Irfan Pathan: ಚೆನ್ನೈ ಸೂಪರ್​ ಕಿಂಗ್ಸ್​​​​ ತಂಡದ ಶೂ ರಿಪೇರಿ ಮಾಡುವವನ ಸಂಕಷ್ಟಕ್ಕೆ ಮಿಡಿದ ಇರ್ಫಾನ್​​ ಪಠಾಣ್​​!

Irfan Pathan: ಕಳೆದ 12 ವರ್ಷಗಳಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಶೂ ರಿಪೇರಿ ಮಾಡುತ್ತಿದ್ದ ಭಾಸ್ಕರನ್​ಗೂ ಲಾಕ್​ಡೌನ್​ ಇಫೆಕ್ಟ್​ ತಟ್ಟಿದೆ. ಇದರಿಂದ ಅವರ ಜೀವನ ಸಂಕಷ್ಟದಲ್ಲಿ ಸಿಲುಕಿ ಕೊಂಡಿತ್ತು. ಈ ವಿಚಾರ ತಿಳಿದಂತೆ ಇರ್ಫಾನ್ ಪಠಾಣ್​ 25 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ.

ಇರ್ಫಾನ್ ಪಠಾಣ್​

ಇರ್ಫಾನ್ ಪಠಾಣ್​

 • Share this:
  ಕೊರೋನಾ ಲಾಕ್​ಡೌನ್​ನಿಂದಾಗಿ ಅನೇಕರ ಬದುಕು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಅತ್ತ ಕೆಲಸವಿಲ್ಲದೆ, ಇತ್ತ ಹಣವಿಲ್ಲದೆ ವ್ಯಥೆ ಪಡೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಅನೇಕರಿಗೆ ಬದುಕು ಸಾಗಿಸಲು ಕಷ್ಟವಾಗಿದೆ. ಅದರಂತೆ ಕಳೆದ ಹಲವು ವರ್ಷಗಳಿಂದ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಶೂ ರಿಪೇರಿ ಮಾಡುವ ಆರ್​ ಭಾಸ್ಕರನ್​​ ಕೂಡ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದರು. ಇವರ ಕಷ್ಟವನ್ನು ಅರಿತು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​​ ಅವರ ನೆರವಿಗೆ ಧಾವಿಸಿದ್ದಾರೆ.

  ಲಾಕ್​ಡೌನ್​ನಿಂದಾಗಿ ಐಪಿಎಲ್​ ಪಂದ್ಯಾಟಗಳು ಮುಂದಕ್ಕೆ ಹೋಗಿವೆ. ಐಪಿಎಲ್​ ಪಂದ್ಯಾಗಳು ನಡೆಯುವ ಸಮಯದಲ್ಲಿ ಸಣ್ಣ ಉದ್ಯಮದಾರರು, ವ್ಯಾಪಾರಿಗಳ ವಹಿವಾಟುಗಳು ಚೆನ್ನಾಗಿ ನಡೆಯುತ್ತಿತ್ತು. ಆದರೀಗ ಲಾಕ್​ಡೌನ್​ನಿಂದಾಗಿ ಅವರೆಲ್ಲರ ಬದುಕು ಸಂಕಷ್ಟದಲ್ಲಿದೆ. ಅದರಂತೆ ಕಳೆದ 12 ವರ್ಷಗಳಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಶೂ ರಿಪೇರಿ ಮಾಡುತ್ತಿದ್ದ ಭಾಸ್ಕರನ್​ಗೂ ಲಾಕ್​ಡೌನ್​ ಎಫೆಕ್ಟ್​ ತಟ್ಟಿದೆ. ಇದರಿಂದ ಅವರ ಜೀವನ ಸಂಕಷ್ಟದಲ್ಲಿ ಸಿಲುಕಿ ಕೊಂಡಿತ್ತು. ಈ ವಿಚಾರ ತಿಳಿದಂತೆ ಇರ್ಫಾನ್ ಪಠಾಣ್​ 25 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ.

     ಇನ್ನು ಇರ್ಫಾನ್​ ಪಠಾಣ್​ ಮಾಡಿದ ಸಹಾಯಕ್ಕೆ ಭಾರತೀಯ ಕ್ರಿಕೆಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಷ್ಟದಲ್ಲಿದ್ದ ಭಾಸ್ಕರನ್​ ಅವರ ಕಷ್ಟಕ್ಕೆ ಮಿಡಿದ ಪಠಾಣ್​ಗೆ ಧನ್ಯವಾದ ಹೇಳಿದ್ದಾರೆ. ಟೀಂ ಇಂಡಿಯಾದ ಆಟಗಾರ ದಿನೇಶ್​ ಕಾರ್ತಿಕ್​ ಇರ್ಫಾನ್​ ಪಠಾಣ್​ ಸಹಾಯವನ್ನು ಕೊಂಡಾಡಿದ್ದಾರೆ.
  First published: