Earthquake- ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಪಂದ್ಯಕ್ಕೆ ಮುನ್ನ ಅರಬ್ ನಾಡಲ್ಲಿ ಪ್ರಬಲ ಭೂಕಂಪ

T20 World Cup: ಇರಾನ್​ನಲ್ಲಿ ಇಂದು ಸಂಜೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ದುಬೈ ಮತ್ತಿತರ ಪ್ರದೇಶಗಳಲ್ಲೂ ಭೂಮಿ ಕಂಪಿಸಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುನ್ನ ಈ ಘಟನೆ ನಡೆದಿದೆ.

ಭೂಕಂಪದ ಸಾಂದರ್ಭಿಕ ಚಿತ್ರ

ಭೂಕಂಪದ ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ದುಬೈ, ನ. 14: ಇಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ (T20 World Cup 2021 Final Match) ಪಂದ್ಯಕ್ಕೆ ಮುನ್ನ ಅರಬ್ ನಾಡಿನ ಹಲವೆಡೆ ಭೂಮಿ ಪ್ರಬಲವಾಗಿ ಕಂಪಿಸಿರುವುದು ವರದಿಯಾಗಿದೆ. ಇರಾನ್ ದೇಶದ ದಕ್ಷಿಣ ಭಾಗದಲ್ಲಿ ಭಾನುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇರಾನ್​ನ ಹಾರ್ಮೊಜಗನ್ ಪ್ರಾಂತ್ಯದ ಬಂದರ್ ಅಬ್ಬಾಸ್ ನಗರದಿಂದ (Bandar Abbas city in Hormozgan Province of Iran) 47 ಕಿಮೀ ದೂರದಲ್ಲಿ ಹಾಗೂ 10 ಕಿಮೀ ಆಳದಲ್ಲಿ ಈ ಭೂಕಂಪವಾಗಿದೆ. ಮೊದಲಿಗೆ 6.1 ತೀವ್ರತೆ ಎಂದು ದಾಖಲಾಗಿತ್ತು. ಬಳಿಕ 6.5 ತೀವ್ರತೆಯ ಭೂಕಂಪ ಎಂಬ ವರದಿಗಳು ಬಂದಿವೆ. ಇಷ್ಟು ತೀವ್ರತೆಯ ಭೂಕಂಪವನ್ನು ಪ್ರಬಲ ಭೂಕಂಪ ಎಂದೇ ಪರಿಗಣಿಸಲಾಗುತ್ತದೆ.

  ಇರಾನ್​ನಲ್ಲಿ ಭೂಕಂಪ ಸಂಭವಿಸಿದರೂ ಸುತ್ತಲಿನ ಪ್ರದೇಶಗಳಲ್ಲಿ ಭೂಮಿ ನಡುಗಿದೆ. ದುಬೈನ ವಿವಿಧ ಪ್ರದೇಶಗಳಾದ ಜುಮೇರಾ ಲೇಕ್ ಟವರ್ಸ್, ನಹಡಾ, ಡೇರಾ, ಬರ್ಶಾ, ದುಬೈ ಇನ್​ವೆಸ್ಟ್​ಮೆಂಟ್ ಪಾರ್ಕ್, ಡಿಸ್ಕರಿ ಗಾರ್ಡನ್ಸ್ ಮೊದಲಾದೆಡೆ ಕೆಲ ನಿಮಿಷಗಳವರೆಗೆ ಭೂಮಿ ಕಂಪಸಿದ ಅನುಭವ ಆಯಿತು ಎಂದು ದುಬೈನ ನಿವಾಸಿಗಳು ತಿಳಿಸಿದ್ದಾರೆ. ಯುಎಇಯ ಇತರ ಪ್ರಾಂತ್ಯಗಳಾದ ಶಾರ್ಜಾ, ಅಬುಧಾಬಿಯಲ್ಲೂ ಭೂಮಿ ಕಂಪಿಸಿರುವುದು ತಿಳಿದುಬಂದಿದೆ.

  ಭೂಕಂಪವಾದರೂ ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ನಿಗದಿಯಂತೆ ನಡೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಯಾವ ಸ್ಪಷ್ಟನೆಯ ಹೇಳಿಕೆಯೂ ಬರಲಿಲ್ಲ.

  ಇದನ್ನೂ ಓದಿ: Maxwell-Vini Raman: ಗ್ಲೆನ್ ಮ್ಯಾಕ್ಸ್​ವೆಲ್ ಮದುವೆಯಾಗುತ್ತಿರುವ ವಿನಿ ರಾಮನ್ ಯಾರು? ಇಲ್ಲಿದೆ ಮಾಹಿತಿ

  ಭೂಕಂಪಕ್ಕೆ ಒಬ್ಬ ಸಾವು:

  ಇರಾನ್​ನಲ್ಲಿ ಸಂಭವಿಸಿದ ಈ ಭೂಕಂಪದಿಂದ ಪರಿಣಾಮ ಉಂಟಾಗಿರುವುದು ಯುಎಇಯಲ್ಲಿ ಅಷ್ಟೇ ಅಲ್ಲ ಪಾಕಿಸ್ತಾನ್ ದೇಶದವರೆಗೂ ಭೂಮಿಯಲ್ಲಿ ಕಂಪನದ ಅನುಭವಗಳು ಆಗಿರುವುದು ವರದಿಯಾಗಿದೆ. ಬಹ್ರೇನ್, ಸೌದಿ ಅರೇಬಿಯಾ, ಓಮನ್, ಕತಾರ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದಲ್ಲಿ ಕಂಪನಗಳಾಗಿವೆ.

  ಇದನ್ನೂ ಓದಿ: Team India Earning- ಟಿ20 ವಿಶ್ವಕಪ್​ನಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಬಂದ ಹಣ ಇಷ್ಟು

  ಇರಾನ್​ನ ಬಂದರ್ ಅಬ್ಬಾಸ್ ನಗರದಲ್ಲಿ ಭೂಕಂಪದ ಕಾರಣದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆಂದು ಇರಾನ್​ನ ಸ್ಥಳೀಯ ಟಿವಿಗಳ ವರದಿಗಳು ಹೇಳುತ್ತಿವೆ. ವಿದ್ಯುತ್ ಕಂಪ ಬಿದ್ದು ಆ ವ್ಯಕ್ತಿ ಸತ್ತಿರುವುದು ತಿಳಿದುಬಂದಿದೆ.
  Published by:Vijayasarthy SN
  First published: