HOME » NEWS » Sports » CRICKET IT IS DISHEARTENING MI HEAD COACH JAYAWARDENE EXPLAINS WHY NO SRI LANKAN PLAYER WILL PLAY IN IPL 2021 ZP

IPL 2021: ಐಪಿಎಲ್​ ಇತಿಹಾಸದಲ್ಲೇ ಇದುವರೆಗೆ ಹೀಗಾಗಿಲ್ಲ: ಬೇಸರ ಹೊರಹಾಕಿದ ಜಯವರ್ಧನೆ

ಶ್ರೀಲಂಕಾದ ಮಾಜಿ ಆಟಗಾರರು ಈ ಬಾರಿಯ ಐಪಿಎಲ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕರಾಗಿದ್ದಾರೆ. ಹಾಗೆಯೇ ಮುತ್ತಯ್ಯ ಮುರಳೀಧರನ್ ಸನ್‌ರೈಸರ್ಸ್ ಹೈದರಾಬಾದ್‌ನ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

news18-kannada
Updated:February 21, 2021, 9:28 PM IST
IPL 2021: ಐಪಿಎಲ್​ ಇತಿಹಾಸದಲ್ಲೇ ಇದುವರೆಗೆ ಹೀಗಾಗಿಲ್ಲ: ಬೇಸರ ಹೊರಹಾಕಿದ ಜಯವರ್ಧನೆ
Jayawardene
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಹರಾಜಿನಲ್ಲಿ ಶ್ರೀಲಂಕಾದ ಯಾವುದೇ ಆಟಗಾರರು ಬಿಕರಿಯಾಗಿಲ್ಲ. ಈ ಬಾರಿ ಶ್ರೀಲಂಕಾದ 9 ಆಟಗಾರರು ಮಿನಿ ಹರಾಜು ಪಟ್ಟಿಯಲ್ಲಿದ್ದರು. ಆದರೆ ಯಾವುದೇ ಫ್ರ್ಯಾಂಚೈಸ್ ಲಂಕಾದ ಆಟಗಾರರನ್ನು ಖರೀದಿಸಿಲ್ಲ ಎಂಬುದು ವಿಶೇಷ. ಇದರ ಬೆನ್ನಲ್ಲೇ ಶ್ರೀಲಂಕಾದ ಮಾಜಿ ನಾಯಕ ಮತ್ತು ಮುಂಬೈ ಇಂಡಿಯನ್ಸ್ ತರಬೇತುದಾರ ಮಹೇಲಾ ಜಯವರ್ಧನೆ ಕೂಡ ನಿರಾಸೆ ವ್ಯಕ್ತಪಡಿಸಿದ್ದಾರೆ. ಲಂಕಾ ಕ್ರಿಕೆಟಿಗರು ಆಯ್ಕೆಯಾಗದಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಯವರ್ಧನೆ, ಇದು ಶ್ರೀಲಂಕಾದ ಆಟಗಾರರಿಗೂ ಒಂದು ಪಾಠವಾಗಿದೆ. ಐಪಿಎಲ್‌ನಲ್ಲಿ ಆಡಲು ಬಯಸಿದರೆ, ಅವರ ಆಟದ ಮಟ್ಟವು ಸುಧಾರಿಸಬೇಕಾಗುತ್ತದೆ. ಕೆಲವು ಶ್ರೀಲಂಕಾದ ಆಟಗಾರರು ಖಂಡಿತವಾಗಿಯೂ ಫ್ರ್ಯಾಂಚೈಸ್‌ನ ರಾಡಾರ್‌ನಲ್ಲಿದ್ದಾರೆ. ಆದರೆ ಇಲ್ಲಿ ಹೆಚ್ಚು ಸ್ಪರ್ಧೆ ಇದೆ. ಈ ಬಾರಿ ಹರಾಜಿನಲ್ಲಿ ಸಾಗರೋತ್ತರ ಆಟಗಾರರಿಗೆ ಹೆಚ್ಚು ಖಾಲಿ ಸ್ಲಾಟ್‌ಗಳು ಇರಲಿಲ್ಲ. ಹೆಚ್ಚಿನ ತಂಡಗಳು ವೇಗದ ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳಿಗೆ ಖಾಲಿ ಹುದ್ದೆಗಳನ್ನು ಹೊಂದಿದ್ದವು. ನನ್ನ ಪ್ರಕಾರ ಶ್ರೀಲಂಕಾದ ಆಟಗಾರರು ಇಲ್ಲಿ ಸೋತಿದ್ದಾರೆ ಎಂದು ಜಯವರ್ಧನೆ ತಿಳಿಸಿದರು.

ಮುಂಬರುವ ದಿನಗಳಲ್ಲಿ ಲಂಕಾದ ಯುವ ಕ್ರಿಕೆಟಿಗರು ಈ ಚಿತ್ರವನ್ನು ಬದಲಾಯಿಸುತ್ತಾರೆ ಎಂಬ ನಂಬಿಕೆ ಎಂದ ಜಯವರ್ಧನೆ, ಆದರೆ ಅಲ್ಲಿಯವರೆಗೆ ಇದುವೇ ವಾಸ್ತವ ಎಂದು ಒಪ್ಪಿಕೊಳ್ಳಬೇಕು. ಅಲ್ಲದೆ ಭವಿಷ್ಯದ ಶ್ರೀಲಂಕಾದ ಆಟಗಾರರು ಪಂದ್ಯಾವಳಿಯಲ್ಲಿ ಆಡಬೇಕಾದರೆ, ಆಲ್​ರೌಂಡರ್​ಗಳಾಗಿ ರೂಪುಗೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಫೆಬ್ರವರಿ 18 ರಂದು ನಡೆದ ಐಪಿಎಲ್ ಹರಾಜಿನಲ್ಲಿ ಶ್ರೀಲಂಕಾದ ಕುಸಲ್ ಪೆರೆರಾ, ಥಿಸರಾ ಪೆರೆರಾ, ಕೆವಿನ್ ಕೋಥಿಗೋಡ, ಮಹೀಶ್ ಥಿಕಾಸನ್, ವಿಜಯಕಾಂತ್, ವನಿಡು ಹೆಸ್ರಂಗ, ದುಷ್ಮಂತ ಚಮೀರಾ ಮತ್ತು ಇಸ್ರು ಉದಾನಾ ಹೆಸರುಗಳಿದ್ದವು. ಅದರಲ್ಲೂ ಕಳೆದ ಬಾರಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಇಸ್ರು ಉದಾನಾ ಈ ಬಾರಿ ಫ್ರಾಂಚೈಸಿಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದರು.

ಆಟಗಾರರ ಹೊರತಾಗಿಯೂ ಶ್ರೀಲಂಕಾದ ಮಾಜಿ ಆಟಗಾರರು ಈ ಬಾರಿಯ ಐಪಿಎಲ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕರಾಗಿದ್ದಾರೆ. ಹಾಗೆಯೇ ಮುತ್ತಯ್ಯ ಮುರಳೀಧರನ್ ಸನ್‌ರೈಸರ್ಸ್ ಹೈದರಾಬಾದ್‌ನ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಮಹೇಲಾ ಜಯವರ್ಧನೆ ಮುಂದುವರೆಯಲಿದ್ದಾರೆ.
Published by: zahir
First published: February 21, 2021, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories