ಬೆಂಗಳೂರು (ಡಿ. 13): ಟೀಂ ಇಂಡಿಯಾದಲ್ಲಿ ಅವಕಾಶ ನೀಡಿದಷ್ಟು ವೈಫಲ್ಯ ಅನುಭವಿಸುತ್ತಿರುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ ಆಯ್ಕೆ ಸಮಿತಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸದ್ಯ ಟೀಂ ಇಂಡಿಯಾದಲ್ಲಿ ಪಂತ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಹೀಗಿರುವಾಗ ಪಂತ್ ಸ್ಯಾಂಡಲ್ವುಡ್ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಐರಾವತ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಊರ್ವಶಿ ರೌಟೇಲ ಅವರ ಜೊತೆ ಪಂತ್ ರಿಲೇಶನ್ಶಿಪ್ನಲ್ಲಿದ್ದಾರೆ ಎನ್ನಲಾಗುತ್ತಿದೆ.
ನಿವೃತ್ತಿ ಬಳಿಕವೂ ಯುವಿ ಹವಾ; ಕೊಹ್ಲಿ, ಧೋನಿ ಹಿಂದಕ್ಕಿ ದಾಖಲೆ ಬರೆದ ಸಿಕ್ಸರ್ ಕಿಂಗ್
![Is Rishabh Pant dating actress Urvashi Rautela? Rumours start to go viral on social media]()
ಊರ್ವಶಿ ರೌಟೇಲ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮುಂಬೈನಲ್ಲಿ ಮೂರನೇ ಟಿ-20 ಪಂದ್ಯ ಆರಂಭಕ್ಕೂ ಮುನ್ನ ಇವರಿಬ್ಬರು ಡಿನ್ನರ್ ಡೇಟ್ಗೆ ತೆರಳಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ. ಹೀಗಾಗಿ ಇವರಿಬ್ಬರ ನಡುವೆ ಸಮ್ಥಿಂಗ್- ಸಮ್ಥಿಂಗ್ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇದೇ ವರ್ಷದ ಆರಂಭದಲ್ಲಿ ಪಂತ್ ಅವರು ತಮ್ಮ ಪ್ರೇಯಸಿ
ಇಶಾ ನೇಗಿ ಜೊತೆ ಫೋಟೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ‘ನಾನು ನಿಮ್ಮನ್ನು ಖುಷಿಯಾಗಿರಿಸಲು ಇಷ್ಟಪಡುತ್ತೇನೆ. ಯಾಕಂದ್ರೆ ನಿಮ್ಮಿಂದಲೇ ನಾನು ಇಷ್ಟೊಂದು ಖುಷಿಯಾಗಿದ್ದೇನೆ' ಎಂದು ಪಂತ್ ಬರೆದುಕೊಂಡಿದ್ದರು.
ರಣಜಿ ಟ್ರೋಫಿಯಲ್ಲಿ ಕರ್ನಾಟಕ ಶುಭಾರಂಭ; ತಮಿಳುನಾಡು ವಿರುದ್ಧ ರೋಚಕ ಜಯ
ಆದರೆ, ಸದ್ಯ ಊರ್ವಶಿ ಜೊತೆ ಪಂತ್ ಹೆಸರು ಕೇಳಿಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಕ್ರಿಕೆಟಿಗರ ಜೊತೆಗೆ ಉರ್ವಶಿ ರೌಟೇಲ ಹೆಸರು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.
ಕೆಲ ದಿನಗಳ ಹಿಂದೆ ಇವರ ಹೆಸರು ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಕೇಳಿ ಬಂದಿತ್ತು. ಹಾರ್ದಿಕ್ ಮತ್ತು ಊರ್ವಶಿ ನಡುವೆ ಕುಚ್ ಕುಚ್ ಇದೆ. ಇಬ್ಬರಿಗೂ ಇನ್ನೇನು ಎಂಗೇಜ್ಮೆಂಟ್ ಆಗುತ್ತೆ ಎಂಬ ಸುದ್ದು ಹರಿದಾಡಿತ್ತು.
ಕೊಹ್ಲಿ, ರೋಹಿತ್, ರಾಹುಲ್ರನ್ನು ಹಿಂದಿಕ್ಕಿ ಪಾಕ್ ಆಟಗಾರ ನಂಬರ್ 1
ಇದಾಗಿ ಕೆಲವು ದಿನಗಳಲ್ಲೇ ಹಾರ್ದಿಕ್ ಅವರು ಎಲಿ ಎವಿರಂ ಜೊತೆ ಡೇಟಿಂಗ್ ಶುರು ಮಾಡಿದ್ದಾರೆ. ಇತ್ತ ಊರ್ವಶಿ ಅವರು ರಿಷಭ್ ಪಂತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ