ಬೆಂಗಳೂರು (ಅ. 28): ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆದ ಏಕೈಕ ತಂಡ ಮುಂಬೈ ಇಂಡಿಯನ್ಸ್. ಇದಕ್ಕೆ ತಂಡದ ನಾಯಕನಾಗಿ ರೋಹಿತ್ ಶರ್ಮಾ ಕಾಣಿಕೆ ಅಪಾರ. ಈ ಮೂಲಕ ಐಪಿಎಲ್ನ ಯಶಸ್ವಿ ನಾಯಕರ ಪಟ್ಟಿಯಲ್ಲಿ ಹಿಟ್ಮ್ಯಾನ್ ಮೊದಲ ಸ್ಥಾನದಲ್ಲಿ ಕಾಣಸಿಗುತ್ತಾರೆ.
ಎರಡನೇ ಸ್ಥಾನದಲ್ಲಿ ಎಂ ಎಸ್ ಧೋನಿ ನಾಯಕತ್ವದ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವಿದೆ. ರೋಹಿತ್ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಬಳಿಕ ಅದರಲ್ಲು ನಾಯಕನಾದ ಮೇಲೆ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ.
ರೋಹಿತ್ ಮಡದಿ ರಿತಿಕಾ ಸಜ್ದೆ ಕೂಡ ಐಪಿಎಲ್ ನಡೆಯುವ ವೇಳೆ ಮುಂಬೈ ತಂಡಕ್ಕೆ ಬೆಂಬಲ ಸೂಚಿಸಲು ಮೈದಾನದಲ್ಲಿ ಹಾಜರಿರುತ್ತಾರೆ. ಆದರೆ, ರೋಹಿತ್ ಅವರ ಮುದ್ದಿನ ಮಗಳ ಸಪೋರ್ಟ್ ಯಾವ ತಂಡಕ್ಕೆ..?
IND vs BAN: ಟೀಂ ಇಂಡಿಯಾದಲ್ಲಿದ್ದಾರೆ 3 ವಿಕೆಟ್ ಕೀಪರ್ಸ್; ಮೊದಲ ಟಿ-20ಯಲ್ಲಿ ಇಬ್ಬರಿಗೆ ಅವಕಾಶ?
![IPL MI vs CSK: Is Rohit Sharma’s daughter Samaira a CSK fan? The franchise thinks so]()
ರೋಹಿತ್ ಶರ್ಮಾ ಹೆಂಡತಿ ರಿತಿಕಾ ಸಜ್ದೆ ಹಾಗೂ ಮಗಳು ಸಮೈರಾ
ಐಪಿಎಲ್ನಲ್ಲಿ ರೋಹಿತ್ ಅವರ ಮಗಳು ಸಮೈರಾ, ತಂದೆ ನಾಯಕನಾಗಿರುವ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿ ಅಲ್ಲವಂತೆ. ಬದಲಾಗಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ಯಾನ್ ಅಂತೆ. ಈ ರೀತಿ ಹೇಳಿಕೊಂಡಿರುವುದು ಚೆನ್ನೈ ಸೂಪರ್ ಕಿಂಗ್ಸ್.
ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೀಪಾವಳಿ ಹಬ್ಬಕ್ಕೆ ಶುಭಕೋರಿ ಹೆಂಡತಿ ರಿತಿಕಾ ಹಾಗೂ ಮಗಳು ಸಮೈರಾ ಜೊತೆ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರೋಹಿತ್ ಮುದ್ದು ಮಗಳು ಸಮೈರಾ ಹಳದಿ ಬಣ್ಣದ ಉಡುಗೆ ಧರಿಸಿ ಮಿಂಚಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿಗೆ ಶುಭಕೋರಿದ ಟೀಂ ಇಂಡಿಯಾ ಆಟಗಾರರು; ಮಿಂಚಿದ ವಿರುಷ್ಕಾ ಜೋಡಿ!
ಇದನ್ನು ಕಂಡ ಸಿಎಸ್ಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ, ರೋಹಿತ್ ಮಗಳು ಹಳದಿ ಬಣ್ಣದ ಉಡುಗೆ ಧರಿಸಿದ್ದಾಳೆ. ಆಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ಯಾನ್. ಹಿಟ್ಮ್ಯಾನ್ ಮಗಳು ನಮಗೋಸ್ಕರ ಚೆಂಡನ್ನು ಗ್ರೌಂಡ್ನಿಂದ ಆಚೆ ಅಟ್ಟಿದ್ದಾಳೆ ಎಂಬರ್ಥದಲ್ಲಿ ಟ್ವೀಟ್ ಮಾಡಿದೆ. ಈ ಮೂಲಕ ಸಮೈರಾ ನಮ್ಮ ತಂಡದ ಫ್ಯಾನ್ ಎಂದು ಸಿಎಸ್ಕೆ ತಮಾಷೆಯಾಗಿ ಹೇಳಿದೆ.
IND vs BAN: ಭಾರತ- ಬಾಂಗ್ಲಾದೇಶ ನಡುವೆ ಚೊಚ್ಚಲ ಡೇ ನೈಟ್ ಟೆಸ್ಟ್; ಎಲ್ಲಿ?, ಯಾವಾಗ?
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ಬಲಿಷ್ಠ ತಂಡಗಳಾಗಿವೆ. ಕಳೆದ ಆವೃತ್ತಿಯಲ್ಲಿ ಈ ಎರಡು ತಂಡ ಫೈನಲ್ಗೇರಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ