ವೈರಲ್ ಆಗುತ್ತಿದೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಜಾಕ್ ಕಾಲಿಸ್ ಪೋಟೋ; ಇದರ ಹಿಂದಿದೆ ಒಳ್ಳೆಯ ಉದ್ದೇಶ!

ಕಾಲಿಸ್ ಅವರ ಈ ಸಾಮಾಜಿಕ ಕಳಕಳಿಗೆ ಅಭಿಮಾನಿಗಳು ಬೌಲ್ಡ್ ಆಗಿದ್ದಾರೆ. ಕಾಲಿಸ್​ ಅವರು ಈ ಲುಕ್​ ತಮ್ಮ ಆಟದ ಸಮಯದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಮೇಲೆ ಬೀರುತ್ತಿದ್ದ ಪ್ರಭಾವವನ್ನು ನೆನಪಿಸುವಂತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

news18-kannada
Updated:November 30, 2019, 9:08 AM IST
ವೈರಲ್ ಆಗುತ್ತಿದೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಜಾಕ್ ಕಾಲಿಸ್ ಪೋಟೋ; ಇದರ ಹಿಂದಿದೆ ಒಳ್ಳೆಯ ಉದ್ದೇಶ!
ಜಾಕ್ ಕಾಲಿಸ್
  • Share this:
ವಿಶ್ವದ ಶ್ರೇಷ್ಠ ಆಲ್​ರೌಂಡರ್​ ಆಟಗಾರರಲ್ಲಿ ಪ್ರಮುಖರಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್, ಅರ್ಧ ದಾಡಿ​ ಮತ್ತು ಮೀಸೆಯನ್ನು ತೆಗೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹೊಸ ವೇಷದಲ್ಲಿ ಕಾಣಿಸಿಕೊಂಡ ಕಾಲಿಸ್ ಚಿತ್ರ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುವ ಜೊತೆಗೆ ಯಾಕೆ ಹೀಗೆ ಮಾಡಿದರು? ಎಂಬ ಪ್ರಶ್ನೆ ಎತ್ತಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ಘೆಂಡಾ ಮೃಗಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಘೆಂಡಾ ಮೃಗಗಳ ರಕ್ಷಣೆಗಾಗಿ ಹಣ ಸಂಗ್ರಹ ಮಾಡಲು ಕಾಲಿಸ್ ಈ ರೀತಿಯ ವಿಭಿನ್ನ ಚಾಲೆಂಜ್ ಸ್ವೀಕರಿಸಿದ್ದಾರಂತೆ.

 


ಒಂದೇ ಓವರ್​​ನಲ್ಲಿ ಹ್ಯಾಟ್ರಿಕ್ ಸೇರಿ 5 ವಿಕೆಟ್ ಕಿತ್ತ ಕರ್ನಾಟಕ ಬೌಲರ್; ದಾಖಲೆ ಬರೆದ ಅಭಿಮನ್ಯು

ಘೆಂಡಾಮೃಗ ಮತ್ತು ಗಾಲ್ಫ್​ ಅಭಿವೃದ್ಧಿಗೆ ನಿಧಿ ಸಂಗ್ರಹಿಸಲು ಈ ರೀತಿ ಮಾಡಿರುವುದಾಗಿ ತಮ್ಮ ಟ್ವಿಟರ್​ನಲ್ಲಿ ಫೋಟೋ ಪೋಸ್ಟ್​ ಮಾಡಿರುವ ಕಾಲಿಸ್, ನವೆಂಬರ್​ ಅಂತ್ಯದವರೆಗೂ ಇದೇ ಲುಕ್​ ಅನ್ನು ಉಳಿಸಿಕೊಳ್ಳುತ್ತೇನೆ. ಕೆಲವು ಆಸಕ್ತಿ ದಿನಗಳ ಕಡೆಗೆ ಹೋಗುತ್ತಿದ್ದೇವೆ ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ.

ಇದು ದಕ್ಷಿಣ ಆಫ್ರಿಕಾ ಕರೆನ್ಸಿ 4,80,000 ರ್ಯಾಂಡ್​ ನಿಧಿ ಸಂಗ್ರಹಕ್ಕೆ ನೆರವಾಗಿದೆ ಎಂದು ಕಾಲಿಸ್​ ಹೇಳಿದ್ದಾರೆ. ಕಾಲಿಸ್ ಅವರ ಈ ಸಾಮಾಜಿಕ ಕಳಕಳಿಗೆ ಅಭಿಮಾನಿಗಳು ಬೌಲ್ಡ್ ಆಗಿದ್ದಾರೆ. ಕಾಲಿಸ್​ ಅವರು ಈ ಲುಕ್​ ತಮ್ಮ ಆಟದ ಸಮಯದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಮೇಲೆ ಬೀರುತ್ತಿದ್ದ ಪ್ರಭಾವವನ್ನು ನೆನಪಿಸುವಂತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

  Syed Mushtaq Ali Trophy: ಹರಿಯಾಣ ಬೌಲರ್​ಗಳನ್ನು ಚೆಂಡಾಡಿ ಫೈನಲ್​ಗೇರಿದ ಕರ್ನಾಟಕ

ಕ್ರಿಕೆಟ್‌ನ ಓರ್ವ ಶ್ರೇಷ್ಠ ಆಲ್‌ರೌಂಡರ್ ಆಗಿರುವ ಕಾಲಿಸ್ ದಕ್ಷಿಣ ಆಫ್ರಿಕಾದ ಪರ 166 ಟೆಸ್ಟ್, 328 ಏಕದಿನ ಹಾಗೂ 25 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ 10,000ಕ್ಕೂ ಅಧಿಕ ರನ್ ಹಾಗೂ 250ಕ್ಕೂ ಅಧಿಕ ವಿಕೆಟ್ ಪಡೆದ ಏಕೈಕ ಆಟಗಾರನಾಗಿದ್ದಾರೆ.

First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ