IPL 2019 Final: ಪೊಲಾರ್ಡ್​​​ ಮಾಡಿದ ಆ ಒಂದು ತಪ್ಪಿಗೆ ಬಿತ್ತು ಭಾರೀ ದಂಡ

IPL Final, MI vs CSK: ಐಪಿಎಲ್ ಫೈನಲ್​ನಲ್ಲಿ ಚೆನ್ನ​ ವಿರುದ್ಧ ಮುಂಬೈ 1 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಈ ಮಧ್ಯೆ ಮುಂಬೈ ಬ್ಯಾಟಿಂಗ್ ಮಾಡುವಾಗ ಪೊಲಾರ್ಡ್​​ ಅಂಪೈರ್ ನಿರ್ಧಾರಕ್ಕೆ ಗರಂ ಆದ ಘಟನೆ ನಡೆದಿದೆ.

ಕೀರೊನ್ ಪೊಲಾರ್ಡ್​

ಕೀರೊನ್ ಪೊಲಾರ್ಡ್​

  • News18
  • Last Updated :
  • Share this:
ನಿನ್ನೆ ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 1 ರನ್​ಗಳ ರೋಚಕ ಗೆಲುವು ಸಾಧಿಸಿದ್ದು, 4ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶೇನ್ ವಾಟ್ಸನ್​​ರ ಹೋರಾಟದ ಹೊರತಾಗಿಯು ಮುಂಬೈ ಬೌಲರ್​ಗಳ ಅಮೋಘ ಪ್ರದರ್ಶನದ ಫಲವಾಗಿ ಮುಂಬೈ ಇಂಡಿಯನ್ಸ್​​ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದೆ.

ಈ ಮಧ್ಯೆ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್ ಮಾಡುವಾಗ ಆಲ್ರೌಂಡರ್ ಕೀರೊನ್ ಪೊಲಾರ್ಡ್​​ ಅಂಪೈರ್ ನಿರ್ಧಾರಕ್ಕೆ ಗರಂ ಆದ ಘಟನೆ ನಡೆದಿದೆ. ಕೊನೆಯ ಓವರ್​ನ ಡ್ವೇನ್ ಬ್ರಾವೋ ಅವರ ಮೊದಲ ಎಸೆತ ವೈಡ್ ಆಗಿದ್ದರು ಪೊಲಾರ್ಡ್​​ ಕ್ರೀಸ್ ಕದಲಿದ್ದರಿಂದ ಅಂಪೈರ್ ವೈಡ್ ಕೊಡಲಿಲ್ಲ.

ಅಂತೆಯೆ 2ನೇ ಎಸೆತವೂ ಬೈಡ್ ಹಾಕಿದರು.  ಆದರೆಈ ಬಾರಿ ಪೊಲಾರ್ಡ್​ ಕ್ರೀಸ್​ನಿಂದ ಕದಲಲಿಲ್ಲ. ಆದರೆ ಅಂಪೈರ್ ವೈಡ್ ಕೂಡ ಕೊಡಲಿಲ್ಲ. ಈ ಸಂದರ್ಭ ಕೋಪದಲ್ಲಿ ಬ್ಯಾಟ್ ಅನ್ನು ಗಾಳಿಯಲ್ಲಿ ಮೇಲಕ್ಕೆ ಎಸೆದು ಕುಪಿತರಾದರು. ಮುಂದಿನ ಎಸೆತವನ್ನು ಬ್ರಾವೋ ಬಾಲ್ ಮಾಡುವ ಮುನ್ನವೇ ಪೊಲಾರ್ಡ್​​ ಕ್ರೀಸ್ ಬಿಟ್ಟು ವೈಡ್ ಲೈನ್ ಹತ್ತಿರ ನಡೆದರು, ಇದರಿಂದ ಗಲಿಬಿಲಿಗೊಂಡ ಬ್ರಾವೋ ಬಾಲ್ ಎಸೆತಯದೆ ಅರ್ಧದಲ್ಲೆ ನಿಂತರು. ಇದೆವೇಳೆ ಅಂಪೈರ್​ಗಳು ಪೊಲಾರ್ಡ್​ ಹತ್ತಿರ ಬಂದು ಮಾತಿನ ಚಕಮಕಿ ನಡೆದು ಎಚ್ಚರಿಕೆಯನ್ನು ನೀಡದರು.

ಇದನ್ನೂ ಓದಿ: IPL FINAL CSK vs MI: ಐಪಿಎಲ್​ನಲ್ಲಿ ಮತ್ತೆ ಫಿಕ್ಸಿಂಗ್​ ಭೂತ?; ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಚರ್ಚೆ

 ಹೀಗಾಗಿ ಪೊಲಾರ್ಡ್​​ ಅಂಪೈರ್​ ವಿರುದ್ಧ ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಪಂದ್ಯದ ಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿದೆ. ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಪೊಲಾರ್ಡ್,ಆಟಗಾರರು ಹಾಗೂ ತಂಡದ ಅಧಿಕಾರಿಗಳಿಗೆ ರೂಪಿಸಲಾಗಿರುವ ಐಪಿಎಲ್ ನೀತಿ ಸಂಹಿತೆ ಲೆವೆಲ್ 1 ಅಫೆನ್ಸ್ 2.8ನ್ನು ಪೊಲಾರ್ಡ್​​ ಉಲ್ಲಂಘಿಸಿದ್ದಾರೆ ಎಂದಿದ್ದಾರೆ.

First published: