IPL 2020: ಇಬ್ಬರು ಸ್ಟಾರ್ ಆಟಗಾರರು ಔಟ್; 2 ಸ್ಫೋಟಕ ಬ್ಯಾಟ್ಸ್​ಮನ್ಸ್​ ಇನ್; ಯಾರು ಗೊತ್ತಾ?

ಈ ನಡುವೆ ಇಬ್ಬರು ಸ್ಟಾರ್ ಆಟಗಾರರು ನಾವು 2020 ಐಪಿಎಲ್​​ಗೆ ಲಭ್ಯವಿಲ್ಲ ಎಂದು ಹೇಳಿ ಹಿಂದೆಸರಿದಿದ್ದಾರೆ. ಆಸ್ಟ್ರೇಲಿಯಾದ ಘಾತಕ ವೇಗಿ ಮಿಚೆಲ್ ಸ್ಟಾರ್ಕ್ ಮುಂದಿನ ಆವೃತ್ತಿಯ ಐಪಿಎಲ್ ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

news18-kannada
Updated:December 4, 2019, 12:53 PM IST
IPL 2020: ಇಬ್ಬರು ಸ್ಟಾರ್ ಆಟಗಾರರು ಔಟ್; 2 ಸ್ಫೋಟಕ ಬ್ಯಾಟ್ಸ್​ಮನ್ಸ್​ ಇನ್; ಯಾರು ಗೊತ್ತಾ?
ಇನ್ನೂ ಇದೇ ತಿಂಗಳು ಮಾರ್ಚ್ 29 ರಂದು ಆರಂಭವಾಗ ಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಮಾರಕ ಕೊರೋನಾ ವೈರಸ್ನ ಕಬಂದಬಾಹುಗಳು ಭಾರತಕ್ಕೂ ವಿಸ್ತರಿಸಿದ ಕಾರಣ ಐಪಿಎಲ್ನ ಎಲ್ಲಾ ಪಂದ್ಯಗಳನ್ನು ಏ. 15 ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
  • Share this:
ಬೆಂಗಳೂರು (ಡಿ. 04): ವರ್ಣರಂಜಿತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ತಯಾರಿ ಆರಂಭವಾಗಿದೆ. ಹರಾಜು ಪ್ರಕ್ರಿಯೆ ಇದೇ ತಿಂಗಳ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಬಿಡ್ಡಿಂಗ್​ನಲ್ಲಿ ಭಾಗಿಯಾಗುತ್ತಿರುವ ಆಟಗಾರರ ಮೂಲಬೆಲೆ ಪ್ರಕಟವಾಗಿದೆ.

ಐಪಿಎಲ್‌ನ ಒಟ್ಟು 8 ತಂಡಗಳಲ್ಲಿ 73 ಸ್ಥಾನಗಳು ಮಾತ್ರ ಖಾಲಿಯಾಗಿದೆ. ಈ ಸ್ಥಾನಕ್ಕೆ ಬರೊಬ್ಬರಿ 971 ಆಟಗಾರರು ಪೈಪೋಟಿ ನಡೆಸಲಿದ್ದಾರೆ. ಇದರಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ 19 ಆಟಗಾರರಿದ್ದಾರೆ. ಅಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿ ಆಡಿರುವ 634 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

 
ಭಾರತಕ್ಕೆ ಬಂದಿಳಿದ ವಿಂಡೀಸ್ ಆಟಗಾರರು; ಸರಣಿ ಆರಂಭಕ್ಕೂ ಮುನ್ನ ಎಚ್ಚರಿಕೆ ನೀಡಿದ ಪೊಲಾರ್ಡ್​

ಇನ್ನು ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ 60 ವಿದೇಶಿ ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ 258 ವಿದೇಶಿ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಬಿನ್ ಉತ್ತಪ್ಪ ಮೂಲ ಬೆಲೆ  1.5 ಕೋಟಿ ರೂ. ಆಗಿದ್ದು ಈ ಪಟ್ಟಿಯಲ್ಲಿ ಬೃಹತ್ ಮೊತ್ತವನ್ನು ಡಿಮ್ಯಾಂಡ್ ಮಾಡಿರುವುದು ಏಕೈಕ ಭಾರತೀಯ ಕ್ರಿಕೆಟಿಗರಾಗಿದ್ದಾರೆ.

ಈ ನಡುವೆ ಇಬ್ಬರು ಸ್ಟಾರ್ ಆಟಗಾರರು ನಾವು 2020 ಐಪಿಎಲ್​​ಗೆ ಲಭ್ಯವಿಲ್ಲ ಎಂದು ಹೇಳಿ ಹಿಂದೆಸರಿದಿದ್ದಾರೆ. ಆಸ್ಟ್ರೇಲಿಯಾದ ಘಾತಕ ವೇಗಿ ಮಿಚೆಲ್ ಸ್ಟಾರ್ಕ್ ಮುಂದಿನ ಆವೃತ್ತಿಯ ಐಪಿಎಲ್ ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

(VIDEO): ಎಂಎಸ್​ಎಲ್​ನಲ್ಲಿ ಮಿ. 360 ಮ್ಯಾಜಿಕ್; ಎಬಿಡಿಯ ಆ ಒಂದು ಹೊಡೆತ ಹೇಗಿತ್ತು ಗೊತ್ತಾ?

2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸ್ಟಾರ್ಕ್ 2018ರಲ್ಲಿ 9.4 ಕೋಟಿ ರೂಪಾಯಿ ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹರಾಜಾಗಿದ್ದರು. ಆದರೆ, ಸತತ ಗಾಯದ ಸಮಸ್ಯೆಯಿಂದ ಬಳುತ್ತಿರುವ ಸ್ಟಾರ್ಕ್ ಕಳೆದ ಐಪಿಎಲ್ ಕೂಡಾ ತಪ್ಪಿಸಿಕೊಂಡಿದ್ದರು. ಸದ್ಯ ಈ ಬಾರಿ ಕೂಡ ಗಾಯದ ಸಮಸ್ಯೆಯಿಂದ ಐಪಿಎಲ್​ನಿಂದ ದೂರ ಉಳಿಯುವುದಾಗಿ ಸ್ಟಾರ್ಕ್ ತಿಳಿಸಿದ್ದಾರೆ.

ಇನ್ನು ಇವರ ಜೊತೆ ಇಂಗ್ಲೆಂಡ್ ಟೆಸ್ಟ್​ ತಂಡದ ನಾಯಕ ಜೋ ರೂಟ್ ಕೂಡ ತಾನು ಈ ಬಾರಿಯ ಐಪಿಎಲ್​ನಲ್ಲಿ ಆಡಲ್ಲ ಎಂದು ಹೇಳಿದ್ದಾರೆ.

ಒಬ್ಬರು ಪ್ರಮುಖ ಆಟಗಾರರು ಹೊರಗುಳಿದ ಆದ ಬೆನ್ನಲ್ಲೆ ಮತ್ತಿಬ್ಬರು ಸ್ಟಾರ್ ಆಟಗಾರರು ನಾವು ಐಪಿಎಲ್​ಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರರಾದ ಗ್ಲೆನ್ ಮ್ಯಾಕ್ಸ್​ವೆಲ್​ ಹಾಗೂ ಆ್ಯರೋನ್ ಫಿಂಚ್ ಈ ಬಾರಿಯ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಆರ್​ಸಿಬಿಯಲ್ಲಿ ಕಳಪೆ ಪ್ರದರ್ಶನ; ಆದ್ರೆ, ಬೇರೆ ತಂಡಕ್ಕೋಗಿ ಕಪ್ ಎತ್ತಿಹಿಡಿದರು ಈ ಆಟಗಾರರು!

ಫಿಂಚ್ ಹಾಗೂ ಮ್ಯಾಕ್ಸ್​ವೆಲ್​ ವಿಶ್ವಕಪ್ ಮತ್ತು ಆ್ಯಶಸ್ ಸರಣಿ ಇದ್ದ ಕಾರಣ 12ನೇ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದರು. ಸದ್ಯ ಈ ಬಾರಿ ಇಬ್ಬರೂ ಆಟಗಾರರು ಮತ್ತೆ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಿದ್ದಾರೆ. ಅಲ್ಲದೆ ಮ್ಯಾಕ್ಸ್​ವೆಲ್​ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದ್ದು, ಇವರ ಮೂಲ ಬೆಲೆ 2 ಕೋಟಿ ನಿಗದಿ ಪಡಿಸಲಾಗಿದೆ.

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading