ಸ್ಯಾಮ್ಸನ್ ಅಲ್ಲ; ರೋಹಿತ್ ಜೊತೆ ಕಣಕ್ಕಿಳಿಯಲು ಈತನಿಗೆ ಸಮಯ ಬಂದಿದೆ; ಲಕ್ಷ್ಮಣ್ ಹೇಳಿದ್ದು ಯಾರನ್ನ?

ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಡಿಸೆಂಬರ್ 6 ರಂದು ಹೈದರಾಬಾದ್​ನಲ್ಲಿ ಮೊದಲ ಟಿ-20 ನಡೆಯಲಿ ನಡೆಯಲಿದೆ.

ಕ್ರಿಕೆಟ್ ಕ್ರೀಡೆ ಕುರಿತು ತಿಳಿದುಕೊಂಡಿರುವವರು ಅಥವಾ ಈ ಬಗ್ಗೆ ಫಾಲೋ ಮಾಡುವವರು ವಿಸ್ಡನ್ ಪಟ್ಟಿಯಲ್ಲಿ ರೋಹಿತ್ ಹೆಸರು ಇಲ್ಲದಿರುವುದನ್ನು ಕಂಡರೆ ನಿಜಕ್ಕೂ ಅಚ್ಚರಿಗೊಳ್ಳುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಕ್ರಿಕೆಟ್ ಕ್ರೀಡೆ ಕುರಿತು ತಿಳಿದುಕೊಂಡಿರುವವರು ಅಥವಾ ಈ ಬಗ್ಗೆ ಫಾಲೋ ಮಾಡುವವರು ವಿಸ್ಡನ್ ಪಟ್ಟಿಯಲ್ಲಿ ರೋಹಿತ್ ಹೆಸರು ಇಲ್ಲದಿರುವುದನ್ನು ಕಂಡರೆ ನಿಜಕ್ಕೂ ಅಚ್ಚರಿಗೊಳ್ಳುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

  • Share this:
ಬೆಂಗಳೂರು (ನ. 28): ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಹಾಗೂ ಟಿ-20 ಸರಣಿಯನ್ನು ಭರ್ಜರಿ ಆಗಿ ಗೆದ್ದು ಬೀಗಿರುವ ಭಾರತ ಸದ್ಯ ವೆಸ್ಟ್​ ಇಂಡೀಸ್ ಸರಣಿಗೆ ಸಜ್ಜಾಗುತ್ತಿದೆ. ಡಿ. 6 ರಂದು ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಮೊದಲ ಕದನ ನಡೆಯಲಿದೆ. ಈ ನಡುವೆ ಶಿಖರ್ ಧವನ್ ಇಂಜುರಿಯಿಂದ ಗುಣಮುಖರಾಗದ ಹಿನ್ನಲೆ ಸಂಜು ಸ್ಯಾಮ್ಸನ್​ಗೆ ಅವಕಾಶ ಕಲ್ಪಿಸಲಾಗಿದೆ.

ಹೀಗಿರುವಾಗ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾಕ್ಕೆ ಕೆಲವು ಟಿಪ್ಸ್ ನೀಡಿದ್ದಾರೆ. ಧವನ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆ ಯಾವ ಆಟಗಾರ ಕಣಕ್ಕಿಳಿದರೆ ಉತ್ತಮ ಎಂಬುವುದನ್ನು ಸೂಚಿಸಿದ್ದಾರೆ.

‘It’s time he opens with Rohit,’ VVS Laxman suggests change at the top for T20Is
ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ


ಕೆಪಿಎಲ್ ಫಿಕ್ಸಿಂಗ್​ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟರ್ಸ್​; ಅಭಿಮನ್ಯು ಬೆನ್ನಲ್ಲೆ ಮತ್ತೊಬ್ಬ ಕರ್ನಾಟಕ ಆಟಗಾರನಿಗೆ ನೋಟಿಸ್

ಸ್ಟಾರ್‌ ಸ್ಪೋರ್ಟ್ಸ್‌ನ ಗೇಮ್‌ ಪ್ಲಾನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಣ್‌, "ವಿರಾಟ್ ಕೊಹ್ಲಿ ಸೀಮಿತ ಓವರ್ ಕ್ರಿಕೆಟ್​ಗೆ ಮರಳಿದ್ದು, 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಆದರೆ, ಈ ಹಿಂದೆ ಕೊಹ್ಲಿ ತಂಡದಲ್ಲಿ ಇಲ್ಲದಿದ್ದಾಗ ಈ ಸ್ಥಾನದಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದ ಕೆ ಎಲ್ ರಾಹುಲ್​ಗೆ ಸೂಕ್ತ ಜಾಗವಿಲ್ಲದಂತಾಗುತ್ತದೆ. ಹೀಗಾಗಿ ಧವನ್ ಅನುಪಸ್ಥಿತಿಯಲ್ಲಿ ರಾಹುಲ್ ಅವರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್​ ಆರಂಭಿಸಲಿ" ಎಂದು ಸೂಚಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ರಾಹುಲ್ ಅವರು 3ನೇ ಕ್ರಮಾಂಕದಲ್ಲಿ ಆಡಿ ಅರ್ಧಶತಕ ಸಿಡಿಸಿದ್ದರು. ಅಲ್ಲದೆ ಸದ್ಯ ಸಾಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲು ಕರ್ನಾಟಕ ಪರ ರಾಹುಲ್ ಅವರು ಓಪನರ್ ಆಗಿ ಮಿಂಚುತ್ತಿದ್ದಾರೆ.

IPL 2020: ಇದೇ ಮೊದಲ ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಸ್ಟಾರ್ ಆಟಗಾರರು!

ಇದೇ ವೇಳೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡ ಶ್ರೇಯಸ್‌ ಐಯ್ಯರ್‌ ಬಗ್ಗೆಯೂ ಲಕ್ಷ್ಮಣ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶ್ರೇಯಸ್ ಐಯರ್ ಆಟ ನನಗೆ ತುಂಬಾ ಸಂತಸ ನೀಡಿದೆ ಎಂದಿದ್ದಾರೆ.

"ಬಾಂಗ್ಲಾದೇಶ ವಿರುದ್ಧದ ನಾಗ್ಪುರ ಟಿ-20 ಯಲ್ಲಿ ಭಾರತ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಾದ ಶ್ರೇಯಸ್ ಐಯರ್ ಸಂದರ್ಭವನ್ನು ಅರಿತು ಚೆನ್ನಾಗಿ ಬ್ಯಾಟ್ ಬೀಸಿದರು. ರಾಹುಲ್ ಹಾಗೂ ಐಯರ್ ಆಟದಿಂದ ಬಾರತ ಉತ್ತಮ ಮೊತ್ತ ಪೇರಿಸುವಂತಾಯಿತು. ಶ್ರೇಯಸ್ ಐಯರ್ ಬ್ಯಾಟ್ ಬೀಸುವ ಮುನ್ನ ತಂಡದ ಸ್ಥಿತಿ ಹೇಗಿದೆ ಎಂಬುವುದನ್ನು ಅರಿತುಕೊಳ್ಳುತ್ತಾರೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಡಿಸೆಂಬರ್ 6 ರಂದು ಹೈದರಾಬಾದ್​ನಲ್ಲಿ ಮೊದಲ ಟಿ-20 ನಡೆಯಲಿದ್ದರೆ, ಡಿ. 8 ರಂದು ತಿರುವನಂತಪುರಂ ಎರಡನೇ ಪಂದ್ಯ ಹಾಗೂ ಅಂತಿಮ ಟಿ-20 ಡಿ. 11 ಕ್ಕೆ ಮುಂಬೈಯಲ್ಲಿ ನಿಗದಿ ಪಡಿಸಲಾಗಿದೆ.

42 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಬೌಲರ್ ದೀಪಕ್ ಚಹಾರ್ ಬಾರಿಸಿದ ರನ್ ಎಷ್ಟು ಗೊತ್ತಾ?

ಇನ್ನು ಡಿ. 15 ರಂದು ಚೆನ್ನೈನಲ್ಲಿ ಮೊದಲ ಏಕದಿನ, ಡಿ. 18 ವಿಶಾಖಪಟ್ಟಣಂನಲ್ಲಿ 2ನೇ ಏಕದಿನ ಹಾಗೂ ಡಿ. 22 ರಂದು ಕತಕ್​ನಲ್ಲಿ ಮೂರನೇ ಏಕದಿನ ಪಂದ್ಯ ಆಯೋಜಿಸಲಾಗಿದೆ.

First published: