HOME » NEWS » Sports » CRICKET IPL CANCEL NA HO SPIKE IN COVID 19 CASES IN INDIA HAS DAMPENED THE SPIRITS OF DESI CRICKET FANS STG MAK

IPL 2021: ಕೋವಿಡ್‌ ಪ್ರಕರಣಗಳ ಹೆಚ್ಚಳ: ಕೊನೆಯ ಕ್ಷಣದಲ್ಲಿ ಐಪಿಎಲ್‌ ರದ್ದಾಗದಿರಲಿ ಎಂದು ಅಭಿಮಾನಿಗಳ ಪ್ರಾರ್ಥನೆ..!

ಐಪಿಎಲ್‌ ಬೇಡ ಎನ್ನುವ ಅಭಿಪ್ರಾಯವೂ ಇದೆಇನ್ನೊಂದೆಡೆ, ಕೋವಿಡ್‌ - 19 ಪ್ರಕರಣಗಳನ್ನು ತಗ್ಗಿಸಲು ಇಂದಿನಿಂದ ಆರಂಭವಾಗಲಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಸ್ಥಗಿತಗೊಳಿಸುವ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸಿದ್ದಾರೆ.

news18-kannada
Updated:April 9, 2021, 5:43 PM IST
IPL 2021: ಕೋವಿಡ್‌ ಪ್ರಕರಣಗಳ ಹೆಚ್ಚಳ: ಕೊನೆಯ ಕ್ಷಣದಲ್ಲಿ ಐಪಿಎಲ್‌ ರದ್ದಾಗದಿರಲಿ ಎಂದು ಅಭಿಮಾನಿಗಳ ಪ್ರಾರ್ಥನೆ..!
Ipl 2021
  • Share this:
ಐಪಿಎಲ್‌ 2021 ಇನ್ನೇನು ಕೆಲ ಹೊತ್ತಲ್ಲೇ ಆರಂಭವಾಗಲಿದೆ. ಆದರೂ, ದೇಶದಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆತಂಕಕ್ಕೊಳಗಾಗುತ್ತಿದ್ದಾರೆ. ಕೊರೊನಾ ವೈರಸ್‌ ಹೆಚ್ಚುವುದನ್ನು ತಡೆಗಟ್ಟಲು ಭಾರತದ ಹಲವಾರು ಭಾಗಗಳಲ್ಲಿ ರಾಜ್ಯ ಸರ್ಕಾರಗಳು ತಾಜಾ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳನ್ನು ಹಾಕಲಾಗಿದೆ. ನಿರ್ಬಂಧಗಳನ್ನು ಘೋಷಿಸಿರುವುದು ಮತ್ತು ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಐಪಿಎಲ್ 2021 ರ ಬಹುನಿರೀಕ್ಷಿತ ಋತುಮಾನಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು ಕೆಲವು ದಿನಗಳಿಂದ ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ, ಐಪಿಎಲ್‌ ಆಡುವ ಕ್ರಿಕೆಟಿಗರಿಗೆ ಸೋಂಕು ತಗುಲುತ್ತಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. 

ಕೆಲವು ಆಟಗಾರರ ಜೊತೆಗೆ, ಸ್ಟೇಡಿಯಂನ ಸಿಬ್ಬಂದಿ  ಮತ್ತು ವಿವಿಧ ತಂಡಗಳ ಸದಸ್ಯರು ಕೊರೊನಾ ಪಾಸಿಟಿವ್‌ಗೊಳಗಾಗಿದ್ದಾರೆ. ಅವುಗಳಲ್ಲಿ ಹೆಚ್ಚಿನವರು ಬೇಗನೇ ಚೇತರಿಸಿಕೊಂಡಿದ್ದರೂ ಸಹ  ಅನೇಕ ಪ್ರಕರಣಗಳು ಈಗಾಗಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಡೆಯಬೇಕೋ ಬೇಡವೋ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಂದ್ಯಾವಳಿಯ ಸ್ಥಳಗಳಲ್ಲಿ ಒಂದಾದ ಮುಂಬೈ ಕೊರೊನಾ ಸಾಂಕ್ರಾಮಿಕದಿಂದ ಭಾರತದ ಅತಿ ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿ ಒಂದಾಗಿದೆ.

ಆದರೆ, ಅಲ್ಲಿಂದ ಪಂದ್ಯಗಳನ್ನು ಸ್ಥಳಾಂತರಿಸಲು ಭಾರತೀಯ ಕ್ರಿಕೆಟ್‌ ಮಂಡಳಿ ನಿರಾಕರಿಸಿದೆ.  ಇದರೊಂದಿಗೆ, ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕವೂ ಹಲವರಲ್ಲಿ ಕಾಡುತ್ತಿದೆ.

ಪಂದ್ಯಾವಳಿಯ ಅಭಿಮಾನಿಗಳು ಮತ್ತು ಅನುಯಾಯಿಗಳು ಕಳೆದ ಕೆಲವು ದಿನಗಳಿಂದ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಐಪಿಎಲ್ 2021 ಯಾವುದೇ ಅಡೆತಡೆಯಿಲ್ಲದೆ ಪ್ರಾರಂಭವಾಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಅಭಿಮಾನಿಗಳ ಆತಂಕ, ಪ್ರಾರ್ಥನೆಯ ಈ ಟ್ವೀಟ್‌ಗಳು ನೋಡಿ..







ಐಪಿಎಲ್‌ ಬೇಡ ಎನ್ನುವ ಅಭಿಪ್ರಾಯವೂ ಇದೆಇನ್ನೊಂದೆಡೆ, ಕೋವಿಡ್‌ - 19 ಪ್ರಕರಣಗಳನ್ನು ತಗ್ಗಿಸಲು ಇಂದಿನಿಂದ ಆರಂಭವಾಗಲಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಸ್ಥಗಿತಗೊಳಿಸುವ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸಿದ್ದಾರೆ.  ಏಪ್ರಿಲ್ 9 ರಂದು  ಪಂದ್ಯಾವಳಿ ಪ್ರಾರಂಭವಾಗಲಿದ್ದು, ಮೇ 30 ರಂದು ಅಹಮದಾಬಾದ್‌ನ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ - ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಒದಿ: IPL 2021: CSK ತಂಡಕ್ಕೆ ಎಂಟ್ರಿ ಕೊಟ್ಟ ಆಸ್ಟ್ರೇಲಿಯಾ ವೇಗಿ..!

8 ತಂಡಗಳು ಆರು ನಗರಗಳಲ್ಲಿ ಆಡಲಿದ್ದು, ಪ್ರತಿ ತಂಡವು ನಾಲ್ಕು ಸ್ಥಳಗಳಲ್ಲಿ ನಿರ್ಧರಿಸಿದ ಪಂದ್ಯಗಳಲ್ಲಿ ಆಡಲಿದ್ದಾರೆ.  ಈ ಸಮಯದಲ್ಲಿ, ಯಾವುದೇ ತಂಡಕ್ಕೆ ತವರಿನ ಅನುಕೂಲವಿಲ್ಲ. ಏಕೆಂದರೆ ಯಾವುದೇ ಫ್ರಾಂಚೈಸಿಗಳು ತಮ್ಮ ತವರಿನ ಕ್ರೀಡಾಂಗಣದಲ್ಲಿ ಆಡುತ್ತಿಲ್ಲ. ಒಟ್ಟು 56 ಪಂದ್ಯಗಳನ್ನು 8 ತಂಡಗಳು ಆಡಲಿವೆ.
Published by: MAshok Kumar
First published: April 9, 2021, 5:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories