IPL 2020: ಆರ್. ಅಶ್ವಿನ್ ಬದಲು ಕನ್ನಡಿಗ ಆಟಗಾರನ ಬರಮಾಡಿಕೊಂಡ ಪಂಜಾಬ್ ಕಿಂಗ್ಸ್

ಐಪಿಎಲ್ 2020, ಅಥವಾ 13ನೇ ಸೀಸನ್​ನ ಐಪಿಎಲ್ ಟೂರ್ನಿ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ. ಈಗ ಐಪಿಎಲ್ ಫ್ರಾಂಚೈಸಿಗಳ ಮಧ್ಯೆ ಆಟಗಾರರ ಟ್ರಾನ್ಸ್​ಫರ್ ಪ್ರಕ್ರಿಯೆ ಮುಗಿಯಲು ನವೆಂಬರ್ 14ರ ಗಡುವು ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಇನ್ನಷ್ಟು ಆಟಗಾರರ ಬದಲಾವಣೆಗಳ ಪ್ರಮಾಣ ಹೆಚ್ಚಾಗಬಹುದು.

Vijayasarthy SN | news18
Updated:November 8, 2019, 7:51 PM IST
IPL 2020: ಆರ್. ಅಶ್ವಿನ್ ಬದಲು ಕನ್ನಡಿಗ ಆಟಗಾರನ ಬರಮಾಡಿಕೊಂಡ ಪಂಜಾಬ್ ಕಿಂಗ್ಸ್
ಇನ್ನು ಭಾರತದ ಏಕದಿನ, ಟಿ-20 ತಂಡದಲ್ಲಿ ಸ್ಥಾನ ಸಿಗದಿರುವುದಕ್ಕೆ ಬೇಸರವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್, ಈ ವಿಚಾರಕ್ಕೆ ಜೀವನದಲ್ಲಿ ಎಂದೂ ಬೇಸರಪಟ್ಟುಕೊಳ್ಳುವುದಿಲ್ಲ. ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದರು.
  • News18
  • Last Updated: November 8, 2019, 7:51 PM IST
  • Share this:
ನವದೆಹಲಿ(ನ. 08): ಐಪಿಎಲ್ ತಂಡಗಳ ನಡುವೆ ಆಟಗಾರರ ವಿನಿಮಯ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪಂಜಾಬ್ ಕಿಂಗ್ಸ್ ಇಲವೆನ್ ತಂಡದಿಂದ ಆರ್. ಅಶ್ವಿನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿದೆ. ಅಶ್ವಿನ್ ಖರೀದಿಗೆ ಬದಲಾಗಿ ತನ್ನ ತಂಡದಿಂದ ಕರ್ನಾಟಕದ ಸ್ಪಿನ್ನರ್ ಜಗದೀಶ್ ಸುಚಿತ್ ಅವರನ್ನು ಪಂಜಾಬ್ ಕಿಂಗ್ಸ್​ಗೆ ನೀಡಿದೆ. ಈ ವರ್ಗಾವಣೆ ಒಪ್ಪಂದದಿಂದ ಪ್ರಕಾರ, ಆರ್. ಅಶ್ವಿನ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ 1.5 ಕೋಟಿ ಹೆಚ್ಚುವರಿ ಹಣವನ್ನು ಪಂಜಾಬ್ ತಂಡಕ್ಕೆ ನೀಡುತ್ತಿದೆ.

ಕಳೆದ ಸೀಸನ್​ನಲ್ಲಿ ಆರ್. ಅಶ್ವಿನ್ ಅವರನ್ನು ಪಂಜಾಬ್ ತಂಡ 7.6 ಕೋಟಿ ರೂ ಕೊಟ್ಟು ಖರೀದಿ ಮಾಡಿತ್ತು. ಈ ಬಾರಿಯ ಸೀಸನ್​ನಲ್ಲಿ ಅಶ್ವಿನ್​ಗೆ ಇಷ್ಟೇ ಹಣವನ್ನು ಡೆಲ್ಲಿ ಕ್ಯಾಪಿಟಲ್ಸ್​ನಿಂದ ಸಂಬಳವಾಗಿ ಸಿಗಲಿದೆ.

ಇದನ್ನೂ ಓದಿ: ನಾನು 6 ಬಾಲ್​ಗೆ 6 ಸಿಕ್ಸ್ ಬಾರಿಸಲಿದ್ದೆ, ಆದರೆ...; ಸೀಕ್ರೆಟ್ ಬಿಚ್ಚಿಟ್ಟ ರೋಹಿತ್ ಶರ್ಮಾ

ಇನ್ನು, ಜಗದೀಶ್ ಸುಚಿತ್ ಅವರು ಕಳೆದ ಸೀಸನ್​ನಲ್ಲಿ 20 ಲಕ್ಷ ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್​ಗೆ ಮಾರಾಟವಾಗಿದ್ದರು. ಇಷ್ಟೇ ಹಣ ತೆತ್ತು ಪಂಜಾಬ್ ತಂಡವು ಸುಚಿತ್ ಅವರನ್ನು ವರ್ಗ ಮಾಡಿಕೊಂಡಿದೆ.

ಎರಡು ವರ್ಷ ಪಂಜಾಬ್ ತಂಡವನ್ನು ಮುನ್ನಡೆಸಿದ್ದ ಆರ್. ಅಶ್ವಿನ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಡೆ ಹೋಗಲು ಮೊದಲೇ ನಿಶ್ಚಯಿಸಿದ್ದರೆನ್ನಲಾಗಿದೆ. ತನ್ನ ನಾಯಕತ್ವದಲ್ಲಿ ಪಂಜಾಬ್ ತಂಡವನ್ನು ಯಶಸ್ಸಿನತ್ತ ಮುನ್ನಡೆಸಲಾಗಲಿಲ್ಲ ಎಂಬ ಕೊರಗು ಅವರಲ್ಲಿತ್ತು. ಆದರೆ, ಅಶ್ವಿನ್ ಅವರನ್ನು ಕೈಬಿಡಲು ಪಂಜಾಬ್ ತಂಡಕ್ಕೂ ಇಷ್ಟವಿರಲಿಲ್ಲ. ಈ ತಂಡದ ಸಲಹೆಗಾರರಾಗಿರುವ ಅನಿಲ್ ಕುಂಬ್ಳೆ ಕೂಡ ಅಶ್ವಿನ್ ಮನವೊಲಿಸಲು ನಡೆಸಿದ ಯತ್ನ ಸಫಲವಾಗಲಿಲ್ಲ. ಅನಿವಾರ್ಯವಾಗಿ ಅಶ್ವಿನ್ ಅವರನ್ನು ಪಂಜಾಬ್ ತಂಡ ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ: IPL: ಐಪಿಎಲ್‌ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಲಿ; ಪಂಜಾಬ್ ಫ್ರಾಂಚೈಸಿ ಮನವಿ

ಅಶ್ವಿನ್ ಬದಲಾಗಿ ಪಂಜಾಬ್ ತಂಡಕ್ಕೆ ಬಂದಿರುವ ಜಗದೀಶ್ ಸುಚಿತ್ ಕರ್ನಾಟಕದ ಪ್ರತಿಭಾನ್ವಿತ ಸ್ಪಿನ್ನರ್. ಐಪಿಎಲ್​ನಲ್ಲಿ ಪದಾರ್ಪಣೆಯಾದಾಗ ಅವರು ಮಿಸ್ಟರಿ ಸ್ಪಿನ್ನರ್ ಆಗಿ ಎದುರಾಳಿ ಬ್ಯಾಟುಗಾರರ ಎದೆ ನಡುಗಿಸಿದ್ದರು. ಈಗಲೂ ಅವರು ಕರ್ನಾಟಕದ ರಣಜಿ ತಂಡದಲ್ಲಿ ಬಹುತೇಕ ಖಾಯಂ ಸದಸ್ಯರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅನಿಲ್ ಕುಂಬ್ಳೆ ಜೊತೆ ಕೆಲಸ ಮಾಡಿದ್ದ ಸುಚಿತ್ ಅವರಿಗೆ ಈಗ ಮತ್ತೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.ಇನ್ನು, ಆರ್. ಅಶ್ವಿನ್ ಅವರು ಚುಟುಕು ಕ್ರಿಕೆಟ್​ನಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ವಿಫಲವಾದರೂ ಅವರು ಎಂಥ ಸ್ಥಿತಿಯಲ್ಲೂ ಅಪಾಯಕಾರಿ ಬೌಲರ್ ಆಗಬಲ್ಲರು. ಐಪಿಎಲ್​ನಲ್ಲಿ ಬರೋಬ್ಬರಿ 125 ವಿಕೆಟ್ ಕಿತ್ತಿರುವ ಅವರ ಬೌಲಿಂಗ್ ಎಕನಾಮಿ 7ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ, ಅವರು ಯಾವುದೇ ತಂಡಕ್ಕೂ ಅಮೂಲ್ಯ ಕೊಡುಗೆ ನೀಡಬಲ್ಲರು. ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕೂಡ ಅಶ್ವಿನ್ ಬಗ್ಗೆ  ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ವಿಶ್ವ ದಾಖಲೆ ಉಡೀಸ್ ; ಈ ವಿಚಾರದಲ್ಲಿ ಭಾರತವೇ ನಂಬರ್ ಒನ್!

ಐಪಿಎಲ್ 2020, ಅಥವಾ 13ನೇ ಸೀಸನ್​ನ ಐಪಿಎಲ್ ಟೂರ್ನಿ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ. ಈಗ ಐಪಿಎಲ್ ಫ್ರಾಂಚೈಸಿಗಳ ಮಧ್ಯೆ ಆಟಗಾರರ ಟ್ರಾನ್ಸ್​ಫರ್ ಪ್ರಕ್ರಿಯೆ ಮುಗಿಯಲು ನವೆಂಬರ್ 14ರ ಗಡುವು ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಇನ್ನಷ್ಟು ಆಟಗಾರರ ಬದಲಾವಣೆಗಳ ಪ್ರಮಾಣ ಹೆಚ್ಚಾಗಬಹುದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading