ಐಪಿಎಲ್ 2022ರ (Indian Premier League) ಆವೃತ್ತಿಯಲ್ಲಿ ಫಾಫ್ ಡು ಪ್ಲೆಸ್ಸಿಸ್ ನಾಯಕತ್ವದಲ್ಲಿ ಆರ್ಸಿಬಿ (Royal Challengers Bangalore) ತಂಡ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಟೂರ್ನಿಯಲ್ಲಿ ಪ್ಲೇ ಆಫ್ ಹಂತದಲ್ಲಿ ಹೊರ ನಡೆದಿದ್ದ ಆರ್ಸಿಬಿ, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಐಪಿಎಲ್ 2023ರ ಆವೃತ್ತಿಗಾಗಿ ಹಿಂದಿನ ಕೋರ್ ಟೀಮ್ಅನ್ನೇ ಉಳಿಸಿಕೊಂಡಿರುವ ಆರ್ಸಿಬಿ ಮ್ಯಾನೇಜ್ಮೆಂಟ್, ಕೇವಲ ಐವರು ಆಟಗಾರರನ್ನು ಮಾತ್ರ ತಂಡದಿಂದ ಕೈಬಿಟ್ಟಿತ್ತು. ಪರಿಣಾಮ 2023ರ ಮಿನಿ ಹರಾಜು ಪ್ರಕ್ರಿಯೆಲ್ಲಿ ಆರ್ಸಿಬಿ ಕೇವಲ 8.75 ಕೋಟಿ ರೂಪಾಯಿ ಮೊತ್ತವನ್ನು ಮಾತ್ರ ಹೊಂದಿದೆ. ಈ ಹಣದೊಂದಿಗೆ ಆರ್ಟಿಬಿ ದೇಶೀಯ ಆಟಗಾರರನ್ನೇ ಖರೀದಿ ಮಾಡಲು ಟಾರ್ಗೆಟ್ ಮಾಡಿದೆಯಂತೆ. ಅದರಲ್ಲೂ ಈ ಮೂವರು ಆರಂಭಿಕ ಆಟಗಾರರ ಮೇಲೆ ಆರ್ಸಿಬಿ ಫ್ರಾಂಚೈಸಿ ಕಣ್ಣಿಟ್ಟಿದೆಯಂತೆ.
ಮಯಾಂಕ್ ಅಗರ್ವಾಲ್
ಬೆಂಗಳೂರು ಲೋಕಲ್ ಪ್ಲೇಯರ್, ಪಂಜಾಬ್ ತಂಡದ ಮಾಜಿ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ರನ್ನು ಖರೀದಿ ಮಾಡಲು ಆರ್ಸಿಬಿ ಆಸಕ್ತಿ ಹೊಂದಿದೆಯಂತೆ. ಮಯಾಂಕ್ರನ್ನು ಖರೀದಿ ಮಾಡುವುದರಿಂದ ತಂಡಕ್ಕೆ ಸ್ಥಳೀಯ ಆಟಗಾರ ತಂಡ ಸೇರಿದಂತಾಗುತ್ತದೆ ಎಂದು ಮ್ಯಾನೇಜ್ಮೆಂಟ್ ಭಾವಿಸುತಿದೆಯಂತೆ.
ವಿಶೇಷ ಎಂದರೇ, ಮಯಾಂಕ್, ಸ್ಪಿನ್ ಬೌಲಿಂಗ್ ವಿರುದ್ಧ ಸಮರ್ಥವಾಗಿ ಬ್ಯಾಟ್ ಮಾಡಬಲ್ಲರು. ಆದರೆ ಮಯಾಂಕ್ ಆರ್ಸಿಬಿ ಬ್ಯಾಟಿಂಗ್ ಅರ್ಡರ್ಗೆ ಹೊಂದಾಣಿಕೆ ಆಗಬೇಕಿದೆ. ಕೊಹ್ಲಿ, ಡುಪ್ಲೆಸಿಸ್, ಅನುಜ್ ರಾವತ್ ಆಟಗಾರರೊಂದಿಗೆ ಆರ್ಸಿಬಿ ಟಾಪ್ ಬ್ಯಾಟಿಂಗ್ ಅರ್ಡರ್ ಬಲಿಷ್ಠವಾಗಿದೆ. ಇಂತಹ ಸಮಯದಲ್ಲಿ ಮಯಾಂಕ್ರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಳ್ಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಆರ್ಸಿಬಿ ತನ್ನ ಬಲಹೀನತೆಯನ್ನು ನಿವಾರಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: IND vs BAN: ಟೀಂ ಇಂಡಿಯಾ ಸೋಲಿಗೆ ಆ ಇಬ್ಬರು ಮಾಡಿದ ತಪ್ಪೇ ಕಾರಣ, ಕಾರ್ತಿಕ್ ಶಾಕಿಂಗ್ ಹೇಳಿಕೆ
ನಿಕೋಲಸ್ ಪೂರನ್
ವೆಸ್ಟ್ ಇಂಡೀಸ್ ತಂಡದ ಆಟಗಾರ ನಿಕೋಲಸ್ ಪೂರನ್ ಅವರನ್ನು ಖರೀದಿ ಮಾಡಲು ಆರ್ಸಿಬಿ ಮುಂದಾಗುವ ಸಾಧ್ಯತೆಗಳು ಹೆಚ್ಚಿದೆ. ಸ್ಪಿನ್ ಬೌಲಿಂಗ್ ವಿರುದ್ಧ ಬಿರುಸಿನ ಆಟ ಪ್ರದರ್ಶಿಸುವ ಪೊರನ್, ಎಡಗೈ ಬ್ಯಾಟರ್ ಆಗಿರೋದು ಇಲ್ಲಿ ಪ್ಲಾಸ್ ಆಗಲಿದೆಯಂತೆ. ಏಕೆಂದರೆ ಟಾಪ್ 5 ಬ್ಯಾಟಿಂಗ್ ಅರ್ಡರ್ನಲ್ಲಿ ಪೊರನ್ರಂತಹ ಕ್ವಾಲಿಟಿ ಬ್ಯಾಟರ್ ಆರ್ಸಿಬಿ ತಂಡದಲ್ಲಿ ಇಲ್ಲದಿರೋದರಿಂದ ಆತನನ್ನು ಖರೀದಿ ಮಾಡಲು ಮುಂದಾಗಬಹುದು.
ಆದರೆ ಆರ್ಸಿಬಿ ಬಳಿ ಇರೋ ಬಜೆಟ್ನಲ್ಲಿ ಪೂರನ್ರನ್ನು ಖರೀದಿ ಮಾಡೋದು ಕಷ್ಟಸಾಧ್ಯ. ಕಳೆದ ವರ್ಷ ಹರಾಜಿನಲ್ಲಿ ಪೂರನ್ 10 ಕೋಟಿ ರೂಪಾಯಿಗೆ ಪಡೆದುಕೊಂಡಿದ್ದರು. ಈ ಬಾರಿ 5 ಕೋಟಿ ರೂಪಾಯಿ ಆದರೂ ಪಡೆದುಕೊಳ್ಳುವ ಅವಕಾಶವಿದೆ. ಅಲ್ಲದೇ ಆರ್ಸಿಬಿ ತಂಡದಲ್ಲಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಡುಪ್ಲೆಸಿಸ್, ಮ್ಯಾಕ್ಸ್ವೆಲ್, ವಾನಿಂದು ಹರಸಂಗ, ಜೋಶ್ ಹೆಜಲ್ವುಡ್ ರೊಂದಿಗೆ ನಾಲ್ಕು ಸ್ಥಾನಗಳು ಬರ್ತಿಯಾಗಿದೆ.
ಇದನ್ನೂ ಓದಿ: IND vs BAN ODI: ಟಾಸ್ ಗೆದ್ದ ಬಾಂಗ್ಲಾದೇಶ, ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಬದಲಾವಣೆ
ಕೈಲ್ ಜೇಮೀಸನ್
ನ್ಯೂಜಿಲೆಂಡ್ ಆಲ್ರೌಂಡರ್ ಕೈಲ್ ಜೇಮೀಸನ್ ಅವರನ್ನು ಮತ್ತೊಮ್ಮೆ ಖರೀದಿ ಪ್ರಯತ್ನವನ್ನು ಆರ್ಸಿಬಿ ಮಾಡಬಹುದು. 2021ರ ಐಪಿಎಲ್ ಹರಾಜು ಪ್ರತಿಕ್ರಿಯೆಯಲ್ಲಿ ಜೇಮೀಸನ್ ಖರೀದಿಗೆ 14 ಕೋಟಿ ರೂಪಾಯಿ ನೀಡಿ ಕೈ ಸುಟ್ಟುಕೊಂಡಿದ್ದ ಆರ್ಸಿಬಿ, ಈ ಬಾರಿ ಕಡಿಮೆ ಮೊತ್ತಕ್ಕೆ ಖರೀದಿ ಮಾಡೋ ಸಾಧ್ಯತೆ ಇದೆ.
ಆರ್ಸಿಬಿ ಟೀಂ ಡೈರೆಕ್ಟರ್ ಮೈಕ್ ಹೆಸ್ಸನ್ ನ್ಯೂಜಿಲೆಂಡ್ ಅವರೇ ಆಗಿರುವುದರಿಂದ, ಆ ದೇಶದ ಆಟಗಾರನ ಖರೀದಿಗೆ ಮನಸ್ಸು ಮಾಡಬಹುದು. ಅಲ್ಲದೇ ಆರ್ಸಿಬಿ ತಂಡದಲ್ಲಿ ಪಂದ್ಯ ಗೆಲ್ಲಿಸಿಕೊಡುವಂತಹ ಆಲ್ರೌಂಡರ್ ಕೊರತೆ ಇದ್ದು, ಆ ಸ್ಥಾನಕ್ಕೆ ಜೇಮೀಸನ್ ಉತ್ತಮ ಎಂದು ಮ್ಯಾನೇಜ್ಮೆಂಟ್ ಭಾವಿಸುತ್ತಿದೆ. ಮುಂಬೈ ತಂಡಕ್ಕೆ ನೀಡಿರೋ ಜೇಸನ್ ಬೆಹ್ರೆನ್ಡಾರ್ಫ್ ಅವರ ಸ್ಥಾನಕ್ಕೆ ಸೂಕ್ತ ಎನ್ನಲಾಗುತ್ತಿದೆ. ಆದರೆ ಟಿ20 ಮಾದರಿ ಕ್ರಿಕೆಟ್ನಲ್ಲಿ ಜೇಮೀಸನ್ಗೆ ಉತ್ತಮ ರೆಕಾರ್ಡ್ ಇಲ್ಲದಿರೋದು ಮೈನಸ್ ಪಾಯಿಂಟ್ ಆಗಿದ್ದು, ಬ್ಯಾಕ್ ಅಪ್ ಆಟಗಾರನಾಗಿ ಆದರು ಜೇಮೀಸನ್ರನ್ನು ಖರೀದಿ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ