HOME » NEWS » Sports » CRICKET IRAT KOHLI SEEKS BLESSINGS FROM 87 YEAR OLD FAN CHARULATA PATEL

Virat Kohli: ವಿರಾಟ್ ಪ್ರದರ್ಶನ ನೀಡದಿದ್ದರೂ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಕೊಹ್ಲಿ!

ICC World Cup 2019: ಕೊಹ್ಲಿ ಹಂಚಿಕೊಂಡಿರುವ ಈ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಮನ ಗೆದ್ದಿದೆ. ಭಾರತದವರು ಮಾತ್ರವಲ್ಲದೆ ಬೇರೆ ಬೇರೆ ದೇಶಗಳ ಅಭಿಮಾನಿಗಳು ಕೊಹ್ಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rajesh Duggumane | news18
Updated:July 3, 2019, 9:57 AM IST
Virat Kohli: ವಿರಾಟ್ ಪ್ರದರ್ಶನ ನೀಡದಿದ್ದರೂ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಕೊಹ್ಲಿ!
ಅಜ್ಜಿಯ ಆಶೀರ್ವಾದ ಪಡೆದ ವಿರಾಟ್​
  • News18
  • Last Updated: July 3, 2019, 9:57 AM IST
  • Share this:
ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಭಾರತ ಏಳನೇ ಬಾರಿಗೆ ಸೆಮೀಸ್​ ತಲುಪಿದಂತಾಗಿದೆ. ನಿನ್ನೆಯ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಉತ್ತಮವಾಗಿ ಬ್ಯಾಟ್​ ಬೀಸಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ, ಅವರು ಹಂಚಿಕೊಂಡ ಫೋಟೋ ಎಲ್ಲರ ಮನ ಗೆದ್ದಿದೆ.

ಚಾರುಲತಾ ಪಟೇಲ್​ ಹೆಸರಿನ 87 ವರ್ಷದ ವೃದ್ಧೆ ಭಾರತ-ಬಾಂಗ್ಲಾ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಭಾರತದ ಕ್ರಿಕೆಟ್​ ತಂಡ ಸಿಕ್ಸ್, ಬೌಂಡರಿ ಬಾರಿಸಿದಾಗ ಈ ವೃದ್ಧೆ ಅದನ್ನು ಸಂಭ್ರಮಿಸುತ್ತಿದ್ದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಇದು ಭಾರತ ಕ್ರಿಕೆಟ್​ ತಂಡದ ಗಮನವನ್ನೂ ಸೆಳೆದಿದೆ.

ಚಾರುಲತಾ ಪಟೇಲ್ ಜೊತೆ ವಿರಾಟ್
ಚಾರುಲತಾ ಪಟೇಲ್ ಜೊತೆ ವಿರಾಟ್


ಪಂದ್ಯ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಚಾರುಲತಾ ಬಳಿ ತೆರಳಿ ಅವರನ್ನು ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲ ಅವರ ಬಳಿ ಆಶೀರ್ವಾದ ಕೂಡ ಪಡೆದಿದ್ದಾರೆ. ಈ ಫೋಟೋವನ್ನು ವಿರಾಟ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಆಟಕ್ಕೆ ಕುಣಿದು ಕುಪ್ಪಳಿಸಿದ ಅಜ್ಜಿ; ವಿಡಿಯೋ ವೈರಲ್​​



“ಇಷ್ಟೊಂದು ಪ್ರೀತಿ ಹಾಗೂ ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಅದರಲ್ಲೂ ಚಾರುಲತಾ ಪಟೇಲ್​ ಅವರಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸುತ್ತೇನೆ. ಅವರಿಗೆ 87 ವರ್ಷ ವಯಸ್ಸು. ಇಂಥ ಅಭಿಮಾನಿಯನ್ನು ನಾನು ಹಿಂದೆ ಎಂದಿಗೂ ನೋಡಿಲ್ಲ. ಮುಂದಿನ ಪಂದ್ಯಕ್ಕೆ ಅವರ ಆಶೀರ್ವಾದ ಪಡೆದಿದ್ದೇನೆ,” ಎಂದು ಕೊಹ್ಲಿ ಟ್ವೀಟ್​ ಮಾಡಿದ್ದಾರೆ.



ವಿಶ್ವಕಪ್​ ಮಂಡಳಿ ಕೂಡ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಮನ ಗೆದ್ದಿದೆ. ಭಾರತದವರು ಮಾತ್ರವಲ್ಲದೆ ಬೇರೆ ಬೇರೆ ದೇಶಗಳ ಅಭಿಮಾನಿಗಳು ಕೊಹ್ಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ; ಇಲ್ಲಿದೆ ಪಂದ್ಯದ ಹೈಲೈಟ್ಸ್​​

First published: July 3, 2019, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories