On this day in 1999: ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಗಂಗೂಲಿ-ದ್ರಾವಿಡ್ ಜೊತೆಯಾಟಕ್ಕೆ 21 ವರ್ಷ!

Sourav Ganguly, Rahul Dravid: ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ ಆರಂಭಿಕ ಆಟಗಾರ ಸಡಗೊಪ್ಪನ್​ ರಮೇಶ್​ ಅವರನ್ನು ಕೇವಲ 5 ರನ್​ಗೆ ಕಳೆದುಕೊಂಡಿತ್ತು. ನಂತರ ಜೊತೆಯಾದ ಗಂಗೂಲಿ ಮತ್ತು ದ್ರಾವಿಡ್​ ಜೋಡಿ 2ನೇ ವಿಕೆಟ್​ಗೆ 318 ರನ್​ ಜೊತೆಯಾಟ ನಡೆಸಿ ವಿಶ್ವದಾಖಲೆ ಬರೆದಿದ್ದರು.

news18india
Updated:May 26, 2020, 11:01 AM IST
On this day in 1999: ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಗಂಗೂಲಿ-ದ್ರಾವಿಡ್ ಜೊತೆಯಾಟಕ್ಕೆ 21 ವರ್ಷ!
ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್.
  • Share this:
ಅದು 90ರ ದಶತಕದ ಕ್ರಿಕೆಟ್. ಒಂದು ತಂಡ 300 ಗಳಿಸುವುದೇ ದೊಡ್ಡ ದಾಖಲೆ ಎಂಬ ಕಾಲ. ಇಂತಹ ಸಂದರ್ಭದಲ್ಲಿ ಭಾರತದ ಈ ಜೋಡಿ 300ಕ್ಕೂ ಅಧಿಕ ರನ್ ಪೇರಿಸಿ ಇಡೀ ಕ್ರಿಕೆಟ್ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ಅಂತಹ ಅಪರೂಪದ ದಾಖಲೆಗೆ ಈಗ ಬರೊಬ್ಬರಿ 21 ವರ್ಷ!

ಹೌದು, ಜಾಗತಿಕ ಕ್ರಿಕೆಟ್​ನ ಗೋಡೆ ಎಂದೇ ಹೆಸರಾದ ರಾಹುಲ್ ದ್ರಾವಿಡ್ ಮತ್ತು ಬಂಗಾಳದ ಹುಲಿ ಸೌರವ್ ಗಂಗೂಲಿ ಬರೋಬ್ಬರಿ 318 ರನ್​ಗಳ ಜೊತೆಯಾಟ ನಿಭಾಯಿಸಿ 21 ವರ್ಷ ಪೂರೈಸಿತು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಒಂದೇ ಬಾರಿಗೆ ಪದಾರ್ಪಣೆ ಮಾಡಿದ್ದ ಕರ್ನಾಟಕದ ರಾಹುಲ್​ ದ್ರಾವಿಡ್​ ಹಾಗೂ​ ಸೌರವ್​ ಗಂಗೂಲಿ 1999 ಮೇ 26ರಂದು ಶ್ರೀಲಂಕಾ​ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 318 ರನ್ ಅಮೋಘ ಜೊತೆಯಾಟ ಆಡಿದರು.

Sri Lanka Cricket: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಯುವ ಆಟಗಾರ ಅರೆಸ್ಟ್​

ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ ಆರಂಭಿಕ ಆಟಗಾರ ಸಡಗೊಪ್ಪನ್​ ರಮೇಶ್​ ಅವರನ್ನು ಕೇವಲ 5 ರನ್​ಗೆ ಕಳೆದುಕೊಂಡಿತ್ತು. ನಂತರ ಜೊತೆಯಾದ ಗಂಗೂಲಿ ಮತ್ತು ದ್ರಾವಿಡ್​ ಜೋಡಿ 2ನೇ ವಿಕೆಟ್​ಗೆ 318 ರನ್​ ಜೊತೆಯಾಟ ನಡೆಸಿ ವಿಶ್ವದಾಖಲೆ ಬರೆದಿದ್ದರು.

ಗಂಗೂಲಿ 158 ಎಸೆತಗಳಲ್ಲಿ 17 ಬೌಂಡರಿ ಹಾಗೂ 7 ಸಿಕ್ಸರ್​ ಸೇರಿ 183 ರನ್ ಸಿಡಿಸಿ ವೈಯಕ್ತಿಕ ಶ್ರೇಷ್ಠ ಸಾಧನೆ ಮೆರೆದರೆ, ದ್ರಾವಿಡ್​ 129 ಎಸೆತಗಳಲ್ಲಿ 17 ಬೌಂಡರಿ 1 ಸಿಕ್ಸರ್​ ಸಹಿತ 145 ರನ್​ ಬಾರಿಸಿದರು.

ಏಕದಿನ ಪಂದ್ಯಗಳ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ 300 ರನ್​ ಜೊತೆಯಾಟ ನಡೆಸಿತ್ತು. ಇದು ಯಾವುದೇ ವಿಕೆಟ್​ ಜೊತೆಯಾಟದಲ್ಲಿ ದಾಖಲಾದ ಅತಿಹೆಚ್ಚು ರನ್​ಗಳ ದಾಖಲೆಯಾಗಿತ್ತು. ಈ ದಾಖಲೆಯನ್ನು ಅದೇ ವರ್ಷ ಸಚಿನ್​ ಹಾಗೂ ದ್ರಾವಿಡ್​ ಜೋಡಿ ಮುರಿದಿತ್ತು. ಆ ಪಂದ್ಯದಲ್ಲಿ ಸಚಿನ್​ 186 ಹಾಗೂ ದ್ರಾವಿಡ್​ 153 ರನ್​ ಗಳಿಸಿದ್ದರು.

ಐಪಿಎಲ್ ಪ್ರದರ್ಶನದ ಮೇಲೆ ನಾನು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುತ್ತೇನೆದ್ರಾವಿಡ್​-ಗಾಂಗೂಲಿ ಜೋಡಿಯ 21 ವರ್ಷಗಳ ಆ ಇನಿಂಗ್ಸ್​ ಅತಿ ಹೆಚ್ಚು ರನ್​ಗಳ ಜೊತೆಯಾಟ ನಡೆಸಿರುವ ಪಟ್ಟಿಯಲ್ಲಿ ಈಗಲೂ 5ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಕ್ರಿಸ್​ ಗೇಲ್​ ಹಾಗೂ ಸ್ಯಾಮ್ಯುಯೆಲ್​ ಇದ್ದಾರೆ. ಈ ಜೋಡಿ 2ನೇ ವಿಕೆಟ್​ಗೆ 372 ರನ್​ಗಳ ಜೊತೆಯಾಟ ನೀಡಿತ್ತು.

ಇನ್ನೂ ಇನ್ನೂರಕ್ಕೂ ಹೆಚ್ಚು ರನ್​ಗಳ ಜೊತೆಯಾಟವು ಸಾಧ್ಯವಾಗಿದ್ದು ವಿಶ್ವಕಪ್ ಪಂದ್ಯಗಳಲ್ಲಿ ಎಂಟು ಬಾರಿ  ಮಾತ್ರ. ಅವುಗಳಲ್ಲಿ ಅತಿ ದೊಡ್ಡ ಮೊತ್ತದ ಜೊತೆಯಾಟವಾಡಿದ ಶ್ರೇಯ ಹೊಂದಿರುವುದು ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರ ಇದೇ 318 ರನ್. ದ್ರಾವಿಡ್ ಹಾಗೂ ಗಂಗೂಲಿ ಅವರ ಅದ್ಭುತ ಜೊತೆಯಾಟದ ನೆರವಿನಿಂದ ಭಾರತ ಈ ಪಂದ್ಯದಲ್ಲಿ ಲಂಕಾ ವಿರುದ್ಧ 157 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು.

First published: May 26, 2020, 11:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading