Ajinkya Rahane| ಮುಗಿಯಿತೇ ಅಜಿಂಕ್ಯಾ ರಹಾನೆ ಕ್ರಿಕೆಟ್​ ಭವಿಷ್ಯ, ಏನು ಹೇಳುತ್ತಿವೆ ಅಂಕಿಅಂಶ?

ಕೊನೆಯ ಇನ್ನಿಂಗ್ಸ್​ನಲ್ಲಿ 8 ಎಸೆತಗಳನ್ನು ಎದುರಿಸಿದ್ದ ಅಜಿಂಕ್ಯಾ ರಹಾನೆ ಕ್ರಿಸ್ ವೋಕ್ಸ್​ ಎಸೆತಕ್ಕೆ ಎಲ್​ಬಿಡಬ್ಲ್ಯೂ ಬಲೆಗೆ ಸಿಲುಕಿ ಹೊರ ನಡೆದಿದ್ದಾಗ ಎಲ್ಲರ ಮನಸ್ಸು ಭಾರವಾಗಿತ್ತು. ಆಕಾಸವನ್ನು ನೋಡುತ್ತಾ ಪೆವಿಲಿಯನ್​ಗೆ ಹೆಜ್ಜೆ ಹಾಕಿದ ರಹಾನೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುವುದು ಕಷ್ಟ ಎನ್ನುತ್ತಿದ್ದಾರೆ ತಜ್ಞರು.

ಅಜಿಂಕ್ಯಾ ರಹಾನೆ.

ಅಜಿಂಕ್ಯಾ ರಹಾನೆ.

 • Share this:
  ಅಜಿಂಕ್ಯಾ ರಹಾನೆ...ಭಾರತದ ಪಾಲಿನ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ. ಅಸಲಿಗೆ ನಾಯಕ ವಿರಾಟ್​ ಕೊಹ್ಲಿಗಿಂತ ಮುಂಚಿತವಾಗಿಯೇ ಭಾರತದ ಟೆಸ್ಟ್​ ತಂಡದ ಮೂರನೇ ಕ್ರಮಂಕದ ಖಾಯಂ ಬ್ಯಾಟ್ಸ್​ಮನ್​ ಸ್ಥಾನವನ್ನು ಗಳಿಸಿದ್ದ ಕ್ಲಾಸಿಕ್​ ಬ್ಯಾಟ್ಸ್​ಮನ್. ಟೆಸ್ಟ್​ ಕ್ರಿಕೆಟ್​ ದಂಥಕತೆ ವಿವಿಎಸ್​ ಲಕ್ಷ್ಮಣ್​ರಿಂದ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆಗಾರರ ಎದುರು ಕಾಣಿಸಿಕೊಂಡ ಹೆಸರು ಅಜಿಂಕ್ಯಾ ರಹಾನೆ. ಕಳೆದ ಒಂದು ದಶಕಗಳಿಂದ ಭಾರತ ಟೆಸ್ಟ್​ ತಂಡದ ಅವಿಭಾಜ್ಯ ಅಂಗವೇ ಆಗಿರುವ ರಹಾನೆ ಇದೀಗ ರನ್ ಬರ ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ತೀರಾತಿ ತೀರ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಭಾಗಶಃ ಅವರ ಕ್ರಿಕೆಟ್ ಕೆರಿಯರ್​ನಲ್ಲೇ ಈ ಸರಣಿಯನ್ನು ಅತ್ಯಂತ ಕಳಪೆ ಸರಣಿ ಎನ್ನಲಾಗುತ್ತಿದೆ. ಹೀಗಾಗಿ ಕ್ರಿಕೆಟ್​ ತಜ್ಞರು ಅಜಿಂಕ್ಯಾ ರಹಾನೆ ಆಟ ಮುಗಿಯಿತು.. ಭಾಗಶಃ ಅವರು ಮತ್ತೆ ಟೆಸ್ಟ್​ ಕ್ರಿಕೆಟ್ ಅಂಗಳಕ್ಕೆ ಮರಳುವುದು ಕಷ್ಟ​ ಅಸಂಭವ ಎನ್ನುತ್ತಿದ್ದಾರೆ. ಹಾಗಾದರೆ ನಿಜಕ್ಕೂ ರಹಾನೆ ಆಟ ಮುಗಿಯಿತೇ?
  ಓವಲ್​ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ ನಿರ್ಗಮನದ ನಂತರ ಅಜಿಂಕ್ಯಾ ರಹಾನೆ ಅಂಗಳ ಪ್ರವೇಶಿಸಿದ್ದರು. ಕೊಹ್ಲಿ ಜವಾಬ್ದಾರಿಯನ್ನು ಅಂಗಳದಲ್ಲಿ ಉಪನಾಯಕ ನಿಭಾಯಿಸಲಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಆ ಕೊನೆಯ ಇನ್ನಿಂಗ್ಸ್​ನಲ್ಲಿ 8 ಎಸೆತಗಳನ್ನು ಎದುರಿಸಿದ್ದ ಅಜಿಂಕ್ಯಾ ರಹಾನೆ ಕ್ರಿಸ್ ವೋಕ್ಸ್​ ಎಸೆತಕ್ಕೆ ಎಲ್​ಬಿಡಬ್ಲ್ಯೂ ಬಲೆಗೆ ಸಿಲುಕಿ ಹೊರ ನಡೆದಿದ್ದಾಗ ಎಲ್ಲರ ಮನಸ್ಸು ಭಾರವಾಗಿತ್ತು. ಆಕಾಸವನ್ನು ನೋಡುತ್ತಾ ಪೆವಿಲಿಯನ್​ಗೆ ಹೆಜ್ಜೆ ಹಾಕಿದ ರಹಾನೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುವುದು ಕಷ್ಟ ಎನ್ನುತ್ತಿದ್ದಾರೆ ತಜ್ಞರು.

  ಆದರೆ, ಅಸಲಿಗೆ ಭಾರತ ತಂಡದ ಉಪನಾಯಕನಾಗಿರುವ ಅಜಿಂಕ್ಯಾ ರಹಾನೆ ಅದಕ್ಕೆಹೊರತಾಗಿಯೂ ಕಳೆದ ಒಂದು ದಶಕಗಳಿಂದ ಭಾರತ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ. ವಾಸ್ತವವಾಗಿ ಅವರು 2019 ಮತ್ತು 2021 ರ ನಡುವಿನ ಹಿಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ 42.92 ರ ಸರಾಸರಿಯಲ್ಲಿ 1159 ರನ್ ಗಳಿಸಿದ್ದ ಭಾರತದ ಪ್ರಮುಖ ರನ್ ಸ್ಕೋರರ್ ಆಗಿದ್ದರು. ಅಲ್ಲದೆ, ದಶಕಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದದ್ದು ಸಹ ಅಜಿಂಕ್ಯಾ ರಹಾನೆ ನಾಯಕತ್ವದಲ್ಲೇ ಎಂಬುದು ಉಲ್ಲೇಖಾರ್ಹ. ಈ ಸರಣಿಯಲ್ಲಿ ನಿರ್ಣಾಯಕ ಪಂದ್ಯದಲ್ಲಿ ರಹಾನೆ ಶತಕ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

  ಇದನ್ನೂ ಓದಿ: India Vs England| ಕ್ರಿಕೆಟ್ ಅಂಗಳದಲ್ಲಿ ಕೊರೋನಾ ಭೀತಿ; ಭಾರತ-ಇಂಗ್ಲೆಂಡ್​ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದು!

  ಒಂದಕ್ಕಿಂತ ಹೆಚ್ಚು ರೀತಿಯಲ್ಲಿ, ರಹಾನೆ ಭಾರತೀಯ ಕ್ರಿಕೆಟ್ ನ ಒಳ್ಳೆಯ ವ್ಯಕ್ತಿ. ಆತ ಮೃದು ಸ್ವಭಾವದ, ಗೌರವಾನ್ವಿತ ಮತ್ತು ನಿಸ್ವಾರ್ಥ ಆಟಗಾರ ಎಂದೇ ಖ್ಯಾತಿ ಪಡೆದವರು. ಬೇರೆ ರೀತಿಯಲ್ಲಿ ಹೇಳುವುದಾದರೆ, ರಹಾನೆ ನಿಜವಾದ 'ತಂಡದ ಆಟಗಾರ'ನ ಎಲ್ಲ ಗುಣಗಳನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಹೀಗಾಗಿ ತಂಡದಲ್ಲಿ ಫಾರ್ಮ್​ ಲೆಕ್ಕಾಚಾರದ ಹೊರತಾಗಿಯೂ ಇಂತಹ ಆಟಗಾರನನ್ನು ಹೊಂದಿರುವುದು ನಾಯಕನಿಗೆ ಮತ್ತಷ್ಟು ಬಲ ತರುವುದರಲ್ಲಿ ಎರಡು ಮಾತಿಲ್ಲ.

  ಇದನ್ನೂ ಓದಿ: Malhotra Sixers- ಆರು ಬಾಲ್​ಗೆ ಆರು ಸಿಕ್ಸ್- ಗಿಬ್ಸ್ ವಿಶ್ವದಾಖಲೆ ಸರಿಗಟ್ಟಿದ ಜಸ್​ಕರಣ್ ಮಲ್ಹೋತ್ರಾ

  ರಹಾನೆ ಕ್ರೀಸ್‌ನಲ್ಲಿದ್ದಾಗ, ಅವರು ಧ್ಯಾನ ಮಾಡುವ ಸನ್ಯಾಸಿಯಂತೆ - ಅನುಕರಣೀಯ ಪ್ರಮಾಣದ ಶಿಸ್ತು, ಏಕಾಗ್ರತೆ, ಗ್ರಿಟ್ ಮತ್ತು ಸ್ವಭಾವವನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಧ್ಯಾನದ ಆಳವಾದ ಸನ್ನಿವೇಶದಲ್ಲಿರುವ ಸನ್ಯಾಸಿಯಂತೆ, ರಹಾನೆ ತನ್ನ ಸುತ್ತಮುತ್ತಲಿನ ಮತ್ತು ಬಾಹ್ಯಗಳಿಂದ ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ರಹಾನೆಯ ಬ್ಯಾಟಿಂಗ್ ಶಾಂತತೆಯನ್ನು ನಿರೂಪಿಸುತ್ತದೆ. ಆದಾಗ್ಯೂ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಅಜಿಂಕ್ಯಾ ರಹಾನೆ 7 ಇನ್ನಿಂಗ್ಸ್‌ಗಳಿಂದ 15.57 ಸರಾಸರಿಯಲ್ಲಿ 109 ರನ್ ಗಳಿಸಿದ್ದಾರೆ. ಈ ಸರಾಸರಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ನ್​ಗೆ ಸರಿಹೊಂದುವುದಿಲ್ಲ ನಿಜ. ಆದರೂ ರಹಾನೆ ಮತ್ತೆ ಫಾರ್ಮ್​ಗೆ ಮರಳುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಬೆಂಚ್​ನಲ್ಲಿ ಇಲ್ಲ ಎಂಬುದೇ ಸತ್ಯ.
  Published by:MAshok Kumar
  First published: