• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಐಪಿಎಲ್​ ಟೂರ್ನಿ ರದ್ದಾದರೆ ಭಾರತೀಯ ಕ್ರಿಕೆಟ್​ಗೆ ಆಗುವ ನಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ಮಾಹಿತಿ...

ಐಪಿಎಲ್​ ಟೂರ್ನಿ ರದ್ದಾದರೆ ಭಾರತೀಯ ಕ್ರಿಕೆಟ್​ಗೆ ಆಗುವ ನಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ಮಾಹಿತಿ...

ಈ ವೇಳಾಪಟ್ಟಿಯ ಪ್ರಕಾರ ಉದ್ಘಾಟನಾ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಟ ನಡೆಸಲಿವೆ.

ಈ ವೇಳಾಪಟ್ಟಿಯ ಪ್ರಕಾರ ಉದ್ಘಾಟನಾ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಟ ನಡೆಸಲಿವೆ.

IPL Match: ಮಾರ್ಚ್​ 29ರಂದು ನಡೆಯಬೇಕಾಗಿದ್ದ ಐಪಿಎಲ್​ ಪಂದ್ಯಾವಳಿಯನ್ನು ಕೊರೋನಾ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಈ ಪಂದ್ಯಾವಳಿಯನ್ನು ರದ್ದುಪಡಿಸುವ ಸಾಧ್ಯತೆ ಹೆಚ್ಚಾಗಿದೆ.

  • Share this:

    ವಿಶ್ವದ ಕ್ರಿಕೆಟ್​ ಪ್ರಿಯರೆಲ್ಲ ಅತ್ಯಂತ ಕಾತುರದಿಂದ ಕಾಯುವ ಐಪಿಎಲ್​ ಈ ವರ್ಷ ನಡೆಯುತ್ತಾ? ಇಲ್ವಾ? ಈ ಪ್ರಶ್ನೆಗೆ ಇನ್ನೂ ಖಚಿತವಾದ ಉತ್ತರ ಸಿಕ್ಕಿಲ್ಲ. ಕೊರೋನಾ ವೈರಸ್​​ ಭೀತಿಯಿಂದ ಈ ವರ್ಷ ಟೋಕಿಯೋದಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ ಪಂದ್ಯಾವಳಿಯನ್ನು ಕೂಡ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಐಪಿಎಲ್​ ಪಂದ್ಯಾವಳಿಗೆ ಅತಿಹೆಚ್ಚು ಪ್ರೇಕ್ಷಕರು ಸೇರುವ ಕಾರಣದಿಂದ ಐಪಿಎಲ್​ ರದ್ದುಗೊಳಿಸಬೇಕೆಂಬ ಒತ್ತಾಯವೂ ಕೇಳಿಬಂದಿತ್ತು. ಹಾಗೇನಾದರೂ ಒಂದುವೇಳೆ ಐಪಿಎಲ್ ರದ್ದಾದರೆ ಭಾರತೀಯ ಕ್ರಿಕೆಟ್​ಗೆ ಬರೋಬ್ಬರಿ 4,000 ಕೋಟಿ ರೂ. ನಷ್ಟವಾಗಲಿದೆ!


    ಕೊರೋನಾ ವೈರಸ್​ ಜಗತ್ತನ್ನು ವ್ಯಾಪಿಸಿರುವುದರಿಂದ ಒಂದೇ ಕಡೆ ಹೆಚ್ಚು ಜನರು ಸೇರಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಹೇಳಲಾಗುವ ಐಪಿಎಲ್​ಗೆ ಕೂಡ ಅಡ್ಡಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಇದರಿಂದಾಗಿ ಭಾರತೀಯ ಕ್ರಿಕೆಟ್​ಗೆ ಸುಮಾರು 4,000 ಕೋಟಿ ರೂ. ನಷ್ಟವಾಗಲಿ ಎನ್ನಲಾಗಿದೆ.


    ಇದನ್ನೂ ಓದಿ: Cricketer Banned: ಕ್ರೀಡಾ ಜಗತ್ತು ಸ್ತಬ್ಧವಾಗಿದ್ದರೂ ಕ್ರಿಕೆಟ್​ನಿಂದ 6 ವರ್ಷ ಬ್ಯಾನ್ ಆದ ಸ್ಟಾರ್ ಬ್ಯಾಟ್ಸ್​ಮನ್​


    ಮಾರ್ಚ್​ 29ರಂದು ನಡೆಯಬೇಕಾಗಿದ್ದ ಐಪಿಎಲ್​ ಪಂದ್ಯಾವಳಿಯನ್ನು ಕೊರೋನಾ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಈ ಪಂದ್ಯಾವಳಿಯನ್ನು ರದ್ದುಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಲ್, ಐಪಿಎಲ್​ ಪಂದ್ಯಾವಳಿಯಿಂದ ಬಿಸಿಸಿಐಗೆ ಉಂಟಾಗುವ ನಷ್ಟದ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಐಪಿಎಲ್​ ರದ್ದುಗೊಳಿಸಿದರೆ ಕಡಿಮೆಯೆಂದರೂ 40 ಬಿಲಿಯನ್ ರೂ (4 ಸಾವಿರ ಕೋಟಿ ರೂ) ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.


    ಐಪಿಎಲ್ ಈ ಬಾರಿ ಕ್ಯಾನ್ಸಲ್ ಆದಲ್ಲಿ ಇನ್ಸೂರೆನ್ಸ್ ಸಹ ಲಭಿಸಲ್ಲ. ಯುದ್ಧ ಅಥವಾ ಭಯೋತ್ಪಾದನೆ ಕಾರಣಕ್ಕೆ ರದ್ದಾದಲ್ಲಿ ಇನ್ಸೂರೆನ್ಸ್ ಲಭಿಸುತ್ತದೆ. ಆದರೆ, ಈ ರೀತಿಯ ಅಂದರೆ ಸಾಂಕ್ರಾಮಿಕ ರೋಗದ ರದ್ದತಿಗೆ ಇನ್ಸೂರೆನ್ಸ್ ಹೊಂದಿಲ್ಲ. ಇತ್ತೀಚೆಗೆ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಕೊರೋನಾದಿಂದ ರದ್ದುಗೊಂಡಿತ್ತು. ಈ ಟೂರ್ನಿಯು ಸಾಂಕ್ರಾಮಿಕ ರೋಗಕ್ಕೆ ಇನ್ಸೂರೆನ್ಸ್ ಹೊಂದಿದ್ದು, ಹೀಗಾಗಿ ಭಾರೀ ನಷ್ಟದಿಂದ ಪಾರಾಗಿತ್ತು.

    Published by:Sushma Chakre
    First published: