IPL 2022: CSK ಯಲ್ಲಿ ಫಾಫ್ ಡುಪ್ಲೆಸಿಸ್ ಸ್ಥಾನ ತುಂಬುವ ಆಟಗಾರ ಯಾರು? ಇರ್ಫಾನ್ ಪಠಾಣ್ ಉತ್ತರ ಓದಿ!

ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (Irfan Pathan) ದಕ್ಷಿಣ ಆಫ್ರಿಕಾದ ಸ್ಟಾರ್‌ ಬ್ಯಾಟ್ಸಮನ್‌ ಫಾಫ್ ಡುಪ್ಲೆಸಿಸ್ ಸ್ಥಾನ ತುಂಬುವ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಿಶ್ವ ಕ್ರಿಕೆಟ್‌ನ ಶ್ರೀಮಂತ ಲೀಗ್‌ ಎನಿಸಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)‌ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. 15ನೇ ಆವೃತ್ತಿಯ ಟೂರ್ನಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಮೆಗಾ ಆಕ್ಷನ್‌ (IPL Mega Auction)  ಬಳಿಕ ಸಾಕಷ್ಟು ಬದಲಾವಣೆ ಕಂಡಿರುವ ಎಲ್ಲಾ ತಂಡಗಳು ಹೊಸ ಹುರುಪಿನೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿವೆ. ಈ ನಡುವೆ ಐಪಿಎಲ್‌ನ ಫೇವರೆಟ್‌ ತಂಡವಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಪ್ಲೇಯಿಂಗ್‌ ಇಲೆವೆನ್‌ ಬಗ್ಗೆ ಅಭಿಮಾನಿಗಳು ಕುತೂಹಲ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ಆರಂಭಿಕ ಬ್ಯಾಟಿಂಗ್‌ ಅಸ್ತ್ರವಾಗಿದ್ದ ಫಾಫ್ ಡುಪ್ಲೆಸಿಸ್  (Faf Du Plessis) ಈ ಬಾರಿ ತಂಡದಲ್ಲಿ ಇಲ್ಲದಿರುವುದು, ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಲ್ಲಿ (CSK Fans) ಆತಂಕ ಮೂಡಿಸಿದೆ.

ಋತುರಾಜ್‌ ಗಾಯಕ್ವಾಡ್‌ ಅವರ ಜೊತೆಗೆ ಆರಂಭಿಕನಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಬಗ್ಗೆ ಸಿಎಸ್‌ಕೆ ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದಾರೆ. ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (Irfan Pathan) ದಕ್ಷಿಣ ಆಫ್ರಿಕಾದ ಸ್ಟಾರ್‌ ಬ್ಯಾಟರ್ ಫಾಫ್ ಡುಪ್ಲೆಸಿಸ್ ಸ್ಥಾನ ತುಂಬುವ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ.

ಓಪನರ್‌ ಆಗಿ ಯಾರು?
ಐಪಿಎಲ್‌ನ ಪ್ರತಿ ಪಂದ್ಯಕ್ಕೂ ತನ್ನದೇ ರಣತಂತ್ರ ರೂಪಿಸಿಕೊಂಡು ಆಡಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ವಿದೇಶಿ ಆಟಗಾರನನ್ನು ಆರಂಭಿಕ ಬ್ಯಾಟರ್‌ ಆಗಿ ಕಣಕ್ಕಿಳಿಯುವ ತಂತ್ರಗಾರಿಕೆ ಹೊಂದಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ 1 ಕೋಟಿ ರೂ. ಪಡೆದು ಸಿಎಸ್‌ಕೆ ಕೂಡಿಕೊಂಡಿರುವ ಹಾಗೂ ಚೊಚ್ಚಲ ಐಪಿಎಲ್‌ ಪಂದ್ಯಾವಳಿ ಆಡುತ್ತಿರುವ ನ್ಯೂಜಿಲೆಂಡ್‌ನ ಡೆವೊನ್‌ ಕಾನ್ವೇ ಅವರನ್ನು ಓಪನರ್‌ ಆಗಿ ಆಡಿಸುವ ಸಾಧ್ಯತೆ ಇದೆ.

ರಾಬಿನ್‌ ಉತ್ತಪ್ಪ ಆರಂಭಿಕರಾಗಿ ಇಳಿಯುತ್ತಾರಾ?
ಮಹಾರಾಷ್ಟ್ರದ ಪಿಚ್‌ ಕಂಡಿಷನ್‌ನಲ್ಲಿ ಕಾನ್ವೇ ಆರಾಮವಾಗಿ ಆಡುವಂತೆ ಕಾಣುತ್ತಿದೆ. ಇದರ ನಡುವೆ 2 ಕೋಟಿ ರೂ. ಮೊತ್ತಕ್ಕೆ ಚೆನ್ನೈ ತಂಡದಲ್ಲಿ ಉಳಿದುಕೊಂಡಿರುವ ರಾಬಿನ್‌ ಉತ್ತಪ್ಪ ಸಹ ತಂಡ ಆರಂಭಿಕನಾಗಿ ಕಣಕ್ಕಿಳಿಯಬಹುದು ಎಂದು ಇರ್ಫಾನ್‌ ಪಠಾಣ್‌ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯ ಗೇಮ್‌ ಪ್ಲ್ಯಾನ್‌ ಶೋನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಎರಡು ಆಯ್ಕೆಗಳು ಯಾವುದು?
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಖಂಡಿತವಾಗಿಯೂ ಎರಡು ಆಯ್ಕೆಗಳಿದ್ದು, ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್‌ ಕಾನ್ವೆ ಉತ್ತಮ ಆಯ್ಕೆ ಆಗಲಿದ್ದಾರೆ. ಮಹಾರಾಷ್ಟ್ರ, ವಾಂಖೆಡೆ ಹಾಗೂ ಸಿಸಿಐ ಪಿಚ್‌ಗಳಲ್ಲಿ ಕಾನ್ವೇ ಉತ್ತಮವಾಗಿ ಆಡಲಿದ್ದಾರೆ. ಒಂದೊಮ್ಮೆ ಕಾನ್ವೇ ಅವರನ್ನ ಆರಂಭಿಕನಾಗಿ ಆಡಿಸದಿದ್ದಲ್ಲಿ, ರಾಬಿನ್‌ ಉತ್ತಪ್ಪ ಎರಡನೇ ಆಯ್ಕೆಯಾಗಿದ್ದು, ಅವರು ಕೂಡ ಉತ್ತಮ ಆರಂಭಿಕ ಬ್ಯಾಟ್ಸಮನ್‌ ಆಗಿದ್ದಾರೆ ಎಂದು ಪಠಾಣ್‌ ತಿಳಿಸಿದ್ದಾರೆ.

ಮಿಸ್ಟರಿ ಸ್ಪಿನ್ನರ್‌ ಮಹೇಶ್‌ ತೀಕ್ಷಣಗೆ ಸಿಗುವುದೇ ಚಾನ್ಸ್?
ಅಲ್ಲದೆ ಸಿಎಸ್‌ಕೆ ಬೌಲಿಂಗ್‌ ಆಯ್ಕೆಯ ಬಗ್ಗೆಯೂ ಚರ್ಚಿಸಿರುವ ಇರ್ಫಾನ್‌ ಪಠಾಣ್‌, ಡೆವೊನ್‌ ಕಾನ್ವೇ ಅವರನ್ನು ಆಡಿಸದೆ, ಚೆನ್ನೈ ಸೂಪರ್‌ ಕಿಂಗ್ಸ್‌ ರಾಬಿನ್‌ ಉತ್ತಪ್ಪ ಅವರನ್ನ ಆರಂಭಿಕ ಬ್ಯಾಟರ್ ಆಗಿ ಆಡಿಸಿದರೆ, 70 ಲಕ್ಷಕ್ಕೆ ಸಿಎಸ್‌ಕೆ ಪಾಲಾಗಿರುವ ಮಿಸ್ಟರಿ ಸ್ಪಿನ್ನರ್‌ ಮಹೇಶ್‌ ತೀಕ್ಷಣ ಅವರನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬಳಸುವ ಅವಕಾಶ ಸಿಗಲಿದೆ ಎಂದಿದ್ದಾರೆ.

ಇದನ್ನೂ ಓದಿ: IPL ಸೃಷ್ಟಿಕರ್ತ ಮೋದಿಗೆ IPLನಿಂದ ನಿಷೇಧ ಹೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಕಥೆ

ಉಳಿದಂತೆ ತಂಡದಲ್ಲಿ ವಿದೇಶಿ ಆಟಗಾರ ಆಡಂ ಮಿಲ್ನೇ ಅವರನ್ನ ತಂಡದಲ್ಲಿ ಆಡಿಸಬೇಕಿದೆ. ಏಕೆಂದರೆ ಮಹಾರಾಷ್ಟ್ರ ಪಿಚ್‌ಗಳಲ್ಲಿ ಹೆಚ್ಚಿನ ವೇಗದ ಬೌಲಿಂಗ್‌ ಅಗತ್ಯವಿದೆ. ಇವರೊಂದಿಗೆ ಡ್ವೇನ್‌ ಬ್ರಾವೊ, ಮೊಯಿನ್‌ ಅಲಿ ಅವರುಗಳನ್ನು ತಂಡದಲ್ಲಿ ಆಡಿಸಿದರೆ, ನಾಲ್ಕು ವಿದೇಶಿ ಆಟಗಾರರ ಸ್ಥಾನ ಭದ್ರವಾಗಲಿದೆ. ಈ ಆಯ್ಕೆಯಲ್ಲಿ ಡೆವೊನ್‌ ಕಾನ್ವೇ ತಂಡದಲ್ಲಿ ಆಡದಿದ್ದರೆ ಮಿಸ್ಟರ್‌ ಸ್ಪಿನ್ನರ್‌ ಮಹೇಶ್‌ ತೀಕ್ಷಣ, ತಂಡದಲ್ಲಿ ಆಡುವ ಅವಕಾಶ ಪಡೆಯಲಿದೆ ಎಂದು ಇರ್ಫಾನ್‌ ಪಠಾಣ್‌ ವಿವರಿಸಿದ್ದಾರೆ.

ಇದನ್ನೂ ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

2022ರ ಐಪಿಎಲ್‌ಗೆ ಸಿದ್ಧತೆ ಆರಂಭಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಮಾರ್ಚ್‌ 26ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದೊಂದಿಗೆ ಹಣಾಹಣಿ ನಡೆಸಲಿದೆ.
Published by:guruganesh bhat
First published: