news18-kannada Updated:February 19, 2021, 6:36 PM IST
arjun
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ IPL ಎಂಟ್ರಿ ಗುರುವಾರ ಅಧಿಕೃತಗೊಂಡಿದೆ. ಚೆನ್ನೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅರ್ಜುನ್ರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ. ಮೂಲ ಬೆಲೆ 20 ಲಕ್ಷ ರೂ. ಘೋಷಿಸಿದ್ದ ಸಚಿನ್ ಪುತ್ರನನ್ನು ಖರೀದಿಸಲು ಇತರೆ ಯಾವುದೇ ಫ್ರಾಂಚೈಸಿ ಪೈಪೋಟಿ ನಡೆಸಿರಲಿಲ್ಲ. ಹೀಗಾಗಿ ಮೂಲಬೆಲೆಯಲ್ಲೇ ಅರ್ಜುನ್ ಮುಂಬೈ ಪಾಲಾದರು.
ಇನ್ನು ಐಪಿಎಲ್ನಲ್ಲಿ ಅವಕಾಶ ನೀಡಿದಕ್ಕಾಗಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಎರಡು-ಮೂರು ಸೀಸನ್ಗಳಲ್ಲಿ ಮುಂಬೈ ತಂಡದ ನೆಟ್ ಬೌಲರ್ ಆಗಿ ಅರ್ಜುನ್ ಕಾಣಿಸಿಕೊಂಡಿದ್ದರು. ಹೀಗಾಗಿ ಅರ್ಜುನ್ ಸೇರ್ಪಡೆಯನ್ನು " ವಾಂಖೆಡೆ ಸ್ಟೇಡಿಯಂನ ಬಾಲ್ ಬಾಯ್, ಕಳೆದ ಸೀಸನ್ನ ನೆಟ್ ಬೌಲರ್...ಇದೀಗ ತಂಡದ ಆಟಗಾರ ಎಂದು ಮುಂಬೈ ಇಂಡಿಯನ್ಸ್ ಟ್ವಿಟರ್ನಲ್ಲಿ ಬರೆದುಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಅರ್ಜುನ್ "ನಾನು ಬಾಲ್ಯದಿಂದಲೂ ಮುಂಬೈ ಇಂಡಿಯನ್ಸ್ ತಂಡ ದೊಡ್ಡ ಅಭಿಮಾನಿ. ಈ ತಂಡದ ಪರ ಆಡುವುದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ಮೇಲೆ ವಿಶ್ವಾಸ ತೋರಿಸಿದ್ದಕ್ಕಾಗಿ ತರಬೇತುದಾರರು, ಕೋಚಿಂಗ್ ಸಿಬ್ಬಂದಿ ಮತ್ತು ತಂಡದ ಮಾಲೀಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಜೂನಿಯರ್ ತೆಂಡೂಲ್ಕರ್ ತಿಳಿಸಿದ್ದಾರೆ.
ಇತ್ತ ಅರ್ಜುನ್ ತೆಂಡೂಲ್ಕರ್ ಖರೀದಿಗೆ ಬಗ್ಗೆ ಸ್ವಜನ ಪಕ್ಷಪಾತ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ಕೋಚ್ ಮಹೇಲ ಜಯವರ್ಧನೆ, ಅರ್ಜುನ್ ಅವರು ಕಳೆದ ಕೆಲ ವರ್ಷಗಳ ಕಾಲ ನೆಟ್ ಬೌಲರ್ ಆಗಿ ಬಹಳ ಪರಿಶ್ರಮಪಟ್ಟಿದ್ಧಾರೆ. ಯುಎಇಯಲ್ಲಿ ನಿಜಕ್ಕೂ ಶ್ರಮ ಹಾಕಿದ್ದಾರೆ.
ನಾವು ಪ್ರತಿಭೆಯನ್ನ ಪರಿಗಣಿಸಿಯೇ ಆಯ್ಕೆ ಮಾಡಿದ್ದು. ತಂದೆ ಸಚಿನ್ ಹೆಸರು ಅರ್ಜುನ್ ಜೊತೆಗೆ ಅಂಟಿಕೊಂಡಿರುವುದು ಹೌದು. ಆದರೆ, ಅರ್ಜುನ್ ತೆಂಡೂಲ್ಕರ್ ಅದೃಷ್ಟಕ್ಕೆ ಈತ ಬ್ಯಾಟ್ಸ್ಮನ್ ಆಗದೇ ಬೌಲರ್ ಆಗಿದ್ದಾರೆ. ಅರ್ಜುನ್ ಎಂಥ ಬೌಲರ್ ಎಂದು ಸಚಿನ್ ಹೆಮ್ಮೆ ಪಡಬಹುದು ಎಂದು ಮಾಜಿ ಶ್ರೀಲಂಕಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಡ ಆದ ಮಹೇಲಾ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್
Published by:
zahir
First published:
February 19, 2021, 6:36 PM IST