• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Ind vs Eng 4th Test; ಭಾರತ- ಇಂಗ್ಲೆಂಡ್ 4ನೇ ಟೆಸ್ಟ್ ಕ್ರಿಕೆಟ್ ವೇಳೆ 3ನೇ ಬಾರಿ ಪಿಚ್ ಒಳಗೆ ನುಗ್ಗಿದ ಜಾರ್ವೊ!

Ind vs Eng 4th Test; ಭಾರತ- ಇಂಗ್ಲೆಂಡ್ 4ನೇ ಟೆಸ್ಟ್ ಕ್ರಿಕೆಟ್ ವೇಳೆ 3ನೇ ಬಾರಿ ಪಿಚ್ ಒಳಗೆ ನುಗ್ಗಿದ ಜಾರ್ವೊ!

ಕ್ರಿಕೆಟ್ ಮೈದಾನದೊಳಗೆ ನುಗ್ಗಿದ ಜಾರ್ವೊ 69

ಕ್ರಿಕೆಟ್ ಮೈದಾನದೊಳಗೆ ನುಗ್ಗಿದ ಜಾರ್ವೊ 69

ಈತ ಈಗ ಮತ್ತೆ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಮೂರನೇ ಬಾರಿ ಪಿಚ್ ಒಳಗೆ ನುಗ್ಗಿ ಮತ್ತೆ ಪ್ರಸಿದ್ಧನಾಗಿದ್ದಾನೆ. ಮೂರನೇ ಟೆಸ್ಟ್ ಪಂದ್ಯದ ಮೂರನೆ ದಿನ ಇದೇ ವ್ಯಕ್ತಿ ಭಾರತ ಬ್ಯಾಟಿಂಗ್ ಮಾಡುವಾಗ ಪಿಚ್​ ಒಳಗೆ ನುಗ್ಗಿ ಗಲಿಬಿಲಿ ಉಂಟು ಮಾಡಿದ್ದ. ಆದಾದ ಬಳಿಕ ಭಾರತದ ಓಪನರ್ ರೋಹಿತ್ ಶರ್ಮಾ ಔಟ್ ಆಗಿದ್ದರು.

ಮುಂದೆ ಓದಿ ...
 • Share this:

  ಮೈದಾನದಲ್ಲಿ ಆಟ ನಡೆಯುವಾಗ ಪ್ರೇಕ್ಷಕರು ಒಮ್ಮೊಮ್ಮೆ ಮೈದಾನದೊಳಗೆ ನುಗ್ಗಿ ಆಟಗಾರರಿಗೆ ಕಿರಿಕಿರಿ ಉಂಟು ಮಾಡುವುದು ಹೊಸತೇನಲ್ಲ. ಎಲ್ಲ ಕ್ರೀಡೆಗಳಲ್ಲೂ ಇದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇಲ್ಲೊಬ್ಬ ಮಹಾಶಯ ಜಾರ್ವೊ 69 ಎಂದು ಹೆಸರಾಗಿರುವ ಡ್ಯಾನಿಯಲ್ ಜಾರ್ವೆಸ್ (Daniel Jarvis)ಎಂಬಾತ ಇಂಗ್ಲೆಂಡ್ ಮತ್ತು ಭಾರತ (India and England) ನಡುವೆ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಆಟದ ವೇಳೆ ಮೈದಾನದೊಳಗೆ ನುಗ್ಗಿ ಕಿರಿಕಿರಿ ಉಂಟು ಮಾಡಿದ್ದಾನೆ. ಇಂಗ್ಲೆಂಡ್​ನ ಕೆನ್ನಿಂಗ್ಟನ್​ನಲ್ಲಿರುವ ಓವಲ್ (Kennington Oval)  ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಕ್ರಿಕೆಟ್ ಟೆಸ್ಟ್ ಮ್ಯಾಚ್ ನಡೆಯುತ್ತಿದೆ.


  ಈ ಘಟನೆ ಇಂಗ್ಲೆಂಡ್​ ಇನ್ನಿಂಗ್ಸ್ ಆರಂಭಿಸಿ 34ನೇ ಓವರ್​ ಅನ್ನು ಉಮೇಶ್ ಜಾದವ್ ಬೌಲಿಂಗ್ ಮಾಡುವಾಗ ನಡೆದಿದೆ. ಹೀಗೆ ಏಕಾಏಕಿ ಜಾರ್ವೊ ಮೈದಾನದೊಳಗೆ ನುಗ್ಗಿದ ಕಾರಣ ಆಟವನ್ನು 5 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು.


  34 ನೇ ಓವರಿನಲ್ಲಿ ಜಾರ್ವೊ ಊಟಕ್ಕೆ ಸ್ವಲ್ಪ ಮುಂಚೆ ಮೈದಾನಕ್ಕೆ ನುಗ್ಗಿದನು. ಉಮೇಶ್ ಜಾಧವ್ ಬೌಲಿಂಗ್ ಮಾಡುವಾಗ ಅವರ ಹಿಂದನಿಂದ ಬಂದ ಜಾರ್ವೊ ತಾನೇ ಬೌಲಿಂಗ್ ಮಾಡುವಂತೆ ಮುನ್ನುಗ್ಗಿ ನಾನ್​ ಸ್ಟ್ರೈಕ್​ನಲ್ಲಿ ನಿಂತಿದ್ದ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೊಗೆ ಡಿಕ್ಕಿ ಹೊಡೆದನು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿದ ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರು ಜಾರ್ವೊ ಅನುಚಿತ ವರ್ತನೆ ಖಂಡಿಸಿದ್ದಾರೆ. ಮತ್ತು ಭದ್ರತಾ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.


  ಪಿಚ್ ಆಕ್ರಮಣಕಾರ ಎಂದೇ ಪ್ರಸಿದ್ಧರಾಗಿರುವ ಜಾರ್ವೊ 69 ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ನಿರಂತರವಾಗಿ ಭದ್ರತೆಯನ್ನು ಉಲ್ಲಂಘಿಸಿ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಭಾರತ vs ಇಂಗ್ಲೆಂಡ್ ಟೆಸ್ಟ್​ ಪಂದ್ಯದ ವೇಳೆ  2 ಬಾರಿ ಈ ವ್ಯಕ್ತಿ ಏಕಾಏಕಿ ಪಿಚ್ ಒಳಗೆ ನುಗ್ಗಿದ್ದರಿಂದ ಆತನನ್ನು ಮೈದಾನದಿಂದ ಆಜೀವ ನಿಷೇಧಕ್ಕೆ ಒಳಪಡಿಸಲಾಗಿದೆ. ಆದರೂ ಈತ ಈಗ ಮತ್ತೆ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಮೂರನೇ ಬಾರಿ ಪಿಚ್ ಒಳಗೆ ನುಗ್ಗಿ ಮತ್ತೆ ಪ್ರಸಿದ್ಧನಾಗಿದ್ದಾನೆ. ಮೂರನೇ ಟೆಸ್ಟ್ ಪಂದ್ಯದ ಮೂರನೆ ದಿನ ಇದೇ ವ್ಯಕ್ತಿ ಭಾರತ ಬ್ಯಾಟಿಂಗ್ ಮಾಡುವಾಗ ಪಿಚ್​ ಒಳಗೆ ನುಗ್ಗಿ ಗಲಿಬಿಲಿ ಉಂಟು ಮಾಡಿದ್ದ. ಆದಾದ ಬಳಿಕ ಭಾರತದ ಓಪನರ್ ರೋಹಿತ್ ಶರ್ಮಾ ಔಟ್ ಆಗಿದ್ದರು.  2 ನೇ ದಿನದ ಊಟದ ಸಮಯಕ್ಕೆ ಇಂಗ್ಲೆಂಡ್ 40 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಭಾರತಕ್ಕಿಂತ 56 ರನ್ ಹಿಂದೆ ಇದ್ದಾರೆ. ಓಲ್ಲಿ ಪೋಪ್ (388) ಮತ್ತು ಜಾನಿ ಬೈರ್‌ಸ್ಟೊ (32*) ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದಿದ್ದಾರೆ.


  ಇದನ್ನು ಓದಿ: ರಹಾನೆಗಿಂತ ಮೊದಲು ಜಡೇಜಾ ಬ್ಯಾಟ್ ಮಾಡಲು ಕಾರಣ? ಎರಡನೇ ದಿನದಾಟದಲ್ಲೂ ಮಿಂಚುತ್ತಾರಾ ಬೌಲರ್ಸ್?


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು