• Home
 • »
 • News
 • »
 • sports
 • »
 • James Anderson: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಾವಿರ ವಿಕೆಟ್ ಕಬಳಿಸಿದ ಜೇಮ್ಸ್ ಅ್ಯಂಡರ್ಸನ್

James Anderson: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಾವಿರ ವಿಕೆಟ್ ಕಬಳಿಸಿದ ಜೇಮ್ಸ್ ಅ್ಯಂಡರ್ಸನ್

james anderson

james anderson

ಈ ಪಟ್ಟಿಯಲ್ಲಿ 1347 ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದು, 1001 ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ ದ್ವಿತೀಯ ಸ್ಥಾನದಲ್ಲಿದ್ದಾರೆ.

 • Share this:

  ಇಂಗ್ಲೆಂಡ್ ತಂಡದ ಖ್ಯಾತ ವೇಗಿ ಜೇಮ್ಸ್ ಅ್ಯಂಡರ್ಸನ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಒಂದು ಸಾವಿರ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕೌಂಟಿ ಕ್ರಿಕೆಟ್ ಚಾಂಪಿಯನ್​ಶಿಪ್​ನಲ್ಲಿ ಲ್ಯಾಂಕ್ ಶೈರ್ ತಂಡದ ಪರವಾಗಿ ಆಡುತ್ತಿರುವ ಜಿಮ್ಮಿ ಕೆಂಟ್ ತಂಡದ ವಿರುದ್ದದ ಪಂದ್ಯದಲ್ಲಿ ಸಾವಿರ ವಿಕೆಟ್​ಗಳ ಸಾಧನೆ ಮೆರೆದರು.


  ಈ ಪಂದ್ಯದಲ್ಲಿ ಅ್ಯಂಡರ್ಸನ್ ದಾಳಿಗೆ ತತ್ತರಿಸಿದ ಕೆಂಟ್​ ತಂಡವು ಕೇವಲ 74 ರನ್​ಗಳಿಗೆ ಆಲೌಟಾಯಿತು. ಕೇವಲ 19 ರನ್​ ನೀಡಿದ 7 ವಿಕೆಟ್​​ ಕಬಳಿಸುವ ಜಿಮ್ಮಿ ತನ್ನ ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು.
  ಇತ್ತೀಚೆಗಷ್ಟೇ ಇಂಗ್ಲೆಂಡ್ ಪರ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯನ್ನು ಅ್ಯಂಡರ್ಸನ್ ನಿರ್ಮಿಸಿದ್ದರು. ಆಂಗ್ಲ ತಂಡದ ಪರ 162 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ 161 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಮಾಜಿ ನಾಯಕ ಅಲಿಸ್ಟರ್ ಕುಕ್ ದಾಖಲೆಯನ್ನು ಹಿಂದಿಕ್ಕಿದ್ದರು.


  ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತೀ ಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದ್ದು, ಅಲ್ಲದೆ 617 ವಿಕೆಟ್ ಪಡೆಯುವ ಮೂಲಕ ವಿಶ್ವದ ನಾಲ್ಕನೇ ಯಶಸ್ವಿ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ದಾಖಲೆ ಕೂಡ ಅ್ಯಂಡರ್ಸನ್ ಹೆಸರಿನಲ್ಲಿರುವುದು ವಿಶೇಷ.


  ಸದ್ಯ 617 ವಿಕೆಟ್ ಪಡೆದಿರುವ ಅ್ಯಂಡರ್ಸನ್ ಖಾತೆಗೆ ಇನ್ನೆರಡು ವಿಕೆಟ್ ಸೇರಿದರೆ ಭಾರತದ ದಂತಕಥೆ ಅನಿಲ್ ಕುಂಬ್ಳೆ (619 ವಿಕೆಟ್​) ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಈ ಮೂಲಕ ವಿಶ್ವದ ಮೂರನೇ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್ ಎನಿಸಿಕೊಳ್ಳಲಿದ್ದಾರೆ.


  ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತೀ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಕೂಡ ಅ್ಯಂಡರ್ಸನ್ ಹೆಸರಿನ್ಲಲಿದೆ. ಇದುವರೆಗೆ ಜಿಮ್ಮಿ ಇಂಗ್ಲೆಂಡ್ ಪರ 904 ವಿಕೆಟ್ ಪಡೆದಿದ್ದು, ಈ ಮೂಲಕ ವಿಶ್ವದ 5ನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.


  ಈ ಪಟ್ಟಿಯಲ್ಲಿ 1347 ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದು, 1001 ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 956 ವಿಕೆಟ್ ಉರುಳಿಸಿರುವ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮೂರನೇ ಸ್ಥಾನದಲ್ಲಿದ್ದಾರೆ.


  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  Published by:zahir
  First published: