IPL 2020: ಡೆಲ್ಲಿ ಪಾಲಾದ ಆರ್ ಅಶ್ವಿನ್; ಪಂಜಾಬ್​ಗೆ ಕನ್ನಡಿಗ ಸಾರಥಿ?

ಐಪಿಎಲ್ 2020ರಲ್ಲಿ ಬಿಸಿಸಿಐ ಸಾಕಷ್ಟು ಬದಲಾವಣೆ ತರಲು ಮುಂದಾಗಿದೆ. ಈಗಾಗಲೇ ಪವರ್ ಪ್ಲೇಯರ್ ಎಂಬ ಹೊಸ ನಿಯಮ ಅಳವಡಿಸಲು ಮುಂದಾಗಿದೆ. ಆದರೆ, ಇದು ಮುಂದಿನ ಆವೃತ್ತಿಯಿಂದ ಜಾರಿಗೆ ಬರುವುದು ಅನುಮಾನವಂತೆ.

Vinay Bhat | news18-kannada
Updated:November 6, 2019, 8:51 AM IST
IPL 2020: ಡೆಲ್ಲಿ ಪಾಲಾದ ಆರ್ ಅಶ್ವಿನ್; ಪಂಜಾಬ್​ಗೆ ಕನ್ನಡಿಗ ಸಾರಥಿ?
ಆರ್ ಅಶ್ವಿನ್ ಹಾಗೂ ಕೆ ಎಲ್ ರಾಹುಲ್
Vinay Bhat | news18-kannada
Updated: November 6, 2019, 8:51 AM IST
ಬೆಂಗಳೂರು (ನ. 06): 13ನೇ ಆವೃತ್ತಿಯ ಐಪಿಎಲ್​​ಗೆ ಎಲ್ಲ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಬಿಸಿಸಿಐ ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಹೀಗಿರುವಾಗ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್​ರನ್ನು ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಕೈಬಿಟ್ಟ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್​​​ ಖರೀದಿ ಮಾಡಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್​, ಅಶ್ವಿನ್ ಕೆಲ ದಿನಗಳ ಹಿಂದೆಯಷ್ಟೆ ನಮ್ಮ ತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಕೆಲವು ದಿನಗಳಲ್ಲಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.

2018ರ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಅಶ್ವಿನ್​ರನ್ನು 7.8 ಕೋಟಿಗೆ ಖರೀದಿ ಮಾಡಿತ್ತು. ಪಂಜಾಬ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್ 25 ವಿಕೆಟ್ ಪಡೆದಿದ್ದಾರೆ. ಇನ್ನು 2020ರ ಐಪಿಎಲ್​ನಲ್ಲಿ ಪಂಜಾಬ್ ತಂಡವನ್ನು ಕನ್ನಡಿಗ ಕೆ ಎಲ್ ರಾಹುಲ್ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.

ಭಾರತ- ಬಾಂಗ್ಲಾ ಡೇ ನೈಟ್ ಟೆಸ್ಟ್​​ನಲ್ಲಿ ಇದೇ ಮೊದಲ ಬಾರಿಗೆ ಕಾಮೆಂಟೇಟರ್ ಆಗಿ ಎಂಎಸ್ ಧೋನಿ

ಈ ಬಗ್ಗೆ ಮಾತನಾಡಿದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ, ರಾಹುಲ್‌ ನಾಯಕತ್ವ ಪಡೆಯುವ ಎಲ್ಲಾ ಸಾಧ್ಯತೆ ಇದೆ. ತಂಡದಲ್ಲಿನ ಅನುಭವಿ ಆಟಗಾರರ ಪೈಕಿ ಅವರೂ ಒಬ್ಬರು. ಸಾಕಷ್ಟು ಐಪಿಎಲ್ ಆಡಿದ ಅನುಭವ ಅವರಿಗಿದೆ. ಈ ವಿಚಾರವಾಗಿ ಸದ್ಯದಲ್ಲೇ ಸ್ಪಷ್ಟನೆ ನೀಡಲಿದ್ದೇವೆ ಎಂಬುದು ಕುಂಬ್ಳೆ ಮಾತು.

ಐಪಿಎಲ್ 2020ರಲ್ಲಿ ಬಿಸಿಸಿಐ ಸಾಕಷ್ಟು ಬದಲಾವಣೆ ತರಲು ಮುಂದಾಗಿದೆ. ಈಗಾಗಲೇ ಪವರ್ ಪ್ಲೇಯರ್ ಎಂಬ ಹೊಸ ನಿಯಮ ಅಳವಡಿಸಲು ಮುಂದಾಗಿದೆ. ಆದರೆ, ಇದು ಮುಂದಿನ ಆವೃತ್ತಿಯಿಂದ ಜಾರಿಗೆ ಬರುವುದು ಅನುಮಾನವಂತೆ.

ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ; ಮೌನ ಮುರಿದ ಪಾಕಿಸ್ತಾನ ಯುವ ಕ್ರಿಕೆಟಿಗ
Loading...

ಇನ್ನು ಕಳೆದ ಆವೃತ್ತಿಯಲ್ಲಿ ನೋ ಬಾಲ್ ತೊಂದರೆ ಸಾಕಷ್ಟು ಸುದ್ದಿ ಮಾಡಿತ್ತು. ಇದನ್ನು ಮನಗಂಡು ಪಂದ್ಯದ ವೇಳೆ ನೋ ಬಾಲ್ ವೀಕ್ಷಿಸಲು ವಿಶೇಷ ಅಂಪೈರ್​ನನ್ನು ನೇಮಿಸುತ್ತೇವೆ ಎಂದು ಬಿಸಿಸಿಐ ಹೇಳಿದೆ.

First published:November 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...