ಧೋನಿಗೆ ಕೊನೆಯ ವಿಶ್ವಕಪ್; ಆಡಿದ ಮೂರು ವರ್ಲ್ಡ್​​ ಕಪ್​​​ನಲ್ಲಿ ಕ್ಯಾಪ್ಟನ್ ಕೂಲ್ ಆಟ ಹೇಗಿತ್ತು?

Mahendra Singh Dhoni: ಯಾವುದೇ ಕಠಿಣ ನಿರ್ಧಾರವನ್ನೂ ಅತ್ಯಂತ ಕೂಲ್ ಆಗಿ ನಿರ್ಧರಿಸುವ ತಾಕತ್ತು ಧೋನಿಗಿದೆ. ಹೀಗಾಯೆ ಧೋನಿ ಭಾರತಕ್ಕೆ ಮತ್ತೆ ಐಸಿಸಿ ವಿಶ್ವಕಪ್ ತಂದುಕೊಟ್ಟಿದ್ದು. ಅಲ್ಲದೆ ಐಸಿಸಿಯ ಮೂರು ಪ್ರಶಸ್ತಿಗಳನ್ನ ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿರುವುದು.

Vinay Bhat | news18
Updated:June 2, 2019, 6:24 PM IST
ಧೋನಿಗೆ ಕೊನೆಯ ವಿಶ್ವಕಪ್; ಆಡಿದ ಮೂರು ವರ್ಲ್ಡ್​​ ಕಪ್​​​ನಲ್ಲಿ ಕ್ಯಾಪ್ಟನ್ ಕೂಲ್ ಆಟ ಹೇಗಿತ್ತು?
ಎಂಎಸ್ ಧೋನಿ
  • News18
  • Last Updated: June 2, 2019, 6:24 PM IST
  • Share this:
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಗಿದ್ದರೂ ಧೋನಿ ಅಪ್ಪಣೆಯಲ್ಲಿದೆ ಕೊಹ್ಲಿ ಒಂದು ಹೆಜ್ಜೆ ಮುಂದೆ ಇಡುವುದಿಲ್ಲ. ಮಾಹಿಯ ತಂತ್ರಗಾರಿಕೆಗೆ ವಿಶ್ವವೇ ತಲೆಬಾಗಿದೆ. ಸದ್ಯ ಟೀಂ​​ ಇಂಡಿಯಾದಲ್ಲಿ ಧೋನಿ ಪ್ರಭಾವ ಎಷ್ಟಿದೆ ಅಂದರೆ ಧೋನಿ ಕೇವಲ ಓಬ್ಬ ಪ್ಲೇಯರ್ ಆಗಿ ಉಳಿದಿಲ್ಲ, ತಂಡದ ಕೋಚ್ ಕೂಡ ಹೌದು.

ಯಾವುದೇ ಕಠಿಣ ನಿರ್ಧಾರವನ್ನೂ ಅತ್ಯಂತ ಕೂಲ್ ಆಗಿ ನಿರ್ಧರಿಸುವ ತಾಕತ್ತು ಧೋನಿಗಿದೆ. ಹೀಗಾಗಿಯೆ ಧೋನಿ ಭಾರತಕ್ಕೆ ಮತ್ತೆ ಐಸಿಸಿ ವಿಶ್ವಕಪ್ ತಂದುಕೊಟ್ಟಿದ್ದು. ಅಲ್ಲದೆ ಐಸಿಸಿಯ ಮೂರು ಪ್ರಶಸ್ತಿಗಳನ್ನ ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿರುವುದು.

2011ರ ವಿಶ್ವಕಪ್​ನಲ್ಲಿ ಧೋನಿ ಫೈನಲ್ ಶಾಟ್

ಅಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲೂ ಧೋನಿ ಶ್ರೀಲಂಕಾದ ನುವಾನ್ ಕುಲಶೇಖರ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ವಿಶ್ವಕಪ್ ಗೆಲುವು ತಂದುಕೊಟ್ಟಿದ್ದರು. ಧೋನಿ ಸಿಕ್ಸರ್ ಸಿಡಿಸುತ್ತಿದ್ದಂತೆ ಮೈದಾನದಲ್ಲಿ ಧೋನಿ ಧೋನಿ ಎಂದು ಘೋಷಣೆ ಕೇಳಿಬಂದಿತ್ತು. ಹೀಗೆ ಅದೆಷ್ಟೋ ಪಂದ್ಯಗಳನ್ನು ಧೋನಿ ಸಿಕ್ಸರ್ ಮೂಲಕವೇ ಫಿನಿಷ್ ಮಾಡಿದ್ದಾರೆ.

ಇದನ್ನೂ ಓದಿ: Cricket World Cup 2019, SA vs BAN: ಶಕಿಬ್-ರಹಿಮ್ 142 ರನ್​ಗಳ ಜೊತೆಯಾಟ; ಬೃಹತ್ ಮೊತ್ತದತ್ತ ಬಾಂಗ್ಲಾ

ವಿಶ್ವದ ಕಠಿಣ ಪಿಚ್​ಗಳನ್ನು ಹೊಂದಿರುವ ಇಂಗ್ಲೆಂಡ್​ನಂತಹ ಸ್ವಿಂಗ್ ವಾತಾವರಣದಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾನೇ ಕಷ್ಟ. ಹೀಗಾಗಿ ಅನುಭವದ ಜೊತೆಗೆ ಸದ್ಯದ ಫಾರ್ಮ್ ಬಹಳಷ್ಟು ಮುಖ್ಯ. 37 ವರ್ಷದ ಧೋನಿ ಐಪಿಎಲ್​ಗೂ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ 3 ಅರ್ಧಶತಕ ದಾಖಲಿಸಿದರು. ಸರಣಿಯಲ್ಲಿ 327 ರನ್ ಕಲೆಹಾಕಿ ತನ್ನ ತಾಕತ್ತು ಪ್ರದರ್ಶಿಸಿದರು. ಇನ್ನು ಏಕದಿನ ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಮುಗಿದ ಐಪಿಎಲ್​ನಲ್ಲೂ ಚೆನ್ನೈ ಪರ ಧೋನಿ ಆಟ ಮರೆಯುವಂತಿಲ್ಲ. ಹೀಗಾಗಿ ಧೋನಿ ಭರ್ಜರಿ ಫಾರ್ಮ್​​ನಲ್ಲಂತು ಇದ್ದಾರೆ.

ಐಸಿಸಿ ವಿಶ್ವಕಪ್​ನಲ್ಲಿ ಧೋನಿ ಬ್ಯಾಟಿಂಗ್​ನಲ್ಲಿ ಮೋಡಿ ಮಾಡಿದ್ದಾರೆ. 3 ವಿಶ್ವಕಪ್ ಆಡಿರುವ ಧೋನಿ ಅವರ ಅಂಕಿ-ಅಂಶ ನೋಡುವುದಾದರೆ, 17 ಪಂದ್ಯಗಳಿಂದ 507 ರನ್ ಕಲೆಹಾಕಿದ್ದಾರೆ. 2011ರ ವಿಶ್ವಕಪ್ ಫೈನಲ್​ನಲ್ಲಿ ಧೋನಿ ಅಜೇಯ 91 ರನ್ ಕಲೆಹಾಕಿದ್ದು, ಗರಿಷ್ಠ ಸ್ಕೋರ್ ಆಗಿದೆ.ಹೀಗೆ ಮಹೇಂದ್ರ ಸಿಂಗ್ ಧೋನಿ, ಬ್ಯಾಟಿಂಗ್​ನಲ್ಲಷ್ಟೆ ತಂಡಕ್ಕೆ ಆಧಾರವಾಗುತ್ತಿಲ್ಲ. ನಾಯಕ ಕೊಹ್ಲಿಯ ಪ್ರತಿ ಹೆಜ್ಜೆಯಲ್ಲೂ ಧೋನಿ ಮಾತು ನಡೆಯುತ್ತಿದೆ. ಅಷ್ಟೇ ಅಲ್ಲದೆ ವಿಕೆಟ್ ಹಿಂಬದಿಯಲ್ಲಿ ನಿಂತು ಎದುರಾಳಿ ತಂತ್ರಗಾರಿಕೆಯನ್ನ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಮುಂಬರುವ ವಿಶ್ವಕಪ್​ಗೆ ಟೀಂ ಇಂಡಿಯಾದಲ್ಲಿ ಧೋನಿ ಪಾತ್ರ ತುಂಬಾನೆ ಮುಖ್ಯ ಆಗಿದೆ. ಅಲ್ಲದೆ ಧೋನಿಗಿದ್ದು ಕೊನೆಯ ವಿಶ್ವಕಪ್ ಆಗಿದ್ದು, ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

First published:June 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ