IPL 2021: ಮತ್ತೆ ಆರಂಭವಾಗಲಿದೆ ಐಪಿಎಲ್ ಧಮಾಕ; ಉಳಿದ ಪಂದ್ಯಗಳು ದುಬೈಗೆ ಶಿಫ್ಟ್​, ಟೂರ್ನಿ ಆರಂಭ ಯಾವಾಗ ಗೊತ್ತಾ?

ಸರಣಿಯಲ್ಲಿ ಒಟ್ಟು 31 ಪಂದ್ಯಗಳು ಬಾಕಿ ಉಳಿದಿದ್ದು, ಎಲ್ಲಾ ಪಂದ್ಯಗಳು ವಿಶ್ವಕಪ್​ಗೆ ಮುಂಚಿತವಾಗಿ, ದುಬೈನಲ್ಲೇ ಜರುಗಲಿದೆ. ಇಲ್ಲಿನ ಬಯೋ ಬಬಲ್ ಸಹ ಸಾಕಷ್ಟು ಸುರಕ್ಷತೆಯಿಂದ ಕೂಡಿರುತ್ತದೆ. ಹಾಗಾಗಿ ವಿದೇಶಿ ಆಟಗಾರರು ಈ ಟೂರ್ನಿಗೆ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.

IPL 2021

IPL 2021

 • Share this:
  ದೆಹಲಿ (ಮೇ 25); ಕೊರೋನಾ ಎರಡನೇ ಅಲೆ ಭಾರತದಲ್ಲಿ ವ್ಯಾಪಕವಾಗಿ ಹರಡಿದ್ದ ಕಾರಣ ಅರ್ಧಕ್ಕೆ ಸ್ಥಗಿತಗೊಂಡು, ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಐಪಿಎಲ್​-14ನೇ ಆವೃತ್ತಿ ಕೊನೆಗೂ ಪುನಾರಂಭಗೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ. ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಸೆಪ್ಟೆಂಬರ್ 18 ಅಥವಾ 19ರಿಂದ ದುಬೈನಲ್ಲಿ ಪಂದ್ಯಗಳು ಜರುಗಲಿವೆ. ಮೂರು ವಾರಗಳ ಕಾಲ ನಡೆಯಲಿರುವ ಟೂರ್ನಿಯ ಸುಮಾರು 10 ದಿನ ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ನಡೆಸುವ ಮೂಲಕ ಟೂರ್ನಿಯನ್ನು ಆದಷ್ಟು ಬೇಗ ಮುಗಿಸುವುದು ಬಿಸಿಸಿಐ ಯೋಜನೆಯಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿ ಸಹ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆ ಕೊನೆಗೊಂಡಂತಾಗಿದೆ.

  ಈ ಸರಣಿಯ ಫೈನಲ್ ಪಂದ್ಯವನ್ನು ಅಕ್ಟೋಬರ್ 9 ಅಥವಾ 10ರಂದು ಆಡಿಸಲು ಬಿಸಿಸಿಐ ನಿರ್ಧರಿಸಿದೆ ಎಂಬುದು ಕೂಡಾ ಇದೇ ಸಂದರ್ಭದಲ್ಲಿ ಬಹಿರಂಗವಾಗಿದೆ. ಈ ಬಗ್ಗೆ ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳೊಂದಿಗೆ ನಿರ್ಧರಿಸಿದ್ದು ಬಾಕಿ ಉಳಿದಿರುವ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 18-20ರ ಆಸುಪಾಸಿನಲ್ಲಿ ಆರಂಭಿಸುವುದಾಗಿ ಮಾಹಿತಿ ರವಾನಿಸಿದೆ.

  ಸರಣಿಯಲ್ಲಿ ಒಟ್ಟು 31 ಪಂದ್ಯಗಳು ಬಾಕಿ ಉಳಿದಿದ್ದು, ಎಲ್ಲಾ ಪಂದ್ಯಗಳು ವಿಶ್ವಕಪ್​ಗೆ ಮುಂಚಿತವಾಗಿ, ದುಬೈನಲ್ಲೇ ಜರುಗಲಿದೆ. ಇಲ್ಲಿನ ಬಯೋ ಬಬಲ್ ಸಹ ಸಾಕಷ್ಟು ಸುರಕ್ಷತೆಯಿಂದ ಕೂಡಿರುತ್ತದೆ. ಹಾಗಾಗಿ ವಿದೇಶಿ ಆಟಗಾರರು ಈ ಟೂರ್ನಿಗೆ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.

  ಇದನ್ನೂ ಓದಿ: Robin Uthappa: ರಾಬಿನ್ ಉತ್ತಪ್ಪ ಬ್ಯಾಟಿಂಗ್ ವೈಖರಿಯೇ ವೃತ್ತಿಜೀವನಕ್ಕೆ ಮುಳುವಾಯಿತೇ..? ಅವರ ಮಾತುಗಳಲ್ಲೇ ಕೇಳಿ..!

  ಈ ನಡುವೆ ಭಾರತ ಕ್ರಿಕೆಟ್ ತಂಡ ಸಾಕಷ್ಟು ವಿವಾದಗಳ ನಡುವೆಯೂ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಗ್ಲೆಂಡ್​ಗೆ ಪ್ರವಾಸ ಬೆಳಸಿದೆ. ಅಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ತಂಡ ಕಣಕ್ಕೆ ಇಳಿಯಲಿದೆ. ಈ ಟೂರ್ನಿ ಸೆಪ್ಟೆಂಬರ್ 14ರಂದು ಅಂತ್ಯಗೊಳ್ಳಲಿದ್ದು ಅಲ್ಲಿಂದ ಭಾರತೀಯ ಆಟಗಾರರೆಲ್ಲರೂ ಅತ್ಯಂತ ಸುರಕ್ಷಿತ ರೀತಿಯಲ್ಲಿ ದುಬೈ ತಲುಪಲಿದ್ದಾರೆ. ಹಾಗೆಯೇ ಉಳಿದ ಆಟಗಾರರನ್ನೂ ಕರೆತರಲಾಗುವುದು ಎಂದು ಆಯೋಜಕರು ಹೇಳಿದ್ದಾರೆ.

  ಒಟ್ಟಾರೆ ಭಾರತ ಕ್ರಿಕೆಟ್​ ಪ್ರಿಯರ ನೆಚ್ಚಿನ ಐಪಿಎಲ್ ಮತ್ತೆ ಆಯೋಜನೆಗೊಳ್ಳುತ್ತಿರುವುದು ಸಂತೋಷದ ವಿಚಾರವೇ. ಆದರೆ, ನಾನಾ ಕಾರಣಗಳಿಂದಾಗಿ ಐಪಿಎಲ್​​ ವಿದೇಶದಲ್ಲಿ ಆಯೋಜನೆಗೊಳ್ಳುತ್ತಿರುವುದು ಇದು ಮೂರನೇ ಬಾರಿ. ಅಲ್ಲದೆ, ಎಲ್ಲಾ ಆಟಗಾರರು ಕೊರೋನಾ ನಡುವೆಯೂ ಸುರಕ್ಷಿತವಾಗಿರಲಿ ಎಂಬುದೇ ಎಲ್ಲರ ಆಶಯ.
  Published by:MAshok Kumar
  First published: