ಕ್ರಿಕೆಟ್ ಅಂಗಳದಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಅತ್ಯುತ್ತಮ ಫೀಲ್ಡರ್ಗಳು ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ. ಕೀರನ್ ಪೊಲಾರ್ಡ್ ಅದ್ಭುತ ಫೀಲ್ಡಿಂಗ್, ಡ್ವೇನ್ ಬ್ರಾವೊ ಭರ್ಜರಿ ಡೈವಿಂಗ್, ನಿಕೋಲಸ್ ಪೂರನ್ ಜಬರ್ದಸ್ತ್ ಫ್ಲೈಯಿಂಗ್ ಫೀಲ್ಡಿಂಗ್ ಇದಕ್ಕೆ ಸಾಕ್ಷಿ. ಇದೀಗ ಈ ಪಟ್ಟಿಗೆ ಹೊಸ ಕ್ಯಾಚ್ವೊಂದು ಕೂಡ ಸೇರ್ಪಡೆಯಾಗಿದೆ. ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಣ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಮತ್ತು ಆಲ್‌ರೌಂಡರ್ ಜೇಸನ್ ಹೋಲ್ಡರ್ ಸ್ಲಿಪ್ನಲ್ಲಿ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ.
ಜೇಡೆನ್ ಸೀಲ್ಸ್ ಬೌಲಿಂಗ್‌ನಲ್ಲಿ ಕೇಶವ್ ಮಹಾರಾಜ್ ಅವರ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಚಿಮ್ಮಿತ್ತು. ಅಲ್ಲೇ ಎರಡನೇ ಸ್ಲಿಪ್ನಲ್ಲಿದ್ದ ಆರಡಿ ದೈತ್ಯ ಜೇಸನ್ ಹೋಲ್ಡರ್ ಅದ್ಭುತವಾಗಿ ಡೈವ್ ಹೊಡೆದು ಚೆಂಡನ್ನು ಒಂದು ಕೈಯಲ್ಲಿ ಬಂಧಿಸಿದರು. ಈ ಅತ್ಯಾಧ್ಭುತ ಕ್ಯಾಚ್ನಿಂದ ದಕ್ಷಿಣ ಆಫ್ರಿಕಾ ತಂಡ 8ನೇ ವಿಕೆಟ್ ಕಳೆದುಕೊಂಡಿತು.
Ben Stokes who?!? What a catch Jason Holder! 🔥🏏 #WIvSA pic.twitter.com/fiOuzaeqfH
— James (@Surreycricfan) June 20, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ