ಲಾಕ್ಡೌನ್ನಿಂದಾಗಿ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಈಗಾಗಲೇ ನಡೆಯಬೇಕಿದ್ದ ಐಪಿಎಲ್, ಫಿಪಾ ಫುಟ್ಭಾಲ್ ಪಂದ್ಯಗಳ ದಿನಾಂಕ ಮುಂದಕ್ಕೆ ಹೋಗಿದೆ. ಆ ಸಾಲಿನಿಂದ ಒಲಿಂಪಿಕ್ಸ್ ಕೂಡ ಹೊರತಾಗಿಲ್ಲ. ಹಾಗಾಗಿ ಕ್ರೀಡಾಪಟುಗಳು ಲಾಕ್ಡೌನ್ ಪಾಲಿಸುತ್ತಾ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಲಾಕ್ಡೌನ್ನಿಂದಾಗಿ ಅನೇಕರು ಮನೆಯಲ್ಲಿ ಇದ್ದುಕೊಂಡು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ಪ್ರಾಕ್ಟೀಸ್ ಮಾಡುತ್ತಾ, ಬಿಡುವಿದ್ದಾಗ ಆನ್ಲೈನ್ ಮೂಲಕ ಲೈವ್ ಬರುತ್ತಿರುತ್ತಾರೆ. ಆದರೆ ಜಪಾನಿನ ಅಗ್ರಮಾನ್ಯ ಫೆನ್ಸರ್ ರಿಯೋ ಮಿಯಾಕೆ ಲಾಕ್ಡೌನ್ ಅವಧಿಯಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ?
![]()
ಫೆನ್ಸರ್ ರಿಯೋ ಮಿಯಾಕೆ
![]()
ಫೆನ್ಸರ್ ರಿಯೋ ಮಿಯಾಕೆ
ಲಾಕ್ಡೌನ್ ವೇಳೆ ಕ್ರೀಡಾ ಚಟುವಟಿಕೆಗಳ ಮೇಲೆ ಬ್ರೇಕ್ ಬಿದ್ದಿದೆ. ಹಾಗಾಗಿ ಅನೇಕ ಕ್ರೀಡಾಪಟುಗಳು ಈ ಸಮಯವನ್ನು ಇತರೆ ಕೆಲಗಳಿಗಾಗಿ ಬಳಸುತ್ತಿದ್ದಾರೆ. ಅದರಂತೆ ಜಪಾನಿನ ಫೆನ್ಸರ್ ರಿರೋ ಮಿಯಾಕೆ ಬಿಡುವಿದ್ದಾಗ ಫುಡ್ ಡೆಲಿವೆರಿ ಮಾಡುವ ಕೆಲಸ ಮಾಡುತ್ತಾ ಸಂಪಾದನೆ ಮಾಡುತ್ತಿದ್ದಾರೆ. ಫೆನ್ಸರ್ ರಿರೋ ಮಿಯಾಕೆ 29 ವರ್ಷದವರಾಗಿದ್ದು, 2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲೊ ಬೆಳ್ಳಿಯ ಪದಕ ಗೆದ್ದಿದ್ದಾರೆ.
ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ ಕನ್ನಡ ಸಾಧಕಿಯ ಬಾಲಿವುಡ್ ಸಿನಿಮಾ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ