IPL: ಐಪಿಎಲ್‌ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಲಿ; ಪಂಜಾಬ್ ಫ್ರಾಂಚೈಸಿ ಮನವಿ

ಈ ಬಗ್ಗೆ ಸ್ಪಷ್ಟವಾಗಿ ವಾಡಿಯಾ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಯಾವುದೇ ಉದ್ಘಾಟನಾ ಕಾರ್ಯಕ್ರಮ ಇಲ್ಲದ ಕಾರಣ, ಅದರ ಬದಲಿಗೆ ಈ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯ ಮಾಡಿದ್ದಾರೆ.

Vinay Bhat | news18-kannada
Updated:November 8, 2019, 9:06 AM IST
IPL: ಐಪಿಎಲ್‌ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಲಿ; ಪಂಜಾಬ್ ಫ್ರಾಂಚೈಸಿ ಮನವಿ
ಟೀಂ ಇಂಡಿಯಾ ಆಟಗಾರರು
Vinay Bhat | news18-kannada
Updated: November 8, 2019, 9:06 AM IST
ಬೆಂಗಳೂರು (ನ. 08): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕೆಲವೇ ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ತಯಾರಿಯಲ್ಲಿ ಬ್ಯುಸಿಯಾಗಿದೆ. ಈ ನಡುವೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಐಪಿಎಲ್ ವೇಳೆ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಬಿಸಿಸಿಐಗೆ ವಿಶೇಷವಾಗಿ ಮನವಿ ಮಾಡಿದೆ.

ಪಂಜಾಬ್ ತಂಡದ ಮಾಲಿಕ ನೆಸ್ ವಾಡಿಯಾ, "ಅಂತಾರಾಷ್ಟ್ರೀಯ ಕ್ರಿಕೆಟ್​​ ಪಂದ್ಯಗಳು ಆರಂಭಗೊಳ್ಳುವುದಕ್ಕೂ ಮುನ್ನ ಸ್ಟೇಡಿಯಂನಲ್ಲಿ ರಾಷ್ಟ್ರಗೀತೆ ಹಾಕುವ ಸಂಪ್ರದಾಯವಿದೆ. ಇದು ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಇಲ್ಲ. ಐಪಿಎಲ್‌ ವೇಳೆಯೂ ರಾಷ್ಟ್ರಗೀತೆ ಹಾಕಿ ಎನ್ನುವುದು ನನ್ನ ಸಲಹೆ" ಎಂದಿದ್ದಾರೆ.

IND vs BAN: ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಹಿಟ್​​ಮ್ಯಾನ್​​; ಭಾರತಕ್ಕೆ 8 ವಿಕೆಟ್​ಗಳ ಅಮೋಘ ಜಯ

ಈ ಬಗ್ಗೆ ಸ್ಪಷ್ಟವಾಗಿ ವಾಡಿಯಾ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಯಾವುದೇ ಉದ್ಘಾಟನಾ ಕಾರ್ಯಕ್ರಮ ಇಲ್ಲದ ಕಾರಣ, ಅದರ ಬದಲಿಗೆ ಈ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯ ಮಾಡಿದ್ದಾರೆ.

ಸಾಮಾನ್ಯವಾಗಿ ಓಪನಿಂಗ್ ಸೆರೆಮನಿಗೆ ಬಾಲಿವುಡ್ ತಾರೆಯರು, ಗಾಯಕರು, ನೃತ್ಯ ಪಟುಗಳು ಹೀಗೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಹಾಜರಿರುತ್ತಾರೆ. ಇವರಿಗೆ ಕೋಟಿಗಟ್ಟಲೆ ಹಣ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಉದ್ಘಾಟನಾ ಸಮಾರಂಭ ರದ್ದು ಮಾಡಲು ಬಿಸಿಸಿಐ ತೀರ್ಮಾನಿಸಿದೆ.

IPL 2020: ಸ್ಟಾರ್ ಆಟಗಾರನನ್ನು ಕೈಬಿಡಲು ಮುಂದಾಗಿದೆಯ CSK..?; ಬದಲಿ ಆಟಗಾರನತ್ತ ಧೋನಿ ಟೀಂ ಚಿತ್ತ?

ಅಲ್ಲದೆ ಈ ಹಣದಲ್ಲಿ 11 ಕೋಟಿಯನ್ನು ಇಂಡಿಯನ್ ಆರ್ಮಿಗೆ ಮತ್ತು 7 ಕೋಟಿಯನ್ನು ಸಿಆರ್​​ಪಿಎಫ್​ಗೆ ಹಾಗೂ ನೌಕಾ ಮತ್ತು ವಾಯು ಸೇನೆಗೆ ತಲಾ ಒಂದು ಕೋಟಿ ಕೊಡಲು ಬಿಸಿಸಿಐ ನಿರ್ಧಾರಮಾಡಿದೆ ಎನ್ನಲಾಗಿದೆ. ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರಂತೆ.
Loading...

First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...