Irfan Pathan vs Amit Mishra: ಸಂವಿಧಾನದ ಹೆಸರಲ್ಲಿ ಕಿತ್ತಾಡಿಕೊಂಡ ಮಾಜಿ ಕ್ರಿಕೆಟಿಗರು

ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ

ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ

ಮತ್ತೊಬ್ಬರು ಟ್ವಿಟ್ "ಮಿಶ್ರಾ ಜೀ, ನಮಗೆ ನಿಮ್ಮಂತಹ ಹೆಚ್ಚು ಜನರು ಬೇಕು" ಎಂದು ಟ್ವೀಟ್ ಮಾಡಿದ್ದಾರೆ.

  • Share this:

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ (Irfan Pathan) ಮತ್ತು ಮತ್ತೋರ್ವ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ (Cricketer Amit Mishra)  ನಡುವೆ ಟ್ವೀಟರ್​ನಲ್ಲಿ (Twitter) ಕಿರಿಕಿರಿ ಶುರುವಾಗಿದೆ. ಅದೂ ಕ್ರಿಕೆಟ್​ಗೆ ಸಂಬಂಧಿಸಿದ್ದಲ್ಲ. ಆದರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂಬುದು ಸಹ ಸ್ಪಷ್ಟವಾಗದಂತಹ ಒಂದು ವಿಷಯದ ಬಗ್ಗೆ ಇಬ್ಬರು ಮಾಜಿ ಕ್ರಿಕೆಟಿಗರ ನಡೆದ ಕೊಂಚ ಘರ್ಷಣೆ ನಡೆದಿದೆ. ಶುಕ್ರವಾರ ಬೆಳಗ್ಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಭಾರತದ 'ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯ'ದ ಕುರಿತು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್​ಗೆ ಅಮಿತ್ ಮಿಶ್ರಾ ನೀಡಿದ ಪ್ರತಿಕ್ರಿಯೆಗೆ ಹಲವು ನೆಟ್ಟಿಗರು  ಪ್ರತಿಕ್ರಿಯೆ ನೀಡುತ್ತಿದ್ದಾರೆ.


"ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ಆದರೆ......." ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.  ಅವರು ತಿಳಿಸಲು ಪ್ರಯತ್ನಿಸುತ್ತಿರುವ ಸಂದೇಶ ಏನೆಂದು ಟ್ವೀಟ್​ನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ.


ಅಮಿತ್ ಮಿಶ್ರಾ ಏನು ರಿಪ್ಲೈ ಮಾಡಿದ್ರು?
ಇರ್ಫಾನ್ ಪಠಾಣ್ ಅವರ ಟ್ವೀಟ್​ಗೆ ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು, "ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೆಲವು ಜನರು ನಮ್ಮ ದೇಶದ ಸಂವಿಧಾನವೇ ಮೊದಲು ಅನುಸರಿಸಬೇಕಾ ಪುಸ್ತಕ ಎಂಬುದನ್ನು ಅರಿತುಕೊಂಡರೆ” ಎಂದು ವ್ಯಂಗ್ಯವಾಗಿ ಅಮಿತ್ ಮಿಶ್ರಾ ಕಾಂಎಂಟ್ ಮಾಡಿದ್ದಾರೆ.


ಇದನ್ನೂ ಓದಿ: Viral Photo: ಐಪಿಎಲ್​ ಆಡ್ತಿರೋ ಹಾರ್ದಿಕ್​ ಪಾಂಡ್ಯ ಇಲ್ಲಿ ಹೆಂಗ್​ ಬಂದ್ರು? ಇದಕ್ಕೆನಾ ಅವರನ್ನು ಆಲ್​ರೌಂಡರ್​ ಅನ್ನೋದು!


ಎರಡೂ ಟ್ವೀಟ್‌ಗಳ ಸಂದರ್ಭವು ಅಸ್ಪಷ್ಟವಾಗಿದೆ. ಆದರೂ ದೆಹಲಿಯ ಜಹಾಂಗೀರ್‌ಪುರಿಯು ಹನುಮ ಜಯಂತಿಯ ಮೆರವಣಿಗೆ ಸಾಗುತ್ತಿರುವಾಗ ಎರಡು ಸಮುದಾಯಗಳ ನಡುವೆ ಕಳೆದ ಶನಿವಾರ ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾದ ಕೆಲವು ದಿನಗಳ ನಂತರ ಟ್ವೀಟ್​ಗಳು ಬೇರೆಯದೇ ಅರ್ಥವನ್ನು ನೀಡುತ್ತಿವೆ.


ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತ್ ಈ ಮೂರು ರಾಜ್ಯಗಳಲ್ಲಿ ಧಾರ್ಮಿಕ ಮೆರವಣಿಗೆಗಳು ಮತ್ತು ರಾಮ ನವಮಿಯಂತಹ ಆಚರಣೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಇಟ್ಟು ನೋಡಿದ ನೆಟ್ಟಿಗರು ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ ನಡುವಿನ ಮಾತುಕತೆಗೆ ಬೇರೆಯದೇ ಆಯಾಮ ನೀಡಿದ್ದಾರೆ.









ಇದನ್ನೂ ಓದಿ: Anushka Sharma: ನಿಮ್ಮ ಪಕ್ಕ ಅನುಷ್ಕಾ ಶರ್ಮಾ ಕುಳಿತು IPL ನೋಡಿದರೆ ಹೇಗಿರುತ್ತೆ?


ಟ್ವಿಟ್ಟರ್ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ, "ರಾಷ್ಟ್ರವು ಮತ್ತೆ ಹೊಸ ಸವಾಲುಗಳನ್ನು ಮುಂಭಾಗದಲ್ಲಿ ಎದುರಿಸಬೇಕಾಗಿದೆ. ಅದನ್ನು ಅರ್ಥಮಾಡಿಸಿದ್ದಕ್ಕಾಗಿ ಧನ್ಯವಾದಗಳು ಅಮಿತ್."  ಎಂದು ಬರೆದಿದ್ದಾರೆ. ಮತ್ತೊಬ್ಬರು ಟ್ವಿಟ್ "ಮಿಶ್ರಾ ಜೀ, ನಮಗೆ ನಿಮ್ಮಂತಹ ಹೆಚ್ಚು ಜನರು ಬೇಕು" ಎಂದು ಟ್ವೀಟ್ ಮಾಡಿದ್ದಾರೆ.

First published: