HOME » NEWS » Sports » CRICKET IPL RCB VS DC MATCH IN BENGALURU IYER STARS AS CAPITALS REGISTER VICTORY

RCB vs DC: ಮೂರಕ್ಕೇರಿದ ಡೆಲ್ಲಿ ಜಯ: ಆರಕ್ಕೇರಿದ ಆರ್​ಸಿಬಿ ಸೋಲು

ಆರ್​ಸಿಬಿ ಬ್ಯಾಟ್ಸ್​ಮನ್​​ಗಳು ಪೆವಿಲಿಯರ್ ಹಾದಿ ಹಿಡಿಯುತ್ತಿದ್ದರೆ ಇತ್ತ ಕೊಹ್ಲಿ ಎಚ್ಚರಿಕೆಯಿಂದ ಆಟ ಪ್ರದರ್ಶಿಸುತ್ತಿದ್ದರು. 4ನೇ ವಿಕೆಟ್​ಗೆ ಕೊಹ್ಲಿ ಜೊತೆಯಾದ ಮೊಯೀನ್ ಅಲಿ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು.

zahir | news18
Updated:April 7, 2019, 8:09 PM IST
RCB vs DC: ಮೂರಕ್ಕೇರಿದ ಡೆಲ್ಲಿ ಜಯ: ಆರಕ್ಕೇರಿದ ಆರ್​ಸಿಬಿ ಸೋಲು
ಕೊಹ್ಲಿ
  • News18
  • Last Updated: April 7, 2019, 8:09 PM IST
  • Share this:
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿದೆ. ಡೆಲ್ಲಿ ನಾಯಕ ಶ್ರೇಯಸ್​ ಅಯ್ಯರ್​ ಅವರ ಸಮಯೋಚಿತ ಆಟದಿಂದ  ಕೊಹ್ಲಿ ಪಡೆ ನೀಡಿದ 150 ರನ್​ಗಳ ಸಾಧಾರಣ ಗುರಿಯನ್ನು ಡೆಲ್ಲಿ ತಂಡ ಸುಲಭವಾಗಿ ಮುಟ್ಟಿತು. ಈ ಮುಖಾಂತರ ಐಪಿಎಲ್​ 2019ನ 3ನೇ ಜಯದ ನಗೆ ಬೀರುವಲ್ಲಿ ಶ್ರೇಯಸ್ ಪಡೆ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​​ಗೆ ಇಳಿದ ಆರ್​ಸಿಬಿ ಎರಡನೇ ಓವರ್​ನಲ್ಲೇ ಪಾರ್ಥಿವ್ ಪಟೇಲ್(9) ವಿಕೆಟ್ ಕಳೆದುಕೊಂಡಿತು. ತಂಡಕ್ಕೆ ಚೇತರಿಕೆ ನೀಡಲು ಹೊರಟ ಡಿವಿಲಿಯರ್ಸ್​ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ ಬೇಗನೆ ಅಂತ್ಯವಾಯಿತು. ಎಬಿಡಿ ಅಬ್ಬರಿಸದೆ 17 ರನ್​ಗೆ ಬ್ಯಾಟ್ ಕೆಳಗಿಟ್ಟರು. ಇತ್ತ ಸ್ಟೊಯಿನಿಸ್ 15 ರನ್​ಗೆ ನಿರ್ಗಮಿಸಿದರು.

ಹೀಗೆ ಆರ್​ಸಿಬಿ ಪ್ರಮುಖ ಬ್ಯಾಟ್ಸ್​ಮನ್​​ಗಳು ಪೆವಿಲಿಯರ್ ಹಾದಿ ಹಿಡಿಯುತ್ತಿದ್ದರೆ ಇತ್ತ ಕೊಹ್ಲಿ ಎಚ್ಚರಿಕೆಯಿಂದ ಆಟ ಪ್ರದರ್ಶಿಸಿದ್ದರು. 4ನೇ ವಿಕೆಟ್​ಗೆ ಕೊಹ್ಲಿ ಜೊತೆಯಾದ ಮೊಯೀನ್ ಅಲಿ ತಂಡದ ಮೊತ್ತವನ್ನು ಮೂರಂಕಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಚೆನ್ನಾಗಿಯೆ ಆಡುತ್ತಿದ್ದ ಅಲಿ ಇನ್ನಿಂಗ್ಸ್​​ 18 ಎಸೆತಗಳಲ್ಲಿ 3 ಸಿಕ್ಸರ್ ಜೊತೆ 32 ರನ್ ಗಳಿಸಿರುವಾಗ ಅಂತ್ಯವಾಯಿತು. ಇದರ ಬೆನ್ನಲ್ಲೆ 41 ರನ್ ಗಳಿಸಿದ್ದ ಕೊಹ್ಲಿ ಕೂಡ ನಿರ್ಗಮಿಸಿದ ಆಘಾತ ನೀಡಿದರು.

ಹೀಗೆ ಅಂತಿಮ ಹಂತದಲ್ಲಿ ರಬಾಡ ಮ್ಯಾಜಿಕ್ ಬಾಲ್​ಗೆ ಸತತವಾಗಿ ವಿಕೆಟ್ ಕಳೆದುಕೊಂಡ ಆರ್​ಸಿಬಿ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಲಷ್ಟೆ ಶಕ್ತವಾಯಿತು. ರಬಾಡ 4 ಓವರ್​ಗೆ ಕೇವಲ 21 ರನ್ ನೀಡಿ 4 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಉಳಿದಂತೆ ಕ್ರಿಸ್ ಮೊರೀಸ್ 2, ಅಕ್ಷರ್ ಪಟೇಲ್ ಹಾಗೂ ಸಂದೀಪ್ ಲಮಿಚಾನೆ ತಲಾ 1 ವಿಕೆಟ್ ಪಡೆದರು.

ಸುಲಭ ಗುರಿಯನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆರ್​ಸಿಬಿ ಮೊದಲ ಓವರ್​ನಲ್ಲಿ ಆಘಾತ ನೀಡಿದ್ದರು. 3ನೇ ಎಸೆತದಲ್ಲಿ ಶಿಖರ್​ ಧವನ್(0) ಪೆವಿಲಿಯನ್​ಗೆ ಕಳುಹಿಸುವಲ್ಲಿ ಟಿಮ್ ಸೌಥಿ ಯಶಸ್ವಿಯಾದರು. ಇದೇ ಓವರ್​ನಲ್ಲಿ ಪಾರ್ಥೀವ್ ಪಟೇಲ್ ಕೈ ಚೆಲ್ಲಿದ ಶ್ರೇಯಸ್ ಕ್ಯಾಚ್ ಆರ್​ಸಿಬಿಗೆ ಮುಳುವಾಯಿತು.  2ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿದ ಶ್ರೇಯಸ್ ಅಯ್ಯರ್ ಹಾಗೂ ಯುವ ದಾಂಡಿಗ ಪೃಥ್ವಿ ಶಾ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು.

ಇದೇ ವೇಳೆ 28 ರನ್​ಗಳಿಸಿದ್ದ ಪೃಥ್ವಿ ಶಾ ನೇಗಿಯ ಎಸೆತಕ್ಕೆ ಸಿಕ್ಸರ್ ಎತ್ತುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್​ಗಳಿದ ಇನ್​ಗ್ರಾಂ(22) ಸ್ಪೋಟಕ ಆಟಕ್ಕೆ ಕೈ ಹಾಕಿದ್ದರು. ಅದರಂತೆ ಒಂದಷ್ಟು ರನ್​ಗಳಿಸಿದ ಇನ್​ಗ್ರಾಂ ಮೊಯೀನ್​ ಅಲಿ ಸ್ಪಿನ್ ಮೋಡಿಗೆ ಬಲಿಯಾಗಬೇಕಾಯಿತು. 108 ಕ್ಕೆ 3 ವಿಕೆಟ್​ ಕಳೆದುಕೊಂಡ ಡೆಲ್ಲಿ ತಂಡವು ಅಷ್ಟರಲ್ಲೇ ಜಯದ ಹೊಸ್ತಿಲಲ್ಲಿ ಬಂದು ನಿಂತಿತ್ತು.

ಇನ್ನು ಭರ್ಜರಿಯಾಗಿ ಬ್ಯಾಟ್​ ಬೀಸುತ್ತಾ ತಂಡವನ್ನು ಗೆಲುವಿನತ್ತ ಕೊಂಡೊಯ್ದ ನಾಯಕ ಶ್ರೇಯಸ್​ ಅಯ್ಯರ್ (67) ವಿನಾಕಾರಣ ವಿಕೆಟ್ ಒಪ್ಪಿಸಿ​ ಪೆವಿಲಿಯನ್​ನತ್ತ ಸಾಗಿದರು. ಈ ಸಂದರ್ಭದಲ್ಲಿ ಡೆಲ್ಲಿಗೆ ಗೆಲ್ಲಲು ಕೇವಲ 5 ರನ್​ಗಳು ಮಾತ್ರ ಅವಶ್ಯಕತೆಯಿತ್ತು. ಆದರೆ ನಂತರ ಬಂದ ಕ್ರಿಸ್ ಮೊರಿಸ್ ಸೊನ್ನೆ ಸುತ್ತುವ ಮೂಲಕ ಹೊರ ನಡೆದರೆ, 18 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಿಷಭ್ ಪಂತ್​ ಸಹ ವಿಕೆಟ್​ ಒಪ್ಪಿಸಿ ಆತಂಕ ಮೂಡಿಸಿದರು. ಕೊನೆಯಲ್ಲಿ ಅಕ್ಸರ್ ಪಟೇಲ್ ಬೌಂಡರಿ ಬಾರಿಸುವ ಮೂಲಕ ಡೆಲ್ಲಿಗೆ 4 ವಿಕೆಟ್​ಗಳ ಜಯವನ್ನು ತಂದುಕೊಟ್ಟರು.

ಆರ್​ಸಿಬಿ ಪರ ನವದೀಪ್ ಸೈನಿ 4 ಓವರ್​ನಲ್ಲಿ 2 ವಿಕೆಟ್ ಪಡೆದರೆ, ಉಳಿದ ಬೌಲರ್​ಗಳು ತಲಾ ಒಂದೊಂದು ವಿಕೆಟ್ ಕಬಳಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಉರುಳಿಸಿದ ಕಗಿಸೋ ರಬಾಡ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಸೋಲಿನೊಂದಿಗೆ ಆರ್​ಸಿಬಿ ಐಪಿಎಲ್​2019 ನಲ್ಲಿ ಸತತ ಆರು ಪಂದ್ಯಗಳನ್ನು ಕೈಚೆಲ್ಲಿಕೊಂಡಿದೆ.
First published: April 7, 2019, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories