IPL 2021 ಸಿದ್ಧತೆಗಳು ಶುರುವಾಗಿವೆ. ಮುಂದಿನ ಸೀಸನ್ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿಗಳನ್ನು ಆರಂಭಿಸಿವೆ. ಅದರಂತೆ ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ಕೈ ಬಿಡುವುದು ಎಂಬ ಲೆಕ್ಕಚಾರದಲ್ಲಿದೆ. ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಇಸುರು ಉದಾನ ಕೂಡ ಮುಂಬರುವ ಐಪಿಎಲ್ನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಸದ್ಯ ದುಬೈನಲ್ಲಿ ನಡೆಯಲಿರುವ ಟಿ10 ಟೂರ್ನಿಯ ಸಿದ್ಧತೆಯಲ್ಲಿರುವ ಇಸುರು ಉದಾನ, ವೈಟ್ ಬಾಲ್ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರ ಕುರಿತು ಮಾತನಾಡಿದ್ದಾರೆ. ನನ್ನ ಪ್ರಕಾರ ವೈಟ್ ಬಾಲ್ ಕ್ರಿಕೆಟ್‌ನ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಎಂದು ಗುಣಗಾನ ಮಾಡಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರನ್ನು ಹೆಸರಿಸುವುದಾದರೆ ಕೊಹ್ಲಿ ಬೆಸ್ಟ್ ಬ್ಯಾಟ್ಸ್ಮನ್. ಹಾಗೆಯೇ ಬೌಲರ್ನ್ನು ಆಯ್ಕೆ ಮಾಡುವುದಾದರೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು ಆರಿಸಿಕೊಳ್ಳುವೆ. ಇನ್ನು ಆಲ್ರೌಂಡರ್ ಪೈಕಿ ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡುವುದಾಗಿ ಇಸುರು ಉದಾನ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ