ.

  ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಮಿಂಚಿದ್ದ ಜೇಸನ್ ರಾಯ್

  ಇನ್ನು 2022ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಜೇಸನ್ ರಾಯ್ ಅಮೋಘ ಪ್ರದರ್ಶನದ ಮೂಲಕ ಮಿಂಚಿದ್ದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್​ಮನ್ ಆಗಿದ್ದರು.

  ಪಿಎಸ್‌ಎಲ್ ಟೂರ್ನಿಯಲ್ಲಿ ಜೇಸನ್ ರಾಯ್ ಕೇವಲ 6 ಪಂದ್ಯಗಳನ್ನಾಡಿ 50.50 ಬ್ಯಾಟಿಂಗ್ ಸರಾಸರಿಯಲ್ಲಿ 303 ರನ್ ಬಾರಿಸಿದ್ದರು. ಜೇಸನ್‌ ರಾಯ್ ಒಂದು ಶತಕ ಹಾಗೂ ಎರಡು ಶತಕ ಬಾರಿಸಿ ಗಮನ ಸೆಳೆದಿದ್ದರು.

  ಇದನ್ನೂ ಓದಿ: ಕ್ರಿಕೆಟ್‌ ಚೆಂಡು ತಿನ್ನುತ್ತಾರಂತೆ ರೋಹಿತ್ ಶರ್ಮಾ! ಇದೇನು ‘ಹಿಟ್‌‘ ಮ್ಯಾನ್ ಅವಾಂತರ?

  ಡೆಲ್ಲಿಗೂ ಕೈ ಕೊಟ್ಟಿದ್ದ ರಾಯ್

  ಇನ್ನು ಇಂಗ್ಲೀಷ್​ ಬ್ಯಾಟರ್​ ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಹೊರ ಹೋಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2022ರ ಆವೃತ್ತಿಯಲ್ಲೂ ವೈಯಕ್ತಿಕ ಕಾರಣ ನೀಡಿ ಹೊರ ಹೋಗಿದ್ದರು. ಆಗ ಅವರನ್ನು 1.5 ಕೋಟಿ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿತ್ತು
  Published by:ranjumbkgowda1 ranjumbkgowda1
  First published: