ವೃತ್ತಿ ಬದುಕಿನ ಕೊನೆಯ ಪಂದ್ಯವಾಡಿದ್ರಾ ಧೋನಿ?: ಹೆಡಿಂಗ್ಲೆ ಮೈದಾನದಲ್ಲಿ ಮಾಜಿ ಕ್ಯಾಪ್ಟನ್​ ಮಾಡಿದ್ದೇನು ಗೊತ್ತಾ?


Updated:July 18, 2018, 2:02 PM IST
ವೃತ್ತಿ ಬದುಕಿನ ಕೊನೆಯ ಪಂದ್ಯವಾಡಿದ್ರಾ ಧೋನಿ?: ಹೆಡಿಂಗ್ಲೆ ಮೈದಾನದಲ್ಲಿ ಮಾಜಿ ಕ್ಯಾಪ್ಟನ್​ ಮಾಡಿದ್ದೇನು ಗೊತ್ತಾ?

Updated: July 18, 2018, 2:02 PM IST
ನ್ಯೂಸ್​ 18 ಕನ್ನಡ

ಲಂಡನ್​​(ಜು.18): ಹೆಡಿಂಗ್ಲೆ ಮೈದಾನದಲ್ಲಿ ನಡೆದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್​ ನಡುವಿನ ಕೊನೆಯ ವನ್​ ಡೇ ಪಂದ್ಯದಲ್ಲಿ ಆರಂಭದಲ್ಲಿ ಬೌಲಿಂಗ್​, ಬಳಿಕ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್​ ಭಾರತವನ್ನು ಸೋಲಿಸಿದೆ. ಇಂಗ್ಲೆಂಡ್​ 8 ವಿಕೆಟ್​ಗಳ ಜಯ ಗಳಿಸಿರುವುದರೊಂದಿಗೆ ಸೀರೀಸ್​ನಲ್ಲಿ 2-1 ಅಂತರದಲ್ಲಿ ಕಾಯ್ದುಕೊಂಡು ನಿರಂತರವಾಗಿ ಜಯ ಗಳಿಸುತ್ತಿದ್ದ ಭಾರತದ ನಾಗಾಲೋಟಕ್ಕೆ ಕಡಿವಾಣ ಹಾಕಿದೆ.

ಇನ್ನು ಈ ಪಂದ್ಯದ ಬಳಿಕ ಮಾಜಿ ಕ್ಯಾಪ್ಟನ್​ ಧೋನಿ ಧೋನಿಯ ನಡವಳಿಕೆಯು ಇಡೀ ಸೋಷಲ್​ ಮೀಡಿಯಾದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ.

ನಿವೃತ್ತಿ ಪಡೆಯುತ್ತಾರಾ ಧೋನಿ?

ಸಾಮಾನ್ಯವಾಗಿ ಒಂದು ವೇಳೆ ಬೌಲರ್​ ಒಬ್ಬ ಉತ್ತಮ ಬೌಲಿಂಗ್​ ಮಾಡಿದರೆ ಅಥವಾ ಬ್ಯಾಟ್ಸ್​ಮನ್​ ಉತ್ತಮವಾಗಿ ಆಡಿದರೆ ಆತ ನೆನಪಿಗಾಗಿ ಬಾಲ್​ ತನ್ನಲ್ಲೇ ಇಟ್ಟುಕೊಳ್ಳುತ್ತಾರೆ. ಆದರೆ ಇಂಗ್ಲೆಂಡ್​ ವಿರುದ್ಧದ ಕೊನೆಯ ಪಂದ್ಯದಲ್ಲಿ ಮಾತ್ರ ಕಂಡಿದ್ದು ಮಅತ್ರ ಇವೆಲ್ಲಕ್ಕಿಂತಲೂ ಭಿನ್ನವಾದ ವಿಚಾರ. ವಾಸ್ತವವಾಗಿ ಪಂದ್ಯ ಮುಗಿದ ಬಳಿಕ ಅಂಪೈರ್​ ಬಳಿ ತೆರಳಿದ ಧೋನಿ ಬಾಲ್​ ಕೇಳಿ ಪಡೆದಿದ್ದಾರೆ. ಇದನ್ನು ಗಮನಿಸಿದ ಬಳಿಕ ಸೋಲಿನ ಬಳಿಕ ಧೋನಿ ಬಹುದೊಡ್ಡ ಹೆಜ್ಜೆ ಇರಿಸಲಿದ್ದಾರೆ ಹಾಗೂ ಇದು ಅವರ ಕೊನೆಯ ಪಂದ್ಯ ಎಂಬುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಏಕದಿನ ಸೀರೀಸ್​ ಸೋತ ಭಾರತ

ಇಂಗ್ಲೆಂಡ್​ನ ಕಠಿಣ ಬೌಲಿಂಗ್​ನಿಂದಾಗಿ ಟೀಂ ಇಂಡಿಯಾ 8 ವಿಕೆಟ್​ ಕಳೆದುಕೊಂಡು ಕೇವಲ 256 ರನ್​ ಗಳಿಸಿತ್ತು. ಆದರೆ ಇಂಗ್ಲೆಂಡ್​ ಭಾರತ ನೀಡಿದ ಈ ಗುರಿಯನ್ನು 44.3 ಓವರ್​ನಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು.
Loading...

3 ಪಂದ್ಯಗಳ ಈ ಸೀರೀಸ್​ ಈ ಮ್ಯಾಚ್​ಗೂ ಮೊದಲು 1-1 ಮೂಲಕ ಸಮನಾಗಿತ್ತು. ಹೀಗಾಗಿ ಮೂರನೇ ಪಂದ್ಯ ನಿರ್ಣಾಯಕವಾಗಿದ್ದು, ಈ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಇಂಗ್ಲೆರಂಟ್​ ತಾನು ಟಿ20ಯಲ್ಲಿ ಪಡೆದಿದ್ದ ಸೋಲಿನ ಸೇಡು ತೀರಿಸಿಕೊಂಡಿದೆ. ನಿರಂತರವಾಗಿ 9 ಸೀರೀಸ್​ ಗೆದ್ದಿದ್ದ ಭಾರತಕ್ಕೆ ಏಕದಿನ ಪಂದ್ಯದಲ್ಲಿ ಸೋಲೆದುರಾಗಿದೆ.
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ