ವಿದೇಶಿ ಲೀಗ್​ನತ್ತ ಭಾರತದ ಆಲ್​ರೌಂಡರ್: ಇತಿಹಾಸ ಬರೆಯಲಿದ್ದಾರಾ ಇರ್ಫಾನ್ ಪಠಾಣ್

ಭಾರತದ ಪರ ಟೆಸ್ಟ್​ನಲ್ಲಿ 100ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಇರ್ಫಾನ್ ಪಠಾಣ್, 2012ರ ಬಳಿಕ ಟಿ20 ಟೀಂ ಇಂಡಿಯಾ ತಂಡವನ್ನು ಪ್ರತಿನಿಧಿಸಿಲ್ಲ.

zahir | news18
Updated:May 17, 2019, 7:45 PM IST
ವಿದೇಶಿ ಲೀಗ್​ನತ್ತ ಭಾರತದ ಆಲ್​ರೌಂಡರ್: ಇತಿಹಾಸ ಬರೆಯಲಿದ್ದಾರಾ ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್
zahir | news18
Updated: May 17, 2019, 7:45 PM IST
ಟೀ ಇಂಡಿಯಾದ ಅನುಭವಿ ಆಲ್​ರೌಂಡರ್​ ಇರ್ಫಾನ್ ಪಠಾಣ್ ಹೊಸ ಇತಿಹಾಸ ನಿರ್ಮಿಸುವ ಹೆಜ್ಜೆಯಲ್ಲಿದ್ದಾರೆ. ಕೆಲ ವರ್ಷಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ ಮರೆಯಾಗಿರುವ ಇರ್ಫಾನ್ ಮತ್ತೊಮ್ಮೆ ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಈ ಹಿಂದೆ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಆಡುತ್ತಿದ್ದರೂ, ಕಳೆದ ಸೀಸನ್​ನಲ್ಲಿ ಇರ್ಫಾನ್ ಬಿಕರಿಯಾಗದೇ ಉಳಿದಿದ್ದರು. ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿಗೆ ಬರೋಡಾ ವೇಗಿ ಮರಳಿದ್ದು, ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (CPL) ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈಗಾಗಲೇ ಸಿಪಿಎಲ್​ ಆಡಲು 536 ಮಂದಿ ಆಟಗಾರರು ಅರ್ಜಿ ಸಲ್ಲಿಸಿದ್ದು, ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಇರ್ಫಾನ್ ಪಠಾಣ್ ಎಂಬುದು ವಿಶೇಷ.​

ಒಂದು ವೇಳೆ ಪಠಾಣ್​ರನ್ನು ಯಾವುದಾದರೂ ತಂಡ ಖರೀದಿಸಿದರೆ ವಿದೇಶೀ ಲೀಗ್​ನಲ್ಲಿ ಹರಾಜಾದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು ಇರ್ಫಾನ್ ಬರೆಯಲಿದ್ದಾರೆ. ಐಪಿಎಲ್ ಹೊರತಾಗಿ ಭಾರತೀಯ ಆಟಗಾರರು ಇತರೆ ಯಾವುದೇ ಲೀಗ್​ನಲ್ಲಿ ಆಡಲು ಬಿಸಿಸಿಐ ನಿರ್ಬಂಧ ವಿಧಿಸಿದೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಎನ್​ಒಸಿ ಪಡೆದರೆ ಇರ್ಫಾನ್ ಸಿಪಿಎಲ್​ನಲ್ಲಿ ಭಾಗವಹಿಸಬಹುದಾಗಿದೆ.​

ಭಾರತದ ಪರ ಟೆಸ್ಟ್​ನಲ್ಲಿ 100ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಇರ್ಫಾನ್ ಪಠಾಣ್, 2012ರ ಬಳಿಕ ಟಿ20 ಟೀಂ ಇಂಡಿಯಾ ತಂಡವನ್ನು ಪ್ರತಿನಿಧಿಸಿಲ್ಲ. ಐಪಿಎಲ್​ನಲ್ಲೂ ಸತತ ವೈಫಲ್ಯ ಹೊಂದಿದ್ದ ಇರ್ಫಾನ್ ಆಡಿದ್ದಕ್ಕಿಂತ ಬೆಂಚು ಕಾದದ್ದೇ ಹೆಚ್ಚು. 2016ರಲ್ಲಿ ಗುಜರಾತ್‌ ಲಯನ್ಸ್‌ ತಂಡವನ್ನು ಪ್ರತಿನಿಧಿಸಿ 4 ಪಂದ್ಯಗಳನ್ನು ಆಡಿದ್ದರು. 2017ರ ಆವೃತ್ತಿಯಲ್ಲಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್​ ಪರವಾಗಿ ಕಣಕ್ಕಿಳಿದರೂ ಆಡುವ ಅವಕಾಶ ಒದಗಿದ್ದು ಒಂದು ಪಂದ್ಯದಲ್ಲಿ ಮಾತ್ರ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'


ಹೀಗಾಗಿ ಐಪಿಎಲ್​ನಲ್ಲಿ ಇರ್ಫಾನ್ ಪಠಾಣ್ ಕೆರಿಯರ್ ಅಂತ್ಯವಾಗಿದೆ ಎಂದೇ ವಿಶ್ಲೇಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದೇಶಿ ಲೀಗ್​ನತ್ತ ಮುಖ ಮಾಡಲು ಭಾರತದ ಆಲ್​ರೌಂಡರ್ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ. ಮೇ-22 ರಂದು ಸಿಪಿಎಲ್​ ತಂಡಗಳನ್ನು ಪ್ರಕಟಿಸಲಾಗುತ್ತಿದ್ದು, ಇದರಲ್ಲಿ ಇರ್ಫಾನ್ ಪಠಾಣ್ ಹೆಸರಿದ್ದರೆ, ವಿದೇಶಿ ಲೀಗ್ ಆಡುವ ಮೊದಲ ಭಾರತೀಯ ಕ್ರಿಕೆಟಿಗನಾಗಿ ಎಡಗೈ ವೇಗಿ ದಾಖಲೆ ಬರೆಯಲಿದ್ದಾರೆ.


ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿಯ 'ರಹಸ್ಯ' ವಿಡಿಯೋ ವೈರಲ್; ರಿಷಬ್​ ಪಂತ್ ಹೀಗಾ ಮಾಡೋದು?

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ