ತಾಯಿಯ ಜನ್ಮ ದಿನಕ್ಕೆ ಮಗಳಿಂದ ಇಡೀ ಭಾರತವೇ ಹೊಗಳುವ ಗಿಫ್ಟ್; ಇದಕ್ಕಿಂತ ಇನ್ನೇನು ಬೇಕು!

PV Sindhu: ಎರಡು ವರ್ಷಗಳ ಬಳಿಕ ಒಕುಹರಾ ವಿರುದ್ಧ ಅಕ್ಷರಶಃ ಘರ್ಜಿಸಿದ ಸಿಂಧು ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಈ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಮೊದಲ ತಾರೆ ಎಂಬ ದಾಖಲೆ ಬರೆದು ಇತಿಹಾಸದ ಪುಟ ಸೇರಿದ್ದಾರೆ.

Vinay Bhat | news18-kannada
Updated:August 26, 2019, 11:09 AM IST
ತಾಯಿಯ ಜನ್ಮ ದಿನಕ್ಕೆ ಮಗಳಿಂದ ಇಡೀ ಭಾರತವೇ ಹೊಗಳುವ ಗಿಫ್ಟ್; ಇದಕ್ಕಿಂತ ಇನ್ನೇನು ಬೇಕು!
ಪಿ ವಿ ಸಿಂಧು
  • Share this:
ಬೆಂಗಳುರು (ಆ. 26): ಭಾರತದ ಸ್ಟಾರ್ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು, ಬಿಡಬ್ಲ್ಯುಎಫ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ಸ್ವಿಜರ್ಲೆಂಡ್​ನಲ್ಲಿ ನಡೆದ ಮಹಿಳಾ ಫೈನಲ್​ ಪಂದ್ಯದಲ್ಲಿ ಅದ್ಭುತ ಆಟವಾಡಿದ ಭಾರತೀಯ ಆಟಗಾರ್ತಿ ಜಪಾನ್​ನ ನಜೊಮಿ ಒಕುಹರಾ ಅವರನ್ನು ಮಣಿಸುವ ಮೂಲಕ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರು.

ಒಕುಹರಾ ಅವರನ್ನು 21-7, 21-7 ನೇರ ಸೆಟ್​ಗಳಿಂದ ಮಣಿಸಿ ಸಿಂಧು ಅವರು ಬಿಡಬ್ಲ್ಯುಎಫ್ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಮೊದಲ ತಾರೆ ಎಂಬ ದಾಖಲೆ ಬರೆದು ಇತಿಹಾಸದ ಪುಟ ಸೇರಿದರು.

It's a Special Birthday Gift, Says PV Sindhu's Mother About BWF World Championships Gold
ಪಿ ವಿ ಸಿಂಧು


ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿಂಧು, 'ಕಳೆದ ಬಾರಿ ನಾನು ಅಂತಿಮ ಹಂತದಲ್ಲಿ ಸೋತಿದ್ದೆ. ಹಿಂದಿನ ವರ್ಷಕೂಡ ಕೊನೆಯಲ್ಲಿ ಎಡವಿದ್ದೆ. ಹೀಗಾಗಿ ಈ ಬಾರಿ ಗೆಲ್ಲಲೇ ಬೇಕೆಂಬ ತೀರ್ಮಾನ ಮಾಡಿದ್ದೆ. ಇದು ನನ್ನ ಪಾಲಿಗೆ ಮಹತ್ವದ ಪಂದ್ಯವಾಗಿತ್ತು. ಕ್ರೀಡಾಂಗಣದಲ್ಲಿದ್ದ ಎಲ್ಲಾ ಅಭಿಮಾನಿಗಳು ನನಗೆ ಪ್ರೋತ್ಸಾಹ ನೀಡಿದರು, ಅವರಿಗೆ ಧನ್ಯವಾದ. ನನ್ನ ಭಾರತ ದೇಶಕ್ಕೆ ಗೆಲುವು ತಂದುಕೊಟ್ಟಿದ್ದು ಭಾರತೀಯಳಾಗಿ ನನಗೆ ತುಂಬಾ ಹೆಮ್ಮೆ ಆಗುತ್ತಿದೆ' ಎಂದು ಹೇಳಿದರು.

2 ವರ್ಷಗಳ ಬಳಿಕ ಶತಕದ ವೈಭವ; ಪಂದ್ಯ ಮುಗಿದ ಬಳಿಕ ರಹಾನೆ ಹೇಳಿದ್ದೇನು ಗೊತ್ತಾ?

'ಈ ಗೆಲುವನ್ನು ನಾನು ನನ್ನ ತಾಯಿಗೆ ಅರ್ಪಣೆ ಮಾಡುತ್ತಿದ್ದೇನೆ. ಇಂದು ಅವರ ಹುಟ್ಟಿದ ದಿನ, ಬರ್ತ್ ಡೆಗೆ ಅಮ್ಮನಿಗೇನಾದರು ಗಿಫ್ಟ್​​ ನೀಡಬೇಕು ಎಂದು ಅಂದುಕೊಂಡಿದ್ದೆ. ಇಂದು ಈ ಚಿನ್ನದ ಪದಕವನ್ನು ನನ್ನ ತಾಯಿಗೆ ಉಡುಗೊರೆಯಾಗಿ ಕೊಡುತ್ತಿದ್ದೇನೆ. ಯಾಕೆಂದರೆ ಇಂದು ನಾನು ಈ ಸ್ಥಾನಕ್ಕೆ ಏರಲು ಅವರೇ ಕಾರಣ' ಎಂದು ಸಿಂಧು ಅವರು ಖುಷಿಯಿಂದ ಮಾತನಾಡಿದರು.

 


24ರ ಹರೆಯದ ಸಿಂಧು ಈ ಹಿಂದೆ 2 ಬಾರಿ ಫೈನಲ್ ಪ್ರವೇಶಿಸಿದ್ದರು. 2017 ಮತ್ತು 2018ರ ಟೂರ್ನಿಯ ಫೈನಲ್‌ ಕಾದಾಟದಲ್ಲಿ ಸೋತಿದ್ದ ಭಾರತೀಯ ಆಟಗಾರ್ತಿ ಈ ಬಾರಿ ಮಾತ್ರ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. ಅದರಲ್ಲೂ 2017 ಫೈನಲ್‌ನಲ್ಲಿ ಪ್ರಶಸ್ತಿ ಅಂಚಿನಲ್ಲಿ ಸಿಂಧು ಎಡವಿದ್ದರು. ಅದು ಕೂಡ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳೊಂದಿಗೆ ಎಂಬುದು ವಿಶೇಷ. ಇದೀಗ ಎರಡು ವರ್ಷಗಳ ಬಳಿಕ ಒಕುಹರಾ ವಿರುದ್ಧ ಅಕ್ಷರಶಃ ಘರ್ಜಿಸಿದ ಸಿಂಧು ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.
First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ