ಲಂಡನ್ನ ಲಾರ್ಡ್ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕೊನೆಗೂ 143 ರನ್ಗಳ ಅಂತರದಿಂದ ಗೆದ್ದು ಬೀಗಿದೆ. ಇತ್ತ ಚೊಚ್ಚಲ ಟೆಸ್ಟ್ ಗೆಲ್ಲುವ ಐರ್ಲೆಂಡ್ ಕನಸು ಕನಸಾಗಿಯೇ ಉಳಿದಿದೆ.
ಇಂಗ್ಲೆಂಡ್ 2ನೇ ಇನ್ನಿಂಗ್ಸ್ನಲ್ಲಿ 303 ರನ್ಗಳಿಗೆ ಆಲೌಟ್ ಆಗುವ ಮೂಲಕ ಐರ್ಲೆಂಡ್ಗೆ ಗೆಲ್ಲಲು 182 ರನ್ಗಳ ಟಾರ್ಗೆಟ್ ನೀಡಿತು. ಈ ಸುಲಭ ಗುರಿ ಬೆನ್ನಟ್ಟಿದ ಐರ್ಲೆಂಡ್ ಕ್ರಿಸ್ ವೋಕ್ಸ್ ಹಾಗೂ ಸ್ಟುವರ್ಟ್ ಬ್ರಾಡ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋಯಿತು.
15.4 ಓವರ್ಗಳಲ್ಲಿ ಕೇವಲ 38 ರನ್ಗೆ ಐರ್ಲೆಂಡ್ ಸರ್ವಪತನ ಕಂಡಿತು. ತಂಡದ ಪರ ಜೇಮ್ಸ್ ಮೆಕ್ಲಮ್ 11 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟ್ಸ್ಮನ್ಗಳ ಸ್ಕೋರ್ 5ರ ಗಡಿ ದಾಟಲಿಲ್ಲ. ಪರಿಣಾಮ ಇಂಗ್ಲೆಂಡ್ ಭರ್ಜರಿ ಜಯಭೇರಿ ಬಾರಿಸಿತು. ವೋಕ್ಸ್ 6 ವಿಕೆಟ್ ಕಿತ್ತರೆ, ಬ್ರಾಡ್ 4 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ನಲ್ಲೇ ಆಂಗ್ಲರನ್ನು ಕೇವಲ 85 ರನ್ಗೆ ಆಲೌಟ್ ಮಾಡಿ ಇನ್ನಿಂಗ್ಸ್ ಆರಂಭಿಸಿದ ಐರ್ಲೆಂಡ್ 207 ರನ್ಗೆ ಸರ್ವಪತನ ಕಂಡಿತು. 122 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ ಕಣಕ್ಕಿಳಿದ ರೂಟ್ ಪಡೆ ಪ್ರತಿಷ್ಠೆಗೆ ತಕ್ಕಂತೆ ಆಡಲಿಲ್ಲ.
ರನ್ ಮೆಷಿನ್ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರೋಹಿತ್ ಶರ್ಮಾ!
ಜಾಕ್ ಲೀಚ್ 92 ಹಾಗೂ ಜೇಸನ್ ರಾಯ್ 72 ರನ್ ಬಾರಿಸಿದ್ದು ಬಿಟ್ಟರೆ ಉಳಿದವರು ಮತ್ತೆ ವೈಫಲ್ಯ ಕಂಡರು. ಪರಿಣಾಮ 77.5 ಓವರ್ಗಳಲ್ಲಿ 303 ರನ್ಗೆ ಆಲೌಟ್ ಆಗಿದೆ. ಐರ್ಲೆಂಡ್ ಪರ ಮಾರ್ಕ್ ಅದಿರ್ ಹಾಗೂ ಸ್ಟುವರ್ಟ್ ಥಾಮ್ಸನ್ 3 ವಿಕೆಟ್ ಕಿತ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ