HOME » NEWS » Sports » CRICKET IPL AUCTION 2021 WHEN AND WHERE TO WATCH IPL AUCTION ON TV ONLINE LIVE STREAMING DETAILS ZP

IPL 2021 Auction: ಐಪಿಎಲ್ ಹರಾಜು ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ನೇರ ಪ್ರಸಾರ? ಇಲ್ಲಿದೆ ಮಾಹಿತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಸ್ತುತ ಆಟಗಾರರ ಸಂಖ್ಯೆ ಆಟಗಾರರ ಸಂಖ್ಯೆ 14. ಇನ್ನು ಆರ್​ಸಿಬಿ ಬಳಿ 35.90 ಕೋಟಿ ರೂ. ಇದ್ದು, ಒಟ್ಟು 11 ಆಟಗಾರರನ್ನು ಖರೀದಿಸುವ ಅವಕಾಶವಿದೆ.

news18-kannada
Updated:February 17, 2021, 9:59 PM IST
IPL 2021 Auction: ಐಪಿಎಲ್ ಹರಾಜು ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ನೇರ ಪ್ರಸಾರ? ಇಲ್ಲಿದೆ ಮಾಹಿತಿ
IPL
  • Share this:
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2021 Auction) 14 ನೇ ಸೀಸನ್​ ಹರಾಜು ಫೆಬ್ರವರಿ 18 ರಂದು ನಡೆಯಲಿದೆ. ಈ ಬಾರಿ ಮಿನಿ ಹರಾಜು ನಡೆಯುವುದರಿಂದ ಬಿಡ್ಡಿಂಗ್ ಕಾರ್ಯಕ್ರಮವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಲಿದೆ. ಅಂದರೆ ಐದರಿಂದ ಆರು ಗಂಟೆಗಳಲ್ಲಿ ಹರಾಜು ಪ್ರಕ್ರಿಯೆಗಳು ಕೊನೆಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ 10 ಅಥವಾ 11 ರಿಂದ ಐಪಿಎಲ್​ ಟೂರ್ನಿಗೆ ಚಾಲನೆ ದೊರೆಯಲಿದೆ.

ಐಪಿಎಲ್ 2021 ಹರಾಜು ಸಮಯ ಮತ್ತು ಸ್ಥಳ:

ಚೆನ್ನೈನಲ್ಲಿ ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ ಮಾಲೀಕರು ಹರಾಜಿನಲ್ಲಿ ಭಾಗವಹಿಸಲು ಕೋವಿಡ್-19 ನೆಗೆಟಿವ್ ವರದಿಯನ್ನು ಸಲ್ಲಿಸಬೇಕಾಗುತ್ತದೆ.

ಐಪಿಎಲ್ 2021 ಹರಾಜು ನೇರ ಪ್ರಸಾರವಾಗುತ್ತದೆಯೇ?
ಹೌದು, ಹರಾಜು ಪ್ರಕ್ರಿಯೆಯು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ. ಐಪಿಎಲ್ 2021 ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ ಹಾಟ್​ಸ್ಟಾರ್ ಮೂಲಕ ಕೂಡ ವೀಕ್ಷಿಸಬಹುದು.

ಹರಾಜಿನಲ್ಲಿ ಎಷ್ಟು ಆಟಗಾರರು ಇದ್ದಾರೆ?
ಈ ಬಾರಿಯ ಹರಾಜಿನಲ್ಲಿ 61 ಸ್ಥಾನಗಳಿಗೆ 292 ಆಟಗಾರರು ಸ್ಪರ್ಧಿಸಲಿದ್ದಾರೆ.ಪ್ರತಿ ತಂಡಗಳು ಎಷ್ಟು ಮೊತ್ತಕ್ಕೆ ಬಿಡ್ಡಿಂಗ್ ನಡೆಸಬಹುದು?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 18. ಹಾಗೆಯೇ ಸಿಎಸ್​ಕೆ ಬಳಿ 22.90 ಕೋಟಿ ರೂ. ಇದ್ದು 7 ಆಟಗಾರರನ್ನು ಖರೀದಿಸಬಹುದು.

ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 19. ಹಾಗೆಯೇ ಕ್ಯಾಪಿಟಲ್ಸ್​ ಬಳಿ 12.90 ಕೋಟಿ ರೂ. ಲಭ್ಯವಿದ್ದು, ಈ ಮೂಲಕ 6 ಆಟಗಾರರನ್ನು ಖರೀದಿಸಬಹುದು.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 16. ಅಲ್ಲದೆ 53.20 ಕೋಟಿ ಪಂಜಾಬ್ ತಂಡದ ಬಳಿಯಿದ್ದು, ಈ ಮೂಲಕ 9 ಆಟಗಾರರನ್ನು ಖರೀದಿಸುವ ಅವಕಾಶವಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 17. ಹಾಗೆಯೇ ಕೆಕೆಆರ್ ಬಳಿ 10.75 ಕೋಟಿ ರೂ ಲಭ್ಯವಿದ್ದು, ಅದರಂತೆ 8 ಆಟಗಾರರನ್ನು ಖರೀದಿಸಬಹುದಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 18. ಇನ್ನು ಮುಂಬೈ ಬಳಿಯಿರುವ ಮೊತ್ತ 15.35 ಕೋಟಿ ರೂ. ಈ ಹಣದಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸುವ ಅವಕಾಶವಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 17. ಹಾಗೆಯೇ 34.85 ಕೋಟಿ ಹೊಂದಿರುವ ರಾಜಸ್ಥಾನ್ 8 ಆಟಗಾರರನ್ನು ಖರೀದಿಸಬಹುದು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಸ್ತುತ ಆಟಗಾರರ ಸಂಖ್ಯೆ 22. ಹಾಗೆಯೇ ಫ್ರಾಂಚೈಸಿ ಬಳಿ 10.75 ಕೋಟಿ ರೂ. ಉಳಿದಿದ್ದು, 3 ಆಟಗಾರರನ್ನು ಖರೀದಿಸಬಹುದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಸ್ತುತ ಆಟಗಾರರ ಸಂಖ್ಯೆ ಆಟಗಾರರ ಸಂಖ್ಯೆ 14. ಇನ್ನು ಆರ್​ಸಿಬಿ ಬಳಿ 35.90 ಕೋಟಿ ರೂ. ಇದ್ದು, ಒಟ್ಟು 11 ಆಟಗಾರರನ್ನು ಖರೀದಿಸುವ ಅವಕಾಶವಿದೆ.
Published by: zahir
First published: February 17, 2021, 9:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories